ETV Bharat / state

ಇಮ್ಮಡಿ ಪುಲಕೇಶಿ ನಂತ್ರ ಉತ್ತರದ ಗದ್ದುಗೆ ಏರಿದ ಮತ್ತೊಬ್ಬ ಕನ್ನಡಿಗ ದೇವೇಗೌಡ್ರು  :  ವೈ.ಎಸ್.ವಿ. ದತ್ತ

ದೇಶದ ಇತಿಹಾಸದಲ್ಲಿ ಇಮ್ಮಡಿ ಪುಲಕೇಶಿ ಬಿಟ್ಟರೆ ಉತ್ತರ ಗದ್ದುಗೆ ಹಿಡಿದ ಮತ್ತೊಬ್ಬ ಕನ್ನಡಿಗ ಹೆಚ್.ಡಿ.ದೇವೇಗೌಡರಾಗಿದ್ದಾರೆ. ಇಮ್ಮಡಿ ಪುಲಕೇಶಿ ನರ್ಮದಾ ನದಿ ದಾಟಿ ಉತ್ತರ ಭಾರತದ ಹರ್ಷವರ್ಧನನ್ನು ಮಣಿಸಿ ಉತ್ತರದ ಗದ್ದುಗೆ ಹಿಡಿದಿದ್ದರು. ಅವರ ನಂತರ ಕನ್ನಡಿಗ ದೇವೇಗೌಡ ಅವರು ಪ್ರಧಾನಿಯಾಗಿ ಉತ್ತರದಲ್ಲಿ ಗದ್ದುಗೆಗೇರಿದರು ಎಂದರು.

ವೈ.ಎಸ್.ವಿ. ದತ್ತ
ವೈ.ಎಸ್.ವಿ. ದತ್ತ
author img

By

Published : Jun 2, 2021, 12:20 AM IST

ಬೆಂಗಳೂರು: ರಾಜಕಾರಣದಲ್ಲಿ ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡರ ಹೋರಾಟದ ಹೆಜ್ಜೆಗಳು ಯುವಜನಾಂಗಕ್ಕೆ ಮಾದರಿಯಾಗಿದ್ದು, ದಕ್ಷಿಣ ಭಾರತದ ಗಡಿದಾಟಿದ ಬಹುರೂಪಿ ರಾಜಕಾರಣಿ ಎಂದು ಜೆಡಿಎಸ್ ಹಿರಿಯ ಮುಖಂಡ, ಮಾಜಿ ಶಾಸಕ ವೈ.ಎಸ್.ವೈ.ದತ್ತ ಬಣ್ಣಿಸಿದ್ದಾರೆ.

ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆ ಇಂದು ಜೆಡಿಎಸ್ ಆಯೋಜಿಸಿದ `ಯುವಜನತೆಗೆ ಗೊತ್ತಿಲ್ಲದ ದೇವೇಗೌಡರ ಪರಿಚಯ' ಕುರಿತು ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ದೇವೇಗೌಡ ಅವರು ಹೋರಾಟದ ಹಾದಿ ಹಿಡಿದಿದ್ದರು. ಡಿಪ್ಲೋಮಾ ವಿದ್ಯಾಭ್ಯಾಸದ ವೇಳೆ ಕಾಲೇಜಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಭಾವಿ ಶ್ರೀಮಂತ ಯುವಕನ ವಿರುದ್ಧ ರೈತನ ಮಗನಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದೇ ಹೋರಾಟ ಮುಂದೆ ರಾಜಕಾರಣಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳಿದರು.

ದೇಶದ ಇತಿಹಾಸದಲ್ಲಿ ಇಮ್ಮಡಿ ಪುಲಕೇಶಿ ಬಿಟ್ಟರೆ ಉತ್ತರ ಗದ್ದುಗೆ ಹಿಡಿದ ಮತ್ತೊಬ್ಬ ಕನ್ನಡಿಗ ಹೆಚ್.ಡಿ.ದೇವೇಗೌಡರಾಗಿದ್ದಾರೆ. ಇಮ್ಮಡಿ ಪುಲಕೇಶಿ ನರ್ಮದಾ ನದಿ ದಾಟಿ ಉತ್ತರ ಭಾರತದ ಹರ್ಷವರ್ಧನನ್ನು ಮಣಿಸಿ ಉತ್ತರದ ಗದ್ದುಗೆ ಹಿಡಿದಿದ್ದರು. ಅವರ ನಂತರ ಕನ್ನಡಿಗ ದೇವೇಗೌಡ ಅವರು ಪ್ರಧಾನಿಯಾಗಿ ಉತ್ತರದಲ್ಲಿ ಗದ್ದುಗೆಗೇರಿದರು ಎಂದರು.

ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಎರಡು ಗಾಲಿಗಳಿದ್ದಂತೆ ಎಂಬುದಕ್ಕೆ ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿ ಸಾಕ್ಷಿ. ಪ್ರತಿಪಕ್ಷ ನಾಯಕರಾಗಿದ್ದ ದೇವೇಗೌಡ ಅವರು ಎಂದಿಗೂ ಬಾವಿಗಿಳಿದು ಹೋರಾಟ ಮಾಡಲಿಲ್ಲ. ಆದರೆ, ಜನತೆಗೆ ಇಬ್ಬರು ಉತ್ತರದಾಯಿತ್ವವನ್ನು ಹೊಂದಿದ್ದರು. ಬೆಂಬಲ ನೀಡುವ ವೇಳೆ, ಟೀಕಿಸುವ ವೇಳೆ ಕಟುವಾಗಿ ಟೀಕೆಯನ್ನು ದೇವೇಗೌಡ ಅವರು ಮಾಡುತ್ತಿದ್ದರು ಎಂದು ಹೇಳಿದ ದತ್ತ, ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆಗೆ ಪ್ರವೇಶಿಸಿದ ಅವರು ಕಾವೇರಿ ವಿಚಾರ ಕುರಿತು ಖಾಸಗಿ ನಿರ್ಣಯವನ್ನು ಮೊದಲಬಾರಿಗೆ ಮಂಡಿಸಿದ್ದು ಐತಿಹಾಸಿಕ ಎಂದು ದೇವೇಗೌಡರ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.

ಮುಖ್ಯಮಂತ್ರಿಯಾಗಿ ದೇವೇಗೌಡ ಅವರು ಅಧಿಕಾರ ವಹಿಸಿಕೊಂಡ ವೇಳೆ ರಾಜ್ಯದ ಖಜಾನೆ ಖಾಲಿಯಾಗಿತ್ತು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ರಾಜ್ಯದ ಬೊಕ್ಕಸ ಖಾಲಿ ಮಾಡಿ ತೆರಳಿದ್ದರು. ಬೊಕ್ಕಸವನ್ನು ಭರ್ತಿ ಮಾಡುವುದು ದೇವೇಗೌಡ ಅವರಿಗೆ ಸವಾಲಿನ ಪ್ರಶ್ನೆಯಾಗಿತ್ತು. ಆಗ ಹಣಕಾಸು ಸಚಿವರಾಗಿದ್ದ ಈಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಾಕಾಷ್ಟು ಶ್ರಮಪಟ್ಟು ಬೊಕ್ಕಸ ತುಂಬಿಸುವ ಕೆಲಸ ಮಾಡಿದ್ದರು. ಸಾಕಷ್ಟು ಟೀಕೆಗಳು ವ್ಯಕ್ತವಾದರೂ 18 ತಿಂಗಳ ಅವಧಿಯಲ್ಲಿ ಖಜಾನೆ ತುಂಬಿಸುವ ಕೆಲಸ ಮಾಡಿದರು.

ಇದರ ಜತೆಗೆ ಬಚ್ಚಾವತ್ ಆಯೋಗ ಆದೇಶ ಪಾಲನೆ ಮಾಡುವುದು ಮತ್ತೊಂದು ಸವಾಲಿನ ಕೆಲಸವಾಗಿತ್ತು. 2000ನೇ ಇಸವಿಯೊಳಗೆ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 734 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹೆಚ್ಚುವರಿ ನೀರು ಎಂದು ಪರಿಗಣಿಸಿ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶಕ್ಕೆ ಹಂಚಿಕೆ ಮಾಡುವ ಬೆದರಿಕೆ ಹಾಕಿತ್ತು. ನೀರನ್ನು ಸಂಗ್ರಹಿಸಲು ದೇವೇಗೌಡರು ಸಾಕಷ್ಟು ಶ್ರಮವಹಿಸಿದರು ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.