ETV Bharat / state

ಬೆಂಗಳೂರಿನಲ್ಲಿ ಇಂದು 28 ಕೊರೊನಾ ಪ್ರಕರಣ ಪತ್ತೆ: ಓರ್ವ ಸಾವು - ಬೆಂಗಳೂರು ಕೊರೊನಾ ಅಪ್ಡೆಟ್​

ಬೆಂಗಳೂರು ನಗರ ಜಿಲ್ಲೆ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದು ಒಟ್ಟು 28 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಸೋಂಕು ದೃಢಪಟ್ಟಿದ್ದ 90 ವರ್ಷದ ಬಿಹಾರಿ ಮೂಲದ ಕಾರ್ಮಿಕ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ.

Detective of 28 positive cases in Bangalore today
ಬೆಂಗಳೂರಿನಲ್ಲಿ ಇಂದು 28 ಪಾಸಿಟಿವ್ ಪ್ರಕರಣದ ಪತ್ತೆ
author img

By

Published : Jun 1, 2020, 9:30 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಹಾಗೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 16 ಸೇರಿ ಒಟ್ಟು 28 ಜನರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.

ಈ ಪೈಕಿ 16 ಜನರು ಅಂತಾರಾಜ್ಯ ಪ್ರಯಾಣಿಕರಾಗಿದ್ದಾರೆ. ಪಿ-2519, 61 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಅವರ ಜೊತೆ ಸಂಪರ್ಕ ಹೊಂದಿದ್ದ 35 ವರ್ಷದ ಮಗಳು ಹಾಗೂ 56 ವರ್ಷ ಮತ್ತು 42 ವರ್ಷದ ಇತರ ಇಬ್ಬರಿಗೆ ಸೋಂಕು ತಗುಲಿದೆ. ಪಿ-3373, 43 ವರ್ಷದ ಜೆ.ಜೆ.ನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಪಿ-3269, 28 ವರ್ಷದ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಉಳಿದಂತೆ ಎಲ್ಲರೂ ಬೇರೆ ರಾಜ್ಯದ ಪ್ರಯಾಣ ಹಿನ್ನೆಲೆಯುಳ್ಳವರಾಗಿದ್ದಾರೆ.

ಇಂದು ಸಂಜೆಯ ಬಳಿಕ ಆಡುಗೋಡಿಯ ಪೊಲೀಸ್ ಸಿಬ್ಬಂದಿ ಒಬ್ಬರಿಗೆ ಪಾಸಿಟಿವ್ ಬಂದಿದ್ದು, ನಾಳೆಯ ವರದಿಯಲ್ಲಿ ಪ್ರಕಟವಾಗಲಿದೆ. ಇದರ ಜೊತೆಗೆ ಬಿಬಿಎಂಪಿ ಅಧಿಕಾರಿಯೊಬ್ಬರನ್ನು ಮರು ಪರೀಕ್ಷೆಗೆ ಒಳಪಡಿಸಲಾಗಿದೆ. ಪಿ-419ರ ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದ 90 ವರ್ಷದ ಬಿಹಾರಿ ಕಾರ್ಮಿಕ ಪಿ-492 ಇಂದು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ.

ನಗರದಲ್ಲಿ ಇಂದು ಪತ್ತೆಯಾದ ಕೊರೊನಾ ಪ್ರಕರಣಗಳ ವಿವರ:

ಪಿ-3269 -28 ವರ್ಷದ ಯುವಕ, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-3270 - 56 ವರ್ಷದ ಪುರುಷ- ಪಿ-2519ರ ಸಂಪರ್ಕ.

ಪಿ- 3314- 35 ವರ್ಷದ ಮಹಿಳೆ - ಪಿ-2519ರ ಸಂಪರ್ಕ.

ಪಿ- 3334 - 42 ವರ್ಷದ ಪುರುಷ- ಪಿ-2519ರ ಸಂಪರ್ಕ.

ಪಿ-3360ರಿಂದ P-3372- ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ಹಿಂದಿರುಗಿದವರು.

ಪಿ-3373- 43 ವರ್ಷದ ಪುರುಷ - ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ- 3399ರಿಂದ ಪಿ-3408 - ಮಹಾರಾಷ್ಟ್ರದಿಂದ ಹಿಂದಿರುಗಿದವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.