ETV Bharat / state

ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ದಲಿತರನ್ನ ಅನಾಥ ಶಿಶುಗಳನ್ನಾಗಿಸಿದೆ: ಧ್ರುವ ನಾರಾಯಣ್ - ಬಿಜೆಪಿ ಸರ್ಕಾರದ ವಿರುದ್ದ ದೃವನಾರಾಯಣ್ ಬೆಂಗಳೂರಿನಲ್ಲಿ ಆಕ್ರೋಶ

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರ ನಿರ್ಲಕ್ಷ್ಯ ಹೆಚ್ಚಾಗಿದೆ. ದಲಿತರನ್ನ ಅನಾತ ಶಿಶುಗಳನ್ನಾಗಿ ಮಾಡ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಭಿಪ್ರಾಯಪಟ್ಟರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್
ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್
author img

By

Published : Jul 12, 2022, 7:16 PM IST

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ದಲಿತರನ್ನ ಅನಾಥ ಶಿಶುಗಳನ್ನಾಗಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಧರ್ಮಸೇನಾ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರ ನಿರ್ಲಕ್ಷ್ಯ ಹೆಚ್ಚಾಗಿದೆ. ದಲಿತರನ್ನ ಅನಾಥ ಶಿಶುಗಳನ್ನಾಗಿ ಮಾಡ್ತಿದೆ ಸರ್ಕಾರ. ಕೇಂದ್ರ ಹಾಗೂ ರಾಜ್ಯದಲ್ಲಿರುವ ದಲಿತ ಸಚಿವರು ಇದರ ಬಗ್ಗೆ ಮಾತನಾಡ್ತಿಲ್ಲ.

ದಲಿತ ಬಿಜೆಪಿ ಶಾಸಕರು ಕೈಗೊಂಬೆಗಳಾಗಿದ್ದಾರೆ. ಅವರೇ ಆತ್ಮವಂಚನೆ ಮಾಡಿಕೊಳ್ತಿದ್ದಾರೆ. ಸ್ವಾಭಿಮಾನ ಇಲ್ಲದ ಬದುಕು ಶೂನ್ಯವಿದ್ದಂತೆ. ಬಿಜೆಪಿ ದಲಿತ ನಾಯಕರು ಪಕ್ಷದ ಕೈಗೊಂಬೆಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್ ಅವರು ಮಾತನಾಡಿದರು

ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಚಡ್ಡಿ ಹೊತ್ತು ಬರ್ತಾರೆ. ದಲಿತರ ಬಗ್ಗೆ ಕಾಳಜಿ ಇದ್ದರೆ ಅನ್ಯಾಯ ಪ್ರಶ್ನಿಸಬೇಕಿತ್ತು. ಆದರೆ, ಅಂತಹ ಕೆಲಸವನ್ನ ಅವರು ಮಾಡ್ತಿಲ್ಲ. ಕೇವಲ ಪಕ್ಷದ ನಾಯಕರು ಹೇಳಿದ ಕಾರ್ಯ ಮಾಡಿಕೊಂಡಿದ್ದಾರೆ. ದಲಿತ ಸಮುದಾಯದಲ್ಲಿ ಬಿಜೆಪಿ ಮುಖಂಡರ ಈ ನಡುವಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ಬೇಸರದಿಂದ ನುಡಿದರು.

ಸರ್ಕಾರದ ವಿರುದ್ಧ ದೃವನಾರಾಯಣ್ ಆಕ್ರೋಶ: ಪರಿಶಿಷ್ಟ ಜನಸಂಖ್ಯೆ ರಾಜ್ಯದಲ್ಲಿ ಹೆಚ್ಚಿದೆ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕು. ಕೊಟ್ಟ ಅನುದಾನ ಅದೇ ವರ್ಷ ಖರ್ಚು ಮಾಡಬೇಕು. ಇಲ್ಲವಾದರೆ ಅಧಿಕಾರಿಗಳನ್ನ ಹೊಣೆ ಮಾಡಬಹುದು. ಇದು ಸಿದ್ದರಾಮಯ್ಯ ಆದೇಶಿಸಿದ್ದರು. ಆದರೆ, ಈಗ ಅನುದಾನವೂ ಹೆಚ್ಚು ಸಿಗ್ತಿಲ್ಲ. ಇರುವ ಅನುದಾನವನ್ನೂ ಖರ್ಚು ಮಾಡ್ತಿಲ್ಲ ಎಂದು ಸರ್ಕಾರದ ವಿರುದ್ಧ ಧ್ರುವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಎಸ್ಸಿಪಿ, ಟಿಎಸ್ಪಿ ಹಣ ಹೆಚ್ಚಿತ್ತು. 2012-13 ರಲ್ಲಿ 7200 ಕೋಟಿ, 2013-14 ರಲ್ಲಿ 8616 ಕೋಟಿ, 2014-15 ರಲ್ಲಿ 15,834 ಕೋಟಿ, 2014-15 ರಲ್ಲಿ 15,834 ಕೋಟಿ, 2015-16 ರಲ್ಲಿ 16356 ಕೋಟಿ, 2016-17 ರಲ್ಲಿ 19884 ಕೋಟಿ, 2017-18ರಲ್ಲಿ 27,840 ಕೋಟಿ, 2018-19 ರಲ್ಲಿ 29,691 ಕೋಟಿ ಗುರು ಮತವನ್ನು ನೀಡಿದ್ದೆವು.

ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷ ಅನುದಾನ ಹೆಚ್ಚುತ್ತಾ ಹೋಗಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಂದ ನಂತರ ದಲಿತ ಅನುದಾನ ಹೆಚ್ಚಾಗಬೇಕಿತ್ತು. ಆದರೆ, ಇರುವ ಅನುದಾನವನ್ನೇ ಕಡಿತ ಮಾಡಿದೆ. 2019-20 ರಲ್ಲಿ 27,558 ಕೋಟಿ, 2020-21 ರಲ್ಲಿ 25. 378 ಕೋಟಿ ಹಾಗೂ 2021- 22 ರಲ್ಲಿ 26695 ಕೋಟಿ ರೂ. ಕೊಟ್ಟಿದ್ದಾರೆ.

ಅಂದರೆ ಮೂರು ವರ್ಷದಲ್ಲಿ ಅನುದಾನ ಕಡಿಮೆಯಾಗಿದೆ. ಜೊತೆಗೆ ಅನುದಾನ ಬೇರೆಯದಕ್ಕೆ ಉಪಯೋಗಿಸುವಂತಿಲ್ಲ. ಆದರೆ, ಹಣವನ್ನ ಬೇರೆಯದಕ್ಕೆ ವಿನಿಯೋಗಿಸಿದ್ದಾರೆ. ಇದು ಅಪರಾಧ ಎಂದು ವಿವರಿಸಿದರು. ನಾಗಮೋಹನ್ ದಾಸ್ ವರದಿ ಅನುಷ್ಟಾನವಾಗ್ತಿಲ್ಲ. ಸಚಿವ ಶ್ರೀರಾಮುಲು ಜಾರಿಗೆ ತರುತ್ತೇವೆ ಎಂದಿದ್ದರು. ರಕ್ತದಲ್ಲಿ ಬರೆದುಕೊಡ್ತೇನೆ ಎಂದಿದ್ದರು. ವಾಲ್ಮೀಕಿ ಶ್ರೀಗಳು ತಿಂಗಳುಗಟ್ಟಲೆ ಧರಣಿ ಕುಳಿತಿದ್ದಾರೆ. ಆದರೆ, ಇಲ್ಲಿಯವರೆಗೆ ಸರ್ಕಾರ ಗಮನಹರಿಸಿಲ್ಲ. ಮಾತು ಕೊಟ್ಟ ಶ್ರೀರಾಮುಲು ಮಾತು ತಪ್ಪಿದ್ದಾರೆ. ನಾಗಮೋಹನ್ ದಾಸ್ ವರದಿ ಅನುಷ್ಠಾನ ಮಾಡಬೇಕು ಎಂದು ಸರ್ಕಾರಕ್ಕೆ ಧ್ರುವನಾರಾಯಣ್ ಒತ್ತಾಯ ಮಾಡಿದರು.

ಬಡವರಿಗೆ ಕೊಟ್ಟ ಹಣವನ್ನ ಲೂಟಿ ಮಾಡಲಾಗ್ತಿದೆ. ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿದೆ. ದಲಿತರ ಸ್ಕಾಲರ್ ಶಿಪ್ ನಲ್ಲೂ ಕಡಿತಗೊಳಿಸಿದೆ. ಹೋಬಳಿಗೊಂದು ವಸತಿ ಶಾಲೆ ತೆಗೆದಿದ್ದೆವು. ಸ್ವಯಂ ಉದ್ಯೋಗಕ್ಕೆ 10 ಲಕ್ಷ ಸಾಲ ಸೌಲಭ್ಯವಿತ್ತು. ಸಾಲಕ್ಕೆ ಸಬ್ಸಿಡಿ ನೀಡಲಾಗ್ತಿತ್ತು. ಆದರೆ, ಈಗಿನ ಸರ್ಕಾರ ಸಬ್ಸಿಡಿ ಕೈಬಿಟ್ಟಿದೆ. ನಿಗಮ ಮಂಡಳಿ ಅನುದಾನವನ್ನ ಕಡಿತಮಾಡ್ತಿದೆ.

ಪರಿಶಿಷ್ಟರ ಕಲ್ಯಾಣ ಇನ್ನೆಲ್ಲಿಂದ ಸಾಧ್ಯ?: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ನೀಡಿದ್ದೆವು. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಫಾಯಿ ನಿಗಮಕ್ಕೆ 10 ಕೋಟಿ ನೀಡಿದ್ದಾರೆ. ಬಾಬು ಜಗಜೀವನ್ ರಾಂ ನಿಗಮಕ್ಕೆ 80 ಕೋಟಿ, ತಾಂಡಾ ಅಭಿವೃದ್ಧಿ ನಿಗಮಕ್ಕೆ ಕೇವಲ 22 ಕೋಟಿ ಬಿಡುಗಡೆ ಮಾಡಿದೆ. ಹೀಗಾದರೆ, ಪರಿಶಿಷ್ಟರ ಕಲ್ಯಾಣ ಇನ್ನೆಲ್ಲಿಂದ ಸಾಧ್ಯ? ಎಂದು ಪ್ರಶ್ನಿಸಿದರು.

ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರ ಮಾತನಾಡಿ, ಅಮೃತೋತ್ಸವ ಕಮಿಟಿಯಿಂದ ಕಾರ್ಯಕ್ರಮ ನಡೆಯಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಇಬ್ಬರೂ ಮಾತನಾಡಿದ್ದಾರೆ. ಅಭಿಮಾನದಿಂದ ಪಕ್ಷದ ಎಲ್ಲ ಮುಖಂಡರು ಭಾಗವಹಿಸುತ್ತೇವೆ. ಅವರು ಪಕ್ಷದ ಎಲ್ಲ ಮುಖಂಡರನ್ನ ಆಹ್ವಾನಿಸಿದ್ದಾರೆ.

ಇದು ಅವರ ಅಭಿಮಾನಿಗಳು ಸೇರಿ ಮಾಡ್ತಿರುವ ಕಾರ್ಯಕ್ರಮವಾಗಿದೆ. ಎಸ್. ಎಂ ಕೃಷ್ಣ ಅವರಿಗೂ ಕಾರ್ಯಕ್ರಮ ಮಾಡಿದ್ದೆವು. ಅಭಿಮಾನದಿಂದ ನಾವು ಭಾಗವಹಿಸುತ್ತೇವೆ. ಇದು ಪಕ್ಷದ ವತಿಯಿಂದ ಅಂತ ಹೇಳಲ್ಲ. ಅಮೃತ ಮಹೋತ್ಸವ ಕಮಿಟಿ ಮಾಡ್ತಿದೆ. ಸಿದ್ದರಾಮೋತ್ಸವ ಅಲ್ಲ. ಸಿದ್ದರಾಮಯ್ಯ ಜಯಂತಿ ಎಂದರು.

ಓದಿ: ಜೈಲಿನೊಳಗಿನ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ರೆ ಶಿಕ್ಷೆ ಅವಧಿ ಕಡಿತ : ಕೈದಿಗಳಿಗೆ ಗೃಹ ಸಚಿವರ ಬಿಗ್​ ಆಫರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.