ಬೆಂಗಳೂರು: ಡಿಜಿಪಿ ಡಾ.ರವೀಂದ್ರನಾಥ್ ಅವರ ಭೇಟಿಗೆ ಬಂದಿದ್ದ ಕೆ.ಮಥಾಯ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರನ್ನು ಪೊಲೀಸ್ ಇನ್ಸ್ಪೆಕ್ಟರ್ ತಡೆದಿದ್ದಾರೆ. ಈ ಘಟನೆ ಸಿಐಡಿ ಆವರಣದಲ್ಲಿ ನಡೆದಿದೆ. ಈ ವಿಚಾರ ತಿಳಿದ ಡಿಜಿಪಿ ಡಾ. ರವೀಂದ್ರನಾಥ್ ನನ್ನ ಭೇಟಿಗೆ ಸಾರ್ವಜನಿಕರು ಬರುವುದ ಸಾಂವಿಧನಿಕ ಹಕ್ಕು. ಅದನ್ನು ಯಾರು ತಡೆಯುವಂತಿಲ್ಲ ಎಂದು ಇನ್ಸ್ಪೆಕ್ಟರ್ ಮೇಲೆ ಗರಂ ಆದರು.
ಭೇಟಿಯಾಗಲು ಬಂದಿದ್ದ ಆಪ್ ಕಾರ್ಯಕರ್ತರನ್ನು ಹೈಗ್ರೌಂಡ್ಸ್ ಠಾಣಾ ಇನ್ಸ್ಪೆಕ್ಟರ್ ಶಿವಸ್ವಾಮಿ ತಡೆದು 'ಎಲ್ಲರನ್ನೂ ಒಮ್ಮೆಲೇ ಒಳಗೆ ಬಿಡಲು ಅವಕಾಶವಿಲ್ಲ, ಅನುಮತಿ ಪಡೆದು ಒಳಗೆ ಬಿಡುವುದಾಗಿ' ಹೇಳಿದ್ದಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ವಿಷಯ ತಿಳಿದು ಕಚೇರಿಯಿಂದ ಹೊರಬಂದ ಡಿಜಿಪಿ ಡಾ. ರವೀಂದ್ರನಾಥ್, 'ನನ್ನನ್ನ ಭೇಟಿಯಾಗಲು ಬಂದವರನ್ನು ಒಳಗೆ ಯಾಕೆ ಬಿಡ್ತಿಲ್ಲ?' ಎಂದು ಸ್ಥಳದಲ್ಲೇ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ಗೆ ಕರೆ ಮಾಡಿ ಇನ್ಸ್ಪೆಕ್ಟರ್ ಅನ್ನು ಅಮಾನತ್ತುಗೊಳಿಸುವಂತೆ ಗರಂ ಆದರು.
ಅಷ್ಟೇ ಅಲ್ಲದೇ ನೇರವಾಗಿ ನೃಪತುಂಗ ರಸ್ತೆಯ ಡಿಜಿ & ಐಜಿಪಿ ಕಚೇರಿಗೆ ಕಾಲ್ನಡಿಗೆಯಲ್ಲೇ ತೆರಳಿದರು. ಬಳಿಕ ಡಿಜಿ & ಐಜಿಪಿ ತಮ್ಮ ಕಚೇರಿಯಲ್ಲಿರದ ಕಾರಣ ವಾಪಸಾದರು.
ಇದನ್ನೂ ಓದಿ: 'ಉತ್ಕರ್ಷ್ ಸಮಾರೋಹ್: ಫಲಾನುಭವಿಯೊಬ್ಬರ ಪುತ್ರಿ ಜೊತೆ ಸಂವಾದದ ವೇಳೆ ನಮೋ ಭಾವುಕ!