ETV Bharat / state

ಮದುವೆ ಬಳಿಕ ಲೈಂಗಿಕತೆ ನಿರಾಕರಿಸುವುದು ಕ್ರೌರ್ಯ, ಆದರೆ ಅದು ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್​

ದಾಂಪತ್ಯ ಜೀವನದಲ್ಲಿ ಗಂಡ ಹೆಂಡ್ತಿ ಪರಸ್ಪರ ಲೈಂಗಿಕತೆ ನಿರಾಕರಿಸಿದರೆ ಅದು ಕ್ರೌರ್ಯಕ್ಕೆ ಸಮಾನ ಎಂದು ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು ನೀಡಿ ಆದೇಶಿಸಿದೆ.

Denial of sex is cruelty  Denial of sex is cruelty but not an offence  rules Karnataka HC  ಮದುವೆ ಬಳಿಕ ಲೈಂಗಿಕತೆ ನಿರಾಕರಿಸುವುದು ಕ್ರೌರ್ಯ  ಕರ್ನಾಟಕ ಹೈಕೋರ್ಟ್​ ಲೈಂಗಿಕತೆ ನಿರಾಕರಿಸಿದ್ರೆ ಅದು ಕ್ರೌರ್ಯ  ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು  ಶಾರೀರಿಕ ಸಂಬಂಧ ನಿರಾಕರಿಸಿದ ಪ್ರಕರಣ  ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದು  ಭಾರತೀಯ ದಂಡ ಸಂಹಿತೆಯ ಸೆಕ್ಷನ್  ಆತನೊಬ್ಬ ಧಾರ್ಮಿಕ ಅನುಯಾಯಿ
ಮದುವೆ ಬಳಿಕ ಲೈಂಗಿಕತೆ ನಿರಾಕರಿಸುವುದು ಕ್ರೌರ್ಯ
author img

By

Published : Jun 20, 2023, 1:31 PM IST

ಬೆಂಗಳೂರು: ಶಾರೀರಿಕ ಸಂಬಂಧ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಮತ್ತು ಆತನ ಪೋಷಕರ ವಿರುದ್ಧ ಪತ್ನಿ ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಹಿಂದೂ ವಿವಾಹ ಕಾಯಿದೆ-1955 ರ ಪ್ರಕಾರ, ಪತಿಯಿಂದ ದೈಹಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ. ಆದರೆ ಐಪಿಸಿ ಸೆಕ್ಷನ್ 489A ಅಡಿಯಲ್ಲಿ ಈ ಪ್ರಕರಣ ಬರುವುದಿಲ್ಲ ಮತ್ತು ಇದು ಅಪರಾಧವೂ ಅಲ್ಲ ಎಂದು ಪೀಠವು ಗಮನಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಹಾಗೂ 1961ರ ವರದಕ್ಷಿಣೆ ವಿರೋಧಿ ಕಾಯ್ದೆಯ ಸೆಕ್ಷನ್ 4ರ ಅಡಿ ತನ್ನ ಪೋಷಕರು ಹಾಗೂ ತನ್ನ ವಿರುದ್ಧ ಪೊಲೀಸರು ಸಲ್ಲಿಸಿದ ಆರೋಪಪಟ್ಟಿ ವಿರುದ್ಧ ಪತಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ವಿರುದ್ಧ ಇರುವ ಒಂದೇ ಒಂದು ಆರೋಪ ಎಂದರೆ, ಆತನೊಬ್ಬ ಧಾರ್ಮಿಕ ಅನುಯಾಯಿ ಆಗಿದ್ದಾರೆ. ಆತ ಹೇಳಿದಂತೆ ಪ್ರೀತಿ ಎಂದರೆ ದೈಹಿಕ ಸಂಬಂಧವಲ್ಲ. ಅದು ಆತ್ಮಗಳ ಸಮ್ಮಿಲನ ಎಂದಿದ್ದಾರೆ. ಹೀಗಾಗಿ ಪತ್ನಿಯ ಜೊತೆ ದೈಹಿಕ ಸಂಬಂಧ ನಡೆಸಲು ಆತ ನಿರಾಕರಿಸಿರುವುದನ್ನು ಪೀಠವು ಗಮನಿಸಿದೆ.

ಅರ್ಜಿದಾರ ತನ್ನ ಪತ್ನಿ ಜೊತೆ ದೈಹಿಕ ಸಂಬಂಧ ಹೊಂದುವ ಬಗ್ಗೆ ಯೋಚಿಸಿಯೇ ಇಲ್ಲ. ಇದು ನಿಶಂಸೆಯವಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12 (1) (ಎ) ಅಡಿಯಲ್ಲಿ ಕ್ರೌರ್ಯವಾಗುತ್ತದೆ. ಆದರೆ ಇದು ಭಾರತೀಯ ದಂಡ ಸಂಹಿತೆಯ 498 (ಎ) ಅಡಿ ಉಲ್ಲೇಖಿಸಿದ ಅಪರಾಧದಡಿ ಬರುವುದಿಲ್ಲ ಎಂದು ಪೀಠ ಹೇಳುವ ಮೂಲಕ ಪತಿ ಹಾಗೂ ಆತನ ಪೋಷಕರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತು.

ಪತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದುವರಿಸಲಾಗುವುದಿಲ್ಲ. ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಮತ್ತು ತಪ್ಪು ನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ದಂಪತಿಗಳು ಡಿಸೆಂಬರ್ 18, 2019 ರಂದು ವಿವಾಹವಾಗಿದ್ದರು ಮತ್ತು ದೂರುದಾರರ ಪತ್ನಿ ಕೇವಲ 28 ದಿನಗಳ ಕಾಲ ಗಂಡನೊಂದಿಗೆ ಕಾಲ ಕಳೆದಿದ್ದರು. ಬಳಿಕ ಪತ್ನಿ ಫೆಬ್ರವರಿ 5, 2020 ರಂದು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.

2019ರ ಡಿಸೆಂಬರ್ 18 ರಂದು ಈ ಜೋಡಿ ವಿವಾಹವಾಗಿತ್ತು. ಮಹಿಳೆ ತನ್ನ ಪತಿಯ ಮನೆಯಲ್ಲಿ ಕೇವಲ 28 ದಿನಗಳು ಮಾತ್ರ ಜೀವನ ನಡೆಸಿದ್ದರು. ಬಳಿಕ 2022 ಫೆಬ್ರವರಿ 5 ರಂದು ಪತ್ನಿ ಐಪಿಸಿ ಸೆಕ್ಷನ್ 498 ಎ ಅಡಿ ಹಾಗೂ ವರದಕ್ಷಿಣೆ ಕಾಯ್ದೆಯಡಿ ಪತಿ ಹಾಗೂ ಆತನ ಪೋಷಕರ ವಿರುದ್ಧ ಮೊಕದ್ದಮೆ ಹೂಡಿದ್ದರು. ಇದರ ಜೊತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಮದುವೆ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.

2022ರ ನವಂಬರ್‌ನಲ್ಲಿ ಮದುವೆಯನ್ನು ರದ್ದುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಸೂಕ್ಷ್ಮವಾಗಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ನವೆಂಬರ್ 16, 2022 ರಂದು ಇವರ ಮದುವೆಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದಾದ ಬಳಿಕವೂ ಪತ್ನಿ ಆತನ ಮಾಜಿ ಗಂಡನ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರಿಸಿದ್ದರು.

ಪತ್ನಿ ಸಲ್ಲಿಸಿದ ದೂರಿನ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದರ ವಿರುದ್ಧ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕ್ರಿಮಿನಲ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅನುಮತಿ ನೀಡಲಾಗುವುದಿಲ್ಲ. ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಹೇಳಿ ಪ್ರಕರಣ ರದ್ದುಗೊಳಿಸಿ ಆದೇಶ ನೀಡಿದೆ.

ಓದಿ: 2 ತಿಂಗಳು ಆರೋಪಿಗಳನ್ನು ಬಂಧಿಸುವಂತಿಲ್ಲ: ವರದಕ್ಷಿಣೆ ಕಿರುಕುಳ ಕೇಸ್​ ಕುರಿತು ಮಹತ್ವದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.