ETV Bharat / state

ದೇವರಾಜ ಅರಸು ಪುಣ್ಯಸ್ಮರಣೆ: ಅರಸು ಸಾಧನೆ ಕೊಂಡಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ​ - ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಸುದ್ದಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ 38ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಿಎಂ ಯಡಿಯೂರಪ್ಪ ಡಿ. ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.

devraj arasu death anniversary, cm  yadiyurappa tributes
ಡಿ.ದೇವರಾಜ್ ಅರಸುರವರ 38ನೇ ವರ್ಷದ ಪುಣ್ಯಸ್ಮರಣೆ
author img

By

Published : Jun 6, 2020, 12:14 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ 38ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದರು.

ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ್ ಅರಸುರವರ 38ನೇ ವರ್ಷದ ಪುಣ್ಯಸ್ಮರಣೆ

ವಿಧಾನಸೌಧ ಆವರಣದಲ್ಲಿರುವ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ, ವಿಶೇಷ ಸಸಿ ನೆಟ್ಟರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ದೇವರಾಜ ಅರಸು ಕರ್ನಾಟಕ ಕಂಡಂತಹ ವಿಶಿಷ್ಟ ನಾಯಕ. ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ್ದರು. ಉತ್ತಮ ನಾಯಕರಾಗಿ ಮಾನವೀಯ ನೆಲೆ ಒಳಗೊಂಡು ಆಡಳಿತ ನಡೆಸುತ್ತಿದ್ದರು. ಮುಖ್ಯಮಂತ್ರಿಯಾಗಿ ಅವರು ಕೈಗೊಂಡ ನಿರ್ಧಾರಗಳು ಚರಿತ್ರಾರ್ಹವಾದದ್ದು ಎಂದು ಅವರ ಕೊಡುಗೆಗಳನ್ನು ಸ್ಮರಿಸಿದರು.

ಅರಸು ಅವರು ಜಾರಿಗೆ ತಂದ ಜೀತ ವಿಮುಕ್ತಿ, ಭೂ ಸುಧಾರಣಾ ಹಾಗೂ ಋಣ ಪರಿಹಾರ ಕಾಯ್ದೆಯಂತಹ ಕ್ರಾಂತಿಕಾರಕ ನಿರ್ಧಾರಗಳು ಬಡತನ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ಬಡವರು ಹಾಗೂ ದಲಿತರು ಸಮಾಜದಲ್ಲಿ ಗೌರವದಿಂದ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರ ಎನಿಸಿಕೊಂಡ ಅರಸು ಅವರು, ಸಾಕಷ್ಟು ಹಿಂದುಳಿದ ವರ್ಗದವರನ್ನು ಮುಂಚೂಣಿಗೆ ತಂದು ಪೋಷಿಸಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ ಅವರ ಸಾಧನೆಗೆ ಸಾಟಿ ಇಲ್ಲ ಎಂದು ಕೊಂಡಾಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ರಾಜ್ಯದಲ್ಲಿ ಜಾರಿಗೆ ತಂದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಶೋಷಿತರು ಹಾಗೂ ಹಿಂದುಳಿದ ವರ್ಗಗಳ ನಾಗರಿಕರಿಗೆ ಶಕ್ತಿ ತುಂಬುವ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಬೆಳೆಯಲು ಉತ್ತೇಜನ ನೀಡಿದ್ದರು.

ವಿದ್ಯಾವಂತರಿಗೆ ನಿರುದ್ಯೋಗ ಭತ್ಯೆ ನೀಡುವಂತಹ ಮಹತ್ವದ ನಿರ್ಧಾರ ಸೇರಿ ಇವರು ತಮ್ಮ ಅವಧಿಯಲ್ಲಿ ಕೈಗೊಂಡ ಹಲವು ಕಾರ್ಯಕ್ರಮಗಳು ದೇಶದಲ್ಲಿಯೇ ವಿನೂತನ ಪ್ರಯತ್ನಗಳಾಗಿ ಬಿಂಬಿತವಾಗಿವೆ ಎಂದರು.

'ಮೈಸೂರು' ಎಂದಿದ್ದ ರಾಜ್ಯದ ಹೆಸರನ್ನು 'ಕರ್ನಾಟಕ' ಎಂದು ಬದಲಾಯಿಸಿದ ಹೆಗ್ಗಳಿಕೆಯೂ ಅರಸು ಅವರದ್ದು. ಕನ್ನಡವನ್ನು ಆಡಳಿತ ಭಾಷೆಯಾಗಿ ಸ್ವೀಕರಿಸಿದ್ದು ಕೂಡ ಇವರ ಅವಧಿಯಲ್ಲೇ. ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಯೋಜನೆ ಕೈಗೊಂಡಿದ್ದರು. ಇಂತಹ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದು ಸಮಾಜವನ್ನು ಅಭಿವೃದ್ಧಿ ಮುಖವಾಗಿ ಕೊಂಡೊಯ್ಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಸಚಿವ ಶ್ರೀರಾಮುಲು ಹಾಗೂ ಬೈರತಿ ಬಸವರಾಜ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.