ಬೆಂಗಳೂರು: ಕಣ್ವ ಮಠದ ಪೀಠಾಧಿಪತಿ ವಿದ್ಯಾವಾರಿಧ ತೀರ್ಥ ಸ್ವಾಮೀಜಿ ವಿರುದ್ಧ ರಾಸಲೀಲೆ ಆರೋಪ ಹಿನ್ನೆಲೆಯಲ್ಲಿ ವಿದ್ಯಾವಾರಿಧಿ ತೀರ್ಥರ ಫ್ಲೆಕ್ಸ್ಗೆ ಮಸಿ ಬಳಿದು ಭಕ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಯಲಹಂಕದ ಕಣ್ವ ಶಾಖಾ ಮಠದ ಬಳಿ ನಡೆದಿದೆ.
ಶ್ರೀ ವಿದ್ಯಾವಾರಿಧಿತೀರ್ಥ ಸ್ವಾಮಿಜಿ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕದ ಕಣ್ವ ಶಾಖಾ ಮಠಕ್ಕೆ ಭಕ್ತರು ಬಂದು ಸ್ವಾಮೀಜಿ ಹಾಗೂ ಯಲಹಂಕ ಶಾಖಾ ಮಠದ ಉಸ್ತುವಾರಿ ನರಸಿಂಹಚಾರ್ ಫ್ಲೆಕ್ಸ್ಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ್ರು. ತ್ರೇತಾಯುಗದಿಂದ ಇತಿಹಾಸ ಹೊಂದಿರುವ ಮಠಕ್ಕೆ ಇಂತಹ ಸ್ವಾಮೀಜಿ ಆಗಮಿಸಿ ವಿಕೃತ ಮೆರದಿದ್ರು. ಸ್ವಾಮೀಜಿ ಇಂತಹ ವರ್ತನೆಗೆ ಬೇಸತ್ತ ಮೂಲ ಭಕ್ತರು ಮಠದಿಂದ ದೂರ ಉಳಿದಿದ್ದರು. ಮಠದ ಆಸ್ತಿ ಸಂಪೂರ್ಣ ವಶಕ್ಕೆ ತೆಗೆದುಕೊಂಡು ದಬ್ಬಾಳಿಕೆ ಶುರು ಮಾಡಿದ್ದ ಸ್ವಾಮೀಜಿ ವಿರುದ್ಧ ಭಕ್ತರು ತಿರುಗಿ ಬಿದ್ದಿದ್ದು, ಈ ವೇಳೆ ಸ್ವಾಮೀಜಿ ಸಾಮಗ್ರಿ ಸರಂಜಾಮು ಗಂಟು ಮೂಟೆ ಸಮೇತ ಕಾಲ್ಕಿತ್ತಿದ್ದಾರೆ.
ಈ ಮಠಕ್ಕಾಗಿ ಗುರುರಾಜ ರಾವ್, ಡಾ.ವೈ.ವಿ ನಾರಾಜ್, ವೈ.ಜಿ ಕೃಷ್ಣ ಮೂರ್ತಿ ಅವರು ಸುಮಾರು ಒಂದು ಎಕರೆ ಜಾಗವನ್ನು ದಾನ ನೀಡಿದ್ರು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗದ ಮಳಿಗೆ ನಿರ್ಮಿಸಲಾಗಿತ್ತು. ಇದರಿಂದ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು ಎನ್ನಲಾಗುತ್ತಿದೆ.