ETV Bharat / state

ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ ಉನ್ನತ ಶಿಕ್ಷಣ ಇಲಾಖೆ: ಇಲ್ಲಿದೆ ಸಂಪೂರ್ಣ ಮಾಹಿತಿ - ಶಾಲಾ ಕಾಲೇಜು ಓಪನ್​

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಿರುವ ಹಿನ್ನೆಲೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಶಾಲಾ-ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದ್ದು, ಇದೀಗ ಉನ್ನತ ಶಿಕ್ಷಣ ಇಲಾಖೆ ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.

File Pic
ಸಂಗ್ರಹ ಚಿತ್ರ
author img

By

Published : Jan 30, 2021, 6:06 PM IST

ಬೆಂಗಳೂರು: ಕೊರೊನಾ ತಂದೊಡ್ಡಿದ ಸಂಕಷ್ಟದಿಂದ ಶಾಲಾ-ಕಾಲೇಜುಗಳು ಇಷ್ಟು ದಿನಗಳ ಕಾಲ ಬಂದ್​ ಆಗಿದ್ದು, ಇದೀಗ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆ ಮತ್ತೆ ಶೈಕ್ಷಣಿಕ ವರ್ಷ ಶುರು ಮಾಡಲು ಇಲಾಖೆಗಳು ಸಿದ್ಧಗೊಳ್ಳುತ್ತಿವೆ.

2020-21 ಮತ್ತು 2021-2022ನೇ ಸಾಲಿನ ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಇದರನ್ವಯ ಎಲ್ಲಾ ವಿಶ್ವವಿದ್ಯಾಲಯಗಳು/ ಕಾಲೇಜು ಶಿಕ್ಷಣ / ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಪದವಿ ಪೂರ್ವ ಕಾಲೇಜು(ಯುಜಿ) 2021-22ನೇ ಶೈಕ್ಷಣಿಕ ವರ್ಷ:

  • 1, 3 ಮತ್ತು 5ನೇ ಸೆಮಿಸ್ಟರ್ ಕ್ಲಾಸ್-2021ರ ಅಕ್ಟೋಬರ್ 4ರಂದು ಆರಂಭ, 2022ರ ಜನವರಿ 31ಕ್ಕೆ ತರಗತಿ ಮುಕ್ತಾಯ ಹಾಗೂ ಫೆಬ್ರವರಿ 28ಕ್ಕೆ ಪರೀಕ್ಷೆಗಳು ಮುಕ್ತಾಯ.
  • 2, 4, ಮತ್ತು 6ನೇ ಸೆಮಿಸ್ಟರ್ ಕ್ಲಾಸ್- 2022ರ ಮಾರ್ಚ್ 1ರಂದು ಆರಂಭವಾಗಿ ಜೂನ್ 30ರಂದು ಮುಗಿಯಲಿದೆ. ಜುಲೈ 31ರಲ್ಲಿ ಪರೀಕ್ಷೆ ನಡೆಯಲಿದ್ದು, ಆಗಸ್ಟ್ 14ರಂದು ಫಲಿತಾಂಶ ಬರಲಿದೆ

ಯುಜಿ ಇಂಜಿನಿಯರಿಂಗ್ 2021-22:

  • 1, 3 ಮತ್ತು 4, 7ನೇ ಸೆಮಿಸ್ಟರ್ ಕ್ಲಾಸ್- 2021ರ ಅಕ್ಟೋಬರ್ 4ರಂದು ಆರಂಭವಾಗಿ 2022ರ ಜನವರಿ 31ಕ್ಕೆ ಮುಕ್ತಾಯ ಹಾಗೂ ಫೆಬ್ರವರಿ 28ಕ್ಕೆ ಪರೀಕ್ಷೆಗಳು ಮುಕ್ತಾಯ.
  • 2, 4, ಮತ್ತು 6, 8ನೇ ಸೆಮಿಸ್ಟರ್ ಕ್ಲಾಸ್- 2022ರ ಮಾರ್ಚ್ 1ರಂದು ಆರಂಭವಾಗಿ ಜೂನ್ 30ರಂದು ಮುಗಿಯಲಿದೆ. ಜುಲೈ 31ರಂದು ಪರೀಕ್ಷೆ ನಡೆಯಲಿದ್ದು, ಆಗಸ್ಟ್ 14ರಂದು ಫಲಿತಾಂಶ ಬರಲಿದೆ.

ಸ್ನಾತಕೋತ್ತರ ಪದವಿ ತರಗತಿಗಳು:

  • 1 ಮತ್ತು 3ನೇ ಸೆಮಿಸ್ಟರ್ ಕ್ಲಾಸ್- 2021ರ ಅಕ್ಟೋಬರ್ 4ರಂದು ಆರಂಭವಾಗಿ, 2022ರ ಜನವರಿ 31ರಂದು ತರಗತಿ ಮುಕ್ತಾಯ ಹಾಗೂ ಫೆಬ್ರವರಿ 28ಕ್ಕೆ ಪರೀಕ್ಷೆಗಳು ಮುಕ್ತಾಯ.
  • 2 ಮತ್ತು 4ನೇ ಸೆಮಿಸ್ಟರ್ ಕ್ಲಾಸ್- 2022ರ ಮಾರ್ಚ್ 1ರಂದು ಆರಂಭವಾಗಿ ಜೂನ್ 30ರಂದು ಮುಗಿಯಲಿದೆ. ಜುಲೈ 31ರೊಳಗೆ ಪರೀಕ್ಷೆ ನಡೆಯಲಿದ್ದು, ಆಗಸ್ಟ್ 14ರಂದು ಫಲಿತಾಂಶ ಬರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.