ಬೆಂಗಳೂರು: ಹೊರ ರಾಜ್ಯದಿಂದ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಕೆಂಪೆಗೌಡನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಬೆಳಗ್ಗೆ ಸುಮಾರು 9.30ರ ವೇಳೆಗೆ ಬಂಡಿಮಹಾಕಾಳಿ ದೇವಸ್ಥಾನದ ಬಳಿ ಆಟೋದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಪರಿಕಲ ವೆಂಕಟರಮಣ ಹಾಗೂ ಮುನೀರ್ ಬಾನ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಅರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆಯಲು ಬಲೆ ಬೀಸಿದ್ದಾರೆ. ಈಗಾಗಲೇ ಆರೋಪಿಗಳಿಂದ 104 ಕೆಜಿ 300 ಗ್ರಾಂ ಗಾಂಜಾ ಸೇರಿದಂತೆ ಅಟೋ ಹಾಗೂ ಇಬ್ಬರ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
![press release](https://etvbharatimages.akamaized.net/etvbharat/prod-images/10004951_651_10004951_1608897430043.png)
ಓದಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರ ಬಂಧನ
ಹೊಸ ವರ್ಷದ ಪಾರ್ಟಿ ಮಾಡಲು ಈಗಾಗಲೇ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಎಲ್ಲೆಡೆ ನಡೆಯುತ್ತಿದ್ದು, ನಗರದ ಪೊಲೀಸರು ಎಲ್ಲೆಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ನಗರದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರ ಮಾರ್ಗಸೂಚಿಯಂತೆ ವಿ.ವಿ.ಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ, ಕೆಂಪೇಗೌಡನಗರ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಅವರ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಅರೋಪಿಗಳನ್ನ ಬಂಧಿಸಲಾಗಿದೆ.