ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಬಳೆ ತೊಡಬೇಕೆಂದು ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಸಾಧ್ವಿ ಪ್ರಜ್ಞಾ ಸಿಂಗ್ಗೆ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ ಸಾಧ್ವಿ ಪ್ರಜ್ಞಾ ಸಿಂಗ್ ಅಂತಹ ಭಯೋತ್ಪಾದಕ ಹಿನ್ನೆಲೆಯುಳ್ಳ ಜನರನ್ನು ಶಾಸನ ಸಭೆಗೆ ಕಳಿಸಲು ಟಿಕೆಟ್ ನೀಡಿರುವ ಬಿಜೆಪಿಯವರು ದೇಶದ ಹಿತಕ್ಕೆ ವಿರುದ್ಧವಾಗಿದ್ದಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದಾಗಿದೆ’ ಎಂದಿದ್ದಾರೆ.
-
ನಾಥೂರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ ಸಾಧ್ವಿ ಪ್ರಗ್ಯಾ ಅಂತಹ ಭಯೋತ್ಪಾದಕ ಹಿನ್ನಲೆ ಉಳ್ಳ ಜನರನ್ನು ಶಾಸನ ಸಭೆಗೆ ಕಳಿಸಲು ಟಿಕೆಟ್ ನೀಡಿರುವ@BJP4India ದವರು
— Dinesh Gundu Rao / ದಿನೇಶ್ ಗುಂಡೂರಾವ್ (@dineshgrao) May 16, 2019 " class="align-text-top noRightClick twitterSection" data="
ದೇಶದ ಹಿತಕ್ಕೆ ಮತ್ತು ಜೀವಪರತೆ ವಿರುದ್ಧವಾಗಿದ್ದಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬಹುದಾಗಿದೆ.
">ನಾಥೂರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ ಸಾಧ್ವಿ ಪ್ರಗ್ಯಾ ಅಂತಹ ಭಯೋತ್ಪಾದಕ ಹಿನ್ನಲೆ ಉಳ್ಳ ಜನರನ್ನು ಶಾಸನ ಸಭೆಗೆ ಕಳಿಸಲು ಟಿಕೆಟ್ ನೀಡಿರುವ@BJP4India ದವರು
— Dinesh Gundu Rao / ದಿನೇಶ್ ಗುಂಡೂರಾವ್ (@dineshgrao) May 16, 2019
ದೇಶದ ಹಿತಕ್ಕೆ ಮತ್ತು ಜೀವಪರತೆ ವಿರುದ್ಧವಾಗಿದ್ದಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬಹುದಾಗಿದೆ.ನಾಥೂರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ ಸಾಧ್ವಿ ಪ್ರಗ್ಯಾ ಅಂತಹ ಭಯೋತ್ಪಾದಕ ಹಿನ್ನಲೆ ಉಳ್ಳ ಜನರನ್ನು ಶಾಸನ ಸಭೆಗೆ ಕಳಿಸಲು ಟಿಕೆಟ್ ನೀಡಿರುವ@BJP4India ದವರು
— Dinesh Gundu Rao / ದಿನೇಶ್ ಗುಂಡೂರಾವ್ (@dineshgrao) May 16, 2019
ದೇಶದ ಹಿತಕ್ಕೆ ಮತ್ತು ಜೀವಪರತೆ ವಿರುದ್ಧವಾಗಿದ್ದಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬಹುದಾಗಿದೆ.
ಶೋಭಾ ವಿರುದ್ಧ ಆಕ್ರೋಶ:
ಸಿದ್ದರಾಮಯ್ಯಗೆ ಬಳೆ ತೊಟ್ಟುಕೊಳ್ಳಿ ಎಂದಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ‘ಒಬ್ಬ ಮಹಿಳೆ ಆಗಿ ಬಳೆ ತೊಟ್ಟ ಮಹಿಳೆ ದೌರ್ಬಲ್ಯದ ಸಂಕೇತ ಎಂದು ಬಿಂಬಿಸುವುದು ಮಹಿಳೆಯರನ್ನ ಅವಮಾನಿಸಿದ ಹಾಗೆ. ಇಂತಹ ಹೇಳಿಕೆ ಶೋಭಾ ಕರಂದ್ಲಾಜೆ ಅವರಿಗೆ ಶೋಭೆ ತರುವುದಿಲ್ಲ’ ಎಂದಿದ್ದಾರೆ.