ETV Bharat / state

ದಿನೇಶ್‌ ಗುಂಡೂರಾವ್‌ ಹೈಕಮಾಂಡ್‌ ಜತೆ ಮಾತಾಡಲಿ.. ಮಾಜಿ ಸಚಿವ ಡಿಕೆಶಿ

author img

By

Published : Jan 15, 2020, 3:28 PM IST

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನೀಡಿರುವ ರಾಜೀನಾಮೆ ಹಿಂದಕ್ಕೆ ಪಡೆಯೋದಿಲ್ಲ ಅಂತಾ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿರುವ ಬೆನ್ನಲ್ಲೇ, ಆ ಹುದ್ದೆಯ ಪ್ರಬಲ ಆಕಾಂಕ್ಷಿ ಮಾಜಿ ಸಚಿವ ಡಿ ಕೆ ಶಿವಕುಮಾರ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

dikeshi-residence-is-the-site-of-various-activities-during-capricorn
ಎಸ್.ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಡಿಕೆಶಿ

ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಸಂದರ್ಭ ಮಾಜಿ ಸಚಿವ ಡಿಕೆ ಶಿವಕುಮಾರ್ ನಿವಾಸ ವಿವಿಧ ಚಟುವಟಿಕೆಯ ತಾಣವಾಗಿ ಗೋಚರಿಸಿತು. ಹಬ್ಬದ ಪ್ರಯುಕ್ತ ತಮ್ಮ ಸದಾಶಿವನಗರದ ನಿವಾಸದಲ್ಲಿ ಜೋಡೆತ್ತುಗಳಿಗೆ ವಿಶೇಷ ಪೂಜೆ ನೆರವೇರಿಸಿ ಅವುಗಳ ಜೊತೆಗೆ ಡಿ ಕೆ ಶಿವಕುಮಾರ್ ಪೋಸ್ ಕೊಟ್ಟರು.

ಎಸ್ಎಂಕೆ ಭೇಟಿ: ಹಬ್ಬದ ಪ್ರಯುಕ್ತ ತಮ್ಮ ರಾಜಕೀಯ ಗುರು ಮಾಜಿ ಸಿಎಂ ಎಸ್‌ಎಂಕೆ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು. ಹಬ್ಬ-ಹರಿದಿನಗಳು ಸೇರಿ ಆಗಾಗ ಭೇಟಿ ಮಾಡುವುದು ಸಾಮಾನ್ಯ. ಇವತ್ತು ಕೂಡ ಔಪಚಾರಿಕವಾಗಿ ಭೇಟಿಯಾಗಿ ಎಸ್‌ಎಂಕೆ ಜತೆ ಸಮಾಲೋಚಿಸಿದರು.

ಬಳಿಕ ಮಾತನಾಡಿದ ಅವರು, ಇದು ವೈಯಕ್ತಿಕ ಭೇಟಿಯೇ ಹೊರತು ರಾಜಕೀಯ ಅಲ್ಲ. ನನ್ನ ಅವರ ಸಂಬಂಧದ ಬಗ್ಗೆ ನಿಮ್ಗೂ ಕೂಡ ಗೊತ್ತು. ರಾಜಕೀಯ ಮಾಡೋರು ಮಾಡಲಿ ಬಿಡಿ ಎಂದರು.

ಮಾಜಿ ಸಿಎಂ ಎಸ್‌ಎಂಕೆ ಭೇಟಿ ಮಾಡಿದ ಮಾಜಿ ಸಚಿವ ಡಿಕೆಶಿ..

ಹರಿಹರ ಜಾತ್ರೆಯಲ್ಲಿ ಯಡಿಯೂರಪ್ಪ ಗರಂ ವಿಚಾರ ಕುರಿತು, ನಾನೂ ಕೂಡ ಹರಿಹರಕ್ಕೆ ಹೋಗ್ತಿದ್ದೇನೆ. ಯಡಿಯೂರಪ್ಪ ಯಾರು ಯಾರಿಗೆ ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಅದರಲ್ಲಿ ಅನಗತ್ಯ ಪ್ರವೇಶಿಸುವುದು ಒಳ್ಳೆಯದಲ್ಲ ಎಂದರು.

ದಿನೇಶ್ ಗುಂಡೂರಾವ್ ಏನೇ ಇದ್ರೂ ಹೈಕಮಾಂಡ್ ಜೊತೆ ಮಾತನಾಡಲಿ. ಅವರೂ ಕೂಡ ಒಳ್ಳೆ ಕೆಲಸ ಮಾಡಿದ್ದಾರೆ, ಒಳ್ಳೆಯದಾಗಲಿ ಎಂದರು.

Intro:newsBody:ಮಕರ ಸಂಕ್ರಾಂತಿ ಸಂದರ್ಭ ವಿವಿಧ ಚಟುವಟಿಕೆಯ ತಾಣವಾದ ಡಿಕೆಶಿ ನಿವಾಸ

ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಸಂದರ್ಭ ಮಾಜಿ ಸಚಿವ ಡಿಕೆ ಶಿವಕುಮಾರ್ ನಿವಾಸ ವಿವಿಧ ಚಟುವಟಿಕೆಯ ತಾಣವಾಗಿ ಗೋಚರಿಸಿತು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಸದಾಶಿವನಗರದ ನಿವಾಸದಲ್ಲಿ ಜೋಡಿತ್ತುಗಳ ಜತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಪೋಸ್ ಕೊಟ್ಟರು. ಇದಕ್ಕೂ ಮುನ್ನ ಜೋಡೆತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಗುದ್ದು ಡಿಕೆ ಶಿವಕುಮಾರ್ ವಿಶೇಷ ಕಾಳಜಿವಹಿಸಿ ಜೋಡೆತ್ತುಗಳಿಗೆ ಪೂಜೆ ಸಲ್ಲಿಸಿದರು.
ಎಸ್ಎಂಕೆ ಭೇಟಿ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು. ತಮ್ಮ ರಾಜಕೀಯ ಗುರುವಾಗಿರುವ ಎಸ್ ಎಂ ಕೃಷ್ಣ ಅವರನ್ನು ಆಗಾಗ ಭೇಟಿ ಮಾಡುವುದು ಡಿಕೆ ಶಿವಕುಮಾರ್ ವಾಡಿಕೆಯಾಗಿದೆ. ಹಬ್ಬ ಹರಿದಿನಗಳ ಸಂದರ್ಭ ಭೇಟಿ ಕೊಡುವುದು ಸಾಮಾನ್ಯವಾಗಿದ್ದು, ಸೇರಿದೆ ಎಂದು ಕೂಡ ಔಪಚಾರಿಕ ಬೇಟಿಕೊಟ್ಟು ಸಮಾಲೋಚಿಸಿದರು.
ಎಸ್ ಎಂ ಕೆ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ಡಿಕೆಶಿವಕುಮಾರ್, ಇವತ್ತು ಸಂಕ್ರಾಂತಿ ಹಿನ್ನಲೆ ಎಸ್ಎಂಕೆ ಭೇಟಿ ಮಾಡಿದ್ದೇನೆ. ವೈಯಕ್ತಿಕ ಭೇಟಿಯೇ ಹೊರತು ರಾಜಕೀಯ ಅಲ್ಲ. ನನ್ನ ಅವರ ಸಂಬಂಧದ ಬಗ್ಗೆ ನಿಮಗೂ ಕೂಡ ಗೊತ್ತು. ರಾಜಕೀಯ ಮಾಡೋರು ಮಾಡಲಿ ಬಿಡಿ ಎಂದರು.
ಹರಿಹರ ಜಾತ್ರೆಯಲ್ಲಿ ಯಡಿಯೂರಪ್ಪ ಗರಂ ವಿಚಾರ ಕುರಿತು, ನಾನೂ ಕೂಡ ಹರಿಹರಕ್ಕೆ ಹೋಗ್ತಿದ್ದೇನೆ. ಯಡಿಯೂರಪ್ಪ ಯಾರು ಯಾರಿಗೆ ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ಅವರು ಮಾತಾಡುವಾಗ ಆಂತರಿಕವಾಗಿ ಏನೇನು ಇತ್ತೋ ಗೊತ್ತಿಲ್ಲ. ಓಟು ಹಾಕಿಸಿಕೊಳ್ಳುವಾಗ ಏನು ಮಾತು ಕೊಟ್ಟಿದ್ದಾರೆ, ಮಧ್ಯರಾತ್ರಿ ಏನು ಮಾತು ಕೊಟ್ಟಿರ್ತಾರೆ, ಸಂಜೆ ಏನು ಮಾತು ಕೊಟ್ಟಿರ್ತಾರೆ ಗೊತ್ತಿಲ್ಲ. ನಾನು ಅದರಲ್ಲಿ ಅನಗತ್ಯವಾಗಿ ಪ್ರವೇಶಿಸುವುದು ಒಳ್ಳೆಯದಲ್ಲ ಎಂದರು.
ದಿನೇಶ್ ಗುಂಡೂರಾವ್ ಏನೇ ಇದ್ರೂ ಹೈಕಮಾಂಡ್ ಜೊತೆ ಮಾತನಾಡಲಿ. ಅವರೂ ಕೂಡ ಒಳ್ಳೆ ಕೆಲಸ ಮಾಡಿದ್ದಾರೆ, ಒಳ್ಳೆಯದಾಗಲಿ ಎಂದರು.Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.