ETV Bharat / state

'ಹ್ಯಾಪಿ ಜರ್ನಿ'ಎಂದು ವಲಸೆ ಕಾರ್ಮಿಕರ ಬೀಳ್ಕೊಟ್ಟ ಡಿಜಿ ಪ್ರವೀಣ್ ಸೂದ್

ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರನ್ನು ರೈಲ್ವೆ ನಿಲ್ದಾಣದಿಂದ ರಾಜ್ಯ ಪೊಲೀಸ್ ಮಹಾ‌ನಿರ್ದೇಶಕ ಪ್ರವೀಣ್ ಸೂದ್​ ಅವರು 'ಹ್ಯಾಪಿ ಜರ್ನಿ' ಎಂದು ವಿಶ್​ ಮಾಡಿ ಬೀಳ್ಕೊಟ್ಟಿದ್ದಾರೆ.

ವಲಸೆ ಕಾರ್ಮಿಕರಿಗೆ ಬೀಳ್ಕೊಟ್ಟ ಡಿಜಿ ಪ್ರವೀಣ್ ಸೂದ್

author img

By

Published : May 22, 2020, 8:24 PM IST

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ‌ ನಗರದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 4,500 ವಲಸೆ ಕಾರ್ಮಿಕರನ್ನು ತವರೂರಿಗೆ ಕಳುಹಿಸಿಕೊಡಲು ರಾಜ್ಯ ಪೊಲೀಸ್ ಮಹಾ‌ನಿರ್ದೇಶಕ ಪ್ರವೀಣ್ ಸೂದ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು.

ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಶ್ರಮಿಕ್ ರೈಲು ಮೂಲಕ ಕಳುಹಿಸಿ ಕೊಡಲಾಯಿತು. ಇದೇ ವೇಳೆ, ನಗರದ ರೈಲ್ವೆ ನಿಲ್ದಾಣಕ್ಕೆ ಬಂದ ಡಿಜಿ ಪ್ರವೀಣ್ ಸೂದ್, ಕಮಿಷನರ್ ಭಾಸ್ಕರ್ ರಾವ್ ಅವರು ಭದ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.

ವಲಸೆ ಕಾರ್ಮಿಕರಿಗೆ ಬೀಳ್ಕೊಟ್ಟ ಡಿಜಿ ಪ್ರವೀಣ್ ಸೂದ್

ಸಾಮಾಜಿಕ‌ ಅಂತರ ಹಾಗೂ ಮಾಸ್ಕ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಯಾಣಿಕರಿಗೆ ಸಲಹೆ, ಸೂಚನೆಗಳನ್ನು ನೀಡಿದರು. ರೈಲು ಹೊರಡುತ್ತಿದ್ದಂತೆ ಚಪ್ಪಾಳೆ ತಟ್ಟಿ ಹ್ಯಾಪಿ ಜರ್ನಿ ಎಂದು ಹೇಳುವ ಮೂಲಕ ಪ್ರಯಾಣಿಕರನ್ನು ಬೀಳ್ಕೊಟ್ಟರು. ಇದಕ್ಕೆ‌ ಪ್ರಯಾಣಿಕರು ಥ್ಯಾಂಕ್ಸ್ ಎಂದು ಹೇಳಿ ಕೃತಜ್ಞತೆ ಅರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.