ETV Bharat / state

ಮುಂದುವರೆದ ಕೊರೊನಾ ಭೀತಿ: ಗ್ರಾಹಕರಿಲ್ಲದೆ ನಷ್ಟದಲ್ಲಿ ಸ್ಟಾರ್ ಹೋಟೆಲ್​ಗಳು! - ಸ್ಟಾರ್ ಹೊಟೇಲ್​ಗಳ ವ್ಯವಹಾರ

ಹೆಚ್ಚಿನ ಜನ ವರ್ಕ್ ಫ್ರಮ್​ ಹೋಂ ಇರುವುದರಿಂದ ಹೊರಗೆ ಓಡಾಡುತ್ತಿಲ್ಲ. ಹಾಗಾಗಿ ದರ್ಶಿನಿ, ಹೋಟೆಲ್​ಗಳಿಗೆ ಗ್ರಾಹಕರ ಕೊರತೆಯಾಗಿದೆ. ಇನ್ನೊಂದೆಡೆ ಜನ ಕೋವಿಡ್-19 ಭಯದಿಂದಲೂ ಹೋಟೆಲ್ ಆಹಾರ ತಿನ್ನುತ್ತಿಲ್ಲ. ಇದರಿಂದಾಗಿ ಲಾಕ್​ಡೌನ್ ತೆರವಿನ ಬಳಿಕವೂ ಉದ್ಯಮ ನಷ್ಟದಲ್ಲಿ ಸಾಗುತ್ತಿದೆ.

ವ್ಯವಹಾರ ಶೂನ್ಯ
ವ್ಯವಹಾರ ಶೂನ್ಯ
author img

By

Published : Jun 11, 2020, 5:45 PM IST

ಬೆಂಗಳೂರು: ಮೂರು ತಿಂಗಳ ಲಾಕ್​​ಡೌನ್ ಬಳಿಕ ಗ್ರಾಹಕರಿಗೆ ಸೇವೆ ಆರಂಭಿಸಿರುವ ಹೋಟೆಲ್​ಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ. ದರ್ಶಿನಿಗಳು, ಸಣ್ಣಪುಟ್ಟ ಹೋಟೆಲ್​ಗಳು ತಿಂಗಳ ಬಾಡಿಗೆ, ಸಿಬ್ಬಂದಿ ವೇತನ ನೀಡಲು ಸಹ ಆಗದೆ ಪರದಾಡುವ ಸ್ಥಿತಿಗೆ ತಲುಪಿವೆ.

ಹೆಚ್ಚಿನ ಜನ ವರ್ಕ್ ಫ್ರಮ್​ ಹೋಂ ಇರುವುದರಿಂದ ಹೊರಗೆ ಓಡಾಡುತ್ತಿಲ್ಲ. ಹಾಗಾಗಿ ದರ್ಶಿನಿ, ಹೋಟೆಲ್​ಗಳಿಗೆ ಗ್ರಾಹಕರ ಕೊರತೆಯಾಗಿದೆ. ಇನ್ನೊಂದೆಡೆ ಜನ ಕೋವಿಡ್-19 ಭಯದಿಂದಲೂ ಹೋಟೆಲ್ ಆಹಾರ ತಿನ್ನುತ್ತಿಲ್ಲ. ಇದರಿಂದಾಗಿ ಲಾಕ್​ಡೌನ್ ತೆರವಿನ ಬಳಿಕವೂ ಉದ್ಯಮ ನಷ್ಟದಲ್ಲಿ ಸಾಗುತ್ತಿದೆ. ಹಿಂದಿನ ಸ್ಥಿತಿಗೆ ಬರಲು ಇನ್ನೂ ನಾಲ್ಕೈದು ತಿಂಗಳು ಅಥವಾ ವರ್ಷವೇ ಬೇಕಾಗಬಹುದು ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.

ನಷ್ಟದಲ್ಲಿ ಹೋಟೆಲ್​ ಉದ್ಯಮ

ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ಮಧುಕರ್ ಎಂ. ಶೆಟ್ಟಿ ಮಾತನಾಡಿ, ಸರ್ಕಾರ ಕೆಲವು ಗೈಡ್ ಲೈನ್ ಕೊಟ್ಟಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಎಲ್ಲಾ ಗ್ರಾಹಕರ ಟೆಂಪರೇಚರ್ ಚೆಕ್ ಮಾಡಿ ಸ್ಯಾನಿಟೈಸರ್ ನೀಡಲಾಗುತ್ತಿದೆ. ಹೋಟೆಲ್ ಉದ್ಯಮ ಟೂರಿಸಂ ಸೆಕ್ಟರ್, ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ಸದ್ಯ ಸರ್ವೀಸ್ ಟೇಬಲ್​ಗಳಲ್ಲಿ ಇನ್ನೂರು ಸೀಟ್ ಇದ್ದರೆ ನೂರಕ್ಕೆ ಇಳಿಕೆ ಮಾಡಿದ್ದೇವೆ. ಒಂದು ಟೇಬಲ್​ನಲ್ಲಿ ಇಬ್ಬರಿಗೆ ಮಾತ್ರ ಕೂರಲು ಅವಕಾಶ ನೀಡಲಾಗಿದೆ ಎಂದರು.

ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ದೇಹದ ಉಷ್ಣತೆ ಚೆಕ್​ ಮಾಡುತ್ತಿದ್ದೇವೆ. ಕಿಚನ್​ನಲ್ಲಿ ಎಚ್ಚರ ವಹಿಸಿ ಶುದ್ಧತೆಯಿಂದ ಹೈಜಿನಿಕ್ ಆಹಾರವನ್ನು ಜನರಿಗೆ ಒದಗಿಸುತ್ತಿದ್ದೇವೆ. ಈ ಬಗ್ಗೆ ಹೋಟೆಲ್ ಉದ್ಯಮಿಗಳ ಸಭೆ ನಡೆಸಿ ತಿಳಿಸಲಾಗಿದೆ. ಯಾವ ಸಂಶಯವೂ ಗ್ರಾಹಕರಿಗೆ ಬೇಡ. ಸುರಕ್ಷಿತವಾಗಿ ಆಹಾರ ಸೇವಿಸಬಹುದು ಎಂದು ಮಧುಕರ್ ಶೆಟ್ಟಿ ತಿಳಿಸಿದರು.

ರೆಸ್ಟೋರೆಂಟ್​ಗಳ ಕಿಚನ್​ನಲ್ಲಿ ಆಹಾರ ತಯಾರಿಸುವ ವಿಡಿಯೋ ಸಿಸಿಟಿವಿ ಮೂಲಕ ಗ್ರಾಹಕರಿಗೆ ತೋರಿಸುತ್ತಿದ್ದೇವೆ‌. ತಟ್ಟೆ, ಲೋಟಗಳನ್ನು ಬಿಸಿ ನೀರಲ್ಲಿ ತೊಳೆದು ನೀಡಲಾಗುತ್ತಿದೆ. ಲಾಡ್ಜ್​ಗಳಿಗೂ ನಿಯಮಗಳಿದ್ದು, ಒಂದು ರೂಂ ಖಾಲಿಯಾದ್ರೆ 48 ಗಂಟೆ ಬೇರೆಯವರಿಗೆ ಕೊಡಬಾರದು ಎಂದು ಸೂಚಿಸಲಾಗಿದೆ.

ಸ್ಟಾರ್ ಹೋಟೆಲ್, ಲಾಡ್ಜ್​​​ಗಳ ಬಿಸಿನೆಸ್​​ ಝೀರೋ :

ನಗರದಲ್ಲಿ ಯಾವುದೇ ಸಮ್ಮೇಳನಗಳು, ಎಕ್ಸಿಬಿಷನ್​ಗಳು, ಕಾನ್ಫರೆನ್ಸ್​ಗಳು ನಡೆಯುತ್ತಿಲ್ಲ. ಇದರಿಂದಾಗಿ ಸ್ಟಾರ್ ಹೋಟೆಲ್​ಗಳ ಹಾಲ್, ರೂಂಗಳು ಬುಕ್ ಆಗುತ್ತಿಲ್ಲ. ಟೂರಿಸಂ ಕೂಡಾ ಸಂಪೂರ್ಣ ನಿಂತು ಹೋಗಿದೆ. ಅಂತಾರಾಷ್ಟ್ರೀಯ ವಿಮಾನಯಾನ ಆರಂಭವಾಗದ ಹಿನ್ನೆಲೆ ಸ್ಟಾರ್ ಹೋಟೆಲ್​ಗಳಿಗೆ ಜನರು ಬರುತ್ತಿಲ್ಲ. ಯಾವುದೇ ಪಾರ್ಟಿಗಳು ಕೂಡಾ ನಡೆಯುತ್ತಿಲ್ಲ. ಹೀಗಾಗಿ ಬಿಸಿನೆಸ್ ಝೀರೋ ಇದೆ ಎಂದು ಮಧುಕರ್ ಶೆಟ್ಟಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.