ETV Bharat / state

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಆರೋಪಿಗಳ ಬಂಧನ - ಹೈಟೆಕ್ ವೇಶ್ಯವಾಟಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ

ಸಿಲಿಕಾನ್​ ಸಿಟಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳ ಅಡ್ಡೆ ಮೇಲೆ ಸಿಸಿಬಿ ಡಿಸಿಪಿ ಕುಲ್ದೀಪ್​​​ ನೇತೃತ್ವದ ತಂಡ ದಾಳಿ ನಡೆಸಿದೆ.

banglore
ಹೈಟೆಕ್ ವೇಶ್ಯವಾಟಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ
author img

By

Published : Jul 28, 2020, 1:10 PM IST

ಬೆಂಗಳೂರು: ಹುಳಿಮಾವು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಲಾಡ್ಜ್ ನಡೆಸಲು ಪರವಾನಗಿ ಪಡೆದರೂ, ಪರವಾನಗಿಯ ನಿಯಮಗಳನ್ನ ಗಾಳಿಗೆ ತೂರಿ ಕಾನೂನು ಬಾಹಿರವಾಗ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ತಂಡ ದಾಳಿ ನಡೆಸಿ ಗೌರವ್ ರಾಜ್, ಹೀನಾ ಸಿಂಗ್, ಅಣ್ಣಪ್ಪ ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ.

ಇನ್ನು ಆರೋಪಿ ಗೌರವ್ ರಾಜ್ ಹಾಗೂ ಹೀನಾ ಸಿಂಗ್ ದಂಪತಿಗಳಾಗಿದ್ದು, ಅಧಿಕ ಹಣಗಳಿಸುವ ಉದ್ದೇಶದಿಂದ ಆನ್​ಲೈನ್​ನಲ್ಲಿ ತಮ್ಮ ಮೊಬೈಲ್ ನಂಬರ್ ಅಳವಡಿಕೆ ಮಾಡಿಕೊಂಡು ಟೆಲಿಕಾಲರ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ದಂಧೆಗೆ ಅಮಾಯಕ ಹೊರ ರಾಜ್ಯದ ಬಡ ಹೆಣ್ಣು ಮಕ್ಕಳನ್ನ ಟಾರ್ಗೇಟ್ ಮಾಡಿ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೊದಲೇ ಹುಳಿಮಾವು ಬಳಿ ಇರುವ ಲಾಡ್ಜ್​​ ಅನ್ನು ಓಯೋ ಕಂಪನಿ ಮೂಲಕ​​​ ಬುಕ್​ಮಾಡಿ ದಂಧೆ ಮಾಡುತ್ತಿದ್ದರು. ಈ ದಂಧೆಗೆ ಹೋಟೆಲ್​​ ಮ್ಯಾನೇಜರ್ ಸಾಥ್ ನೀಡಿದ್ದ ಎಂದು ತಿಳಿದು ಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳ ಬಳಿಯಿಂದ ಮೊಬೈಲ್ ಫೋನ್, ನಗದು ವಶಪಡಿಸಿ ಅಮಾಯಕ ಹೆಣ್ಣು ಮಕ್ಕಳನ್ನ ರಕ್ಷಿಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.