ETV Bharat / state

ಹಿಂದುಳಿದ ವರ್ಗಗಳ ಹಾಸ್ಟೆಲ್ ಸುಧಾರಣೆಗೆ ಹೆಚ್ಚುವರಿ 250 ಕೋಟಿ ಮಂಜೂರಾತಿ: ಸಿಎಂ - ದೇವರಾಜ ಅರಸು

ದೇವರಾಜ ಅರಸು ಅವರು ನಮಗೆ ದೊಡ್ಡ ಪ್ರೇರಣೆಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ಹೆಜ್ಜೆ ಇಡಲಿದೆ. ಅರಸು ಆದರ್ಶವನ್ನು ನಾವು ಜೀವಂತವಾಗಿಸಿದ್ದೇವೆ. ಕೆಲಸಗಳೇ ಅವರ ಜೀವಂತಿಕೆಗೆ ಸಾಕ್ಷಿಯಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

Etv Bharatdevaraj-urs-birth-anniversary-celebration
Etv Bharatಹಿಂದುಳಿದ ವರ್ಗಗಳ ಹಾಸ್ಟೆಲ್ ಸುಧಾರಣೆಗೆ ಹೆಚ್ಚುವರಿ 250 ಕೋಟಿ ಮಂಜೂರಾತಿ: ಸಿಎಂ
author img

By

Published : Aug 20, 2022, 4:08 PM IST

ಬೆಂಗಳೂರು: ಹಿಂದುಳಿದ ವರ್ಗ ವಿದ್ಯಾರ್ಥಿಗಳ ಹಾಸ್ಟೆಲ್​ಗಳಲ್ಲಿ ಮೂಲಭೂತ ಸವಲತ್ತು ಸುಧಾರಣೆಗಾಗಿ 250 ಕೋಟಿ ರೂಪಾಯಿ ಮಂಜೂರಾತಿ ಮಾಡಲಾಗುವುದು. ಹಿಂದುಳಿದ ವರ್ಗಗಳ ನಿಗಮಗಳಿಗೆ ಈಗಾಗಲೇ ಹೆಚ್ಚುವರಿ ಸುಮಾರು 800 ಕೋಟಿ ರೂ. ಅನುದಾನ ನೀಡಿದ್ದೇನೆ. ಅರಸು ಕನಸು ನನಸು ಮಾಡುವುದೇ ನಮ್ಮ‌ ಉದ್ದೇಶ, ಅವರ ವಿಚಾರಗಳನ್ನು ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ವಿಧಾನಸೌಧದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಹಾಸ್ಟೆಲ್ ಸುಧಾರಣೆಗೆ 150 ಕೋಟಿ ರೂ., ಬೇರೆ ಸೌಲಭ್ಯಕ್ಕಾಗಿ 100 ಕೋಟಿ ರೂ. ಸೇರಿ 250 ಕೋಟಿ ರೂಪಾಯಿ ಬಿಡುಗಡೆಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದರು. ಶೀಘ್ರದಲೇ 250 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಮಂಜೂರಾತಿ ನೀಡಲಾಗುವುದು ಎಂದರು.

ಅರಸು ನಮಗೆ ದೊಡ್ಡ ಪ್ರೇರಣೆಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ಹೆಜ್ಜೆ ಇಡಲಿದೆ. ದೇವರಾಜ ಅರಸು ಆದರ್ಶವನ್ನು ನಾವು ಜೀವಂತವಾಗಿಸಿದ್ದೇವೆ. ಕೆಲಸಗಳೇ ಅವರ ಜೀವಂತಿಕೆಗೆ ಸಾಕ್ಷಿಯಾಗಿದೆ. ನಾಡು‌ ಕಟ್ಟುವ ಪ್ರೇರಣೆ ನೀಡುವ ಕೆಲವೇ ಕೆಲವು ನಾಯಕರಲ್ಲಿ ದೇವರಾಜ ಅರಸು ಒಬ್ಬರು. ಅರಸುರನ್ನು ನೋಡಿದಾಕ್ಷಣ ಅವರ ಮೇಲೆ ಪ್ರೀತಿ, ಅಭಿಮಾನ, ಗೌರವ ಹುಟ್ಟುತ್ತಿತ್ತು. ಭೂ ಸುಧಾರಣೆ ಕಾಯ್ದೆ ಅವರ ದೊಡ್ಡ ಕೊಡುಗೆಯಾಗಿದೆ. ಊಳುವವನೇ ಒಡೆಯ ಎಂಬ ಚಳವಳಿಗೆ ಕಾನೂನು ಮಾನ್ಯತೆ ಕೊಟ್ಟವರು ಎಂದು ಸಿಎಂ ಹೇಳಿದರು.

ಇದನ್ನೂ ಓದಿ: ಇಂಟಿಗ್ರೇಟೆಡ್ ಟೌನ್​ಷಿಪ್ ಯೋಜನೆ: ಪರಿಣತ ವಿವಿಗಳ ಸಹಯೋಗ ಪಡೆಯಲು ಸಿಎಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.