ಬೆಂಗಳೂರು: ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ನೊಂದಿಗೆ ಸೇರಿ ತಪ್ಪು ಲೆಕ್ಕ ತೋರಿಸಿ ಹೂಡಿಕೆದಾರರಿಗೆ ಯಮಾರಿಸಿರುವ ಆರೋಪದ ಮೇಲೆ ಸಂಸ್ಥೆಯ ಲೆಕ್ಕ ಪರಿಶೋಧಕನಾಗಿದ್ದ ಇಕ್ಬಾಲ್ ಖಾನ್ ಎಂಬಾತನನ್ನು ಎಸ್ಐಟಿ ಬಂಧಿಸಿದೆ.
ಹಲವು ವರ್ಷಗಳಿಂದ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಇಕ್ಬಾಲ್, ಐಎಂಎ ಕಂಪನಿಯಲ್ಲಿ ತಪ್ಪು ಲೆಕ್ಕಗಳ ದಾಖಲೆ ಸಲ್ಲಿಕೆ ಮಾಡಿ ಕಂಪನಿ ಲಾಭದಾಯಕವಾಗಿ ನಡೆಯುತ್ತಿತ್ತು.
ಹೂಡಿಕೆದಾರರು ಕಂಪನಿಯಲ್ಲಿ ತಮ್ಮ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿಸುತ್ತಿದ್ದರು ಎಂಬ ಕಾರಣಕ್ಕಾಗಿ ಎಸ್ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.