ETV Bharat / bharat

ಅಲಿಗಢ ಮುಸ್ಲಿಂ ವಿವಿಗೆ ಅಲ್ಪಸಂಖ್ಯಾತ ಸ್ಥಾನಮಾನ ನಿರ್ಧರಿಸಲು ಹೊಸ ಪೀಠ ರಚನೆ: ಸಿಜೆಐ

ಅಲಿಗಢ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಶುಕ್ರವಾರ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ (ETV BHARAT)
author img

By ETV Bharat Karnataka Team

Published : 2 hours ago

ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಶುಕ್ರವಾರ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಮೂರು ಭಿನ್ನಾಭಿಪ್ರಾಯದ ತೀರ್ಪುಗಳು ಸೇರಿದಂತೆ ನಾಲ್ಕು ಪ್ರತ್ಯೇಕ ಅಭಿಪ್ರಾಯದ ತೀರ್ಪುಗಳು ಬಂದಿವೆ ಎಂದು ನ್ಯಾಯಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆಬಿ ಪರ್ಡಿವಾಲಾ, ಮನೋಜ್ ಮಿಶ್ರಾ ಮತ್ತು ಸ್ವತಃ ತಮ್ಮ ಪರವಾಗಿ ಬಹುಮತದ ತೀರ್ಪನ್ನು ತಾವು ಬರೆದಿರುವುದಾಗಿ ಸಿಜೆಐ ಹೇಳಿದರು. ಈ ಬಹುಮತದ ತೀರ್ಪಿಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಸ್. ಅಜೀಜ್ ಬಾಷಾ ವಿರುದ್ಧ ಭಾರತ ಸರ್ಕಾರದ ಪ್ರಕರಣದಲ್ಲಿ 1967 ರ ತೀರ್ಪನ್ನು ಬಹುಮತದ ತೀರ್ಪು ತಳ್ಳಿಹಾಕಿದೆ ಎಂದು ಸಿಜೆಐ ಹೇಳಿದರು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ಐದು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠವು ತೀರ್ಪು ನೀಡಿದೆ. ಆದಾಗ್ಯೂ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹೌದಾ ಅಥವಾ ಅಲ್ಲವಾ ಎಂಬ ಪ್ರಶ್ನೆಯ ಮೇಲೆ ಸುಪ್ರೀಂ ಕೋರ್ಟ್ ಯಾವುದೇ ಉತ್ತರ ನೀಡಿಲ್ಲ.

ಮತ್ತೊಂದು ನ್ಯಾಯಪೀಠ ರಚನೆ ಮಾಡಲಾಗುವುದು ಎಂದು ಹೇಳಿದ ಸುಪ್ರೀಂ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನವನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್​ನ 2006 ರ ಆದೇಶದ ಸಿಂಧುತ್ವ ನಿರ್ಧರಿಸಲು ಮತ್ತೊಂದು ನ್ಯಾಯಪೀಠ ರಚಿಸಲಾಗುವುದು ಎಂದು ಅದು ಹೇಳಿದೆ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಸಂವಿಧಾನದ 30 ನೇ ವಿಧಿಯ ಅಡಿ ಎಎಂಯು ಅನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ಪರಿಗಣಿಸಬಹುದೇ ಎಂಬ ಬಗ್ಗೆ ತೀರ್ಪನ್ನು ಕಾಯ್ದಿರಿಸಿತ್ತು.

ಬಹುಮತದ ತೀರ್ಪನ್ನು ಓದಿದ ಸಿಜೆಐ, ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸಲು ಆಧಾರವಾದ ಅಜೀಜ್ ಬಾಷಾ ಪ್ರಕರಣದಲ್ಲಿನ ತೀರ್ಪನ್ನು ತಳ್ಳಿಹಾಕಲಾಗಿದೆ ಎಂದು ಹೇಳಿದರು. ಆದಾಗ್ಯೂ, ಈ ತೀರ್ಪಿನಲ್ಲಿ ವಿಕಸನಗೊಂಡ ತತ್ವಗಳ ಆಧಾರದ ಮೇಲೆ ಎಎಂಯುನ ಅಲ್ಪಸಂಖ್ಯಾತ ಸ್ಥಾನಮಾನವನ್ನು ಹೊಸದಾಗಿ ನಿರ್ಧರಿಸುವ ಅಧಿಕಾರವನ್ನು ಸಿಜೆಐ ಮೂವರು ನ್ಯಾಯಾಧೀಶರ ಪೀಠಕ್ಕೆ ಬಿಟ್ಟರು.

ಬಹುಮತದ ತೀರ್ಪು ಓದಿದ ಸಿಜೆಐ: ಅಲ್ಪಸಂಖ್ಯಾತ ಸಂಸ್ಥೆಯನ್ನು ಅಲ್ಪಸಂಖ್ಯಾತರು ಸ್ಥಾಪಿಸಬೇಕು ಮತ್ತು ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು ಮತ್ತು ಸಂವಿಧಾನದಲ್ಲಿ ಅಲ್ಪಸಂಖ್ಯಾತ ಸಂಸ್ಥೆಯೂ 30 ನೇ ವಿಧಿಯ ಅಡಿ ಸಮಾನ ರಕ್ಷಣೆಯನ್ನು ಪಡೆಯುತ್ತದೆ ಎಂದು ಹೇಳಿದರು.

ಸಂಸತ್ತಿನ ಶಾಸನದಿಂದ ಸ್ಥಾಪಿಸಲ್ಪಟ್ಟಿದೆ ಎಂಬ ಒಂದೇ ಕಾರಣಕ್ಕಾಗಿ ನ್ಯಾಯಾಲಯವು ಎಎಂಯು ಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸಲು ಆಗಲ್ಲ ಎಂದು ಸಿಜೆಐ ಹೇಳಿದರು. ಬದಲಾಗಿ ಇಂಥ ಶಾಸನಕ್ಕೆ ಸಂಬಂಧ ಪಟ್ಟ ಇತರ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ವ್ಯಕ್ತಿಗಳು ಸಂಸ್ಥೆಯನ್ನು ಆರಂಭಿಸಿದರೆ ಮಾತ್ರ ಅದು ಅಲ್ಪಸಂಖ್ಯಾತರ ಕಲ್ಯಾಣದ ಉದ್ದೇಶವನ್ನು ಈಡೇರಿಸುತ್ತದೆ ಎಂದು ಹೇಳುವಂತಿಲ್ಲ. ಸಂಸ್ಥೆಯನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ಸಾಬೀತುಪಡಿಸಲು ಆಡಳಿತವು ಅಲ್ಪಸಂಖ್ಯಾತರ ಕೈಯಲ್ಲಿದೆ ಎಂದು ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸಂಸ್ಥೆಯು ಅಲ್ಪಸಂಖ್ಯಾತ ಗುಣಲಕ್ಷಣವನ್ನು ಹೊಂದಿದೆಯೇ ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದು ಪರಿಶೀಲಿಸಬೇಕಾದ ವಿಷಯವಾಗಿದೆ ಎಂದು ಬಹುಮತದ ತೀರ್ಪು ಒತ್ತಿ ಹೇಳಿತು. ವಿವರವಾದ ತೀರ್ಪನ್ನು ದಿನದಲ್ಲಿ ನಂತರ ಅಪ್ಲೋಡ್​​​ ಮಾಡಲಾಗುವುದು.

ಅಜೀಜ್ ಬಾಷಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನ ಐದು ನ್ಯಾಯಮೂರ್ತಿಗಳ ಪೀಠವು ಎಎಂಯು ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ಸರಿಯಾಗಿ ನಿರ್ಧರಿಸಿದೆ ಮತ್ತು ಅದು ಅಂತಿಮ ಹಂತವನ್ನು ತಲುಪಿದೆ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಎಎಂಯು ಪಾತ್ರದ ಬಗ್ಗೆ ಮತ್ತೆ ಪರಿಶೀಲನೆ ಮಾಡುವ ಅಗತ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ : ತಿರುಪತಿ ಲಡ್ಡು ಕಲಬೆರಕೆ ಆರೋಪದ ಬಗ್ಗೆ ಸಿಬಿಐ ತನಿಖೆ ಕೋರಿದ್ದ ಪಿಐಎಲ್ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.