ಬೆಂಗಳೂರು : ಇಂದು ಹೆಚ್‌ಟಿಟಿ-40 ಟ್ರೈನಿಂಗ್ ವಿಮಾನದ ಬೆಲೆಯ ಬಗ್ಗೆ ಪತ್ರ (RFP) ಸಲ್ಲಿಸಲು ವಾಯುಪಡೆ ಹೆಚ್‌ಎಎಲ್‌ಗೆ ಕೇಳಿದೆ.
ಆರ್‌ಎಫ್‌ಪಿ ಪ್ರಕಾರ ಮೊದಲ ಹಂತದಲ್ಲಿ 70 ವಿಮಾನಗಳ ನಂತರ 38 ವಿಮಾನಗಳ ಬಗ್ಗೆ ಮಾತುಕತೆ ನಡೆದಿದೆ. ಈ ಸಂಬಂಧ ಯಲಹಂಕ ವಾಯುನೆಲೆ ಏರೋ ಇಂಡಿಯಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್, ರಕ್ಷಣಾ ಇಲಾಖೆ ಹೆಚ್‌ಟಿಟಿ-40 ಕುರಿತ ಆರ್‌ಎಫ್‌ಪಿ ಕೇಳಿದೆ. ಈ ವಿಷಯವಾಗಿ ಹೆಚ್‌ಎಎಲ್ ಸಂತಸ ವ್ಯಕ್ತ ಪಡಿಸಿದೆ. ಹೆಚ್‌ಟಿಟಿ-40 ವಿಮಾನ ವಾಯು ಪಡೆಯ ಪೈಲೆಟ್‌ಗಳ ಪ್ರಾಥಮಿಕ ಹಂತದ ಟ್ರೈನಿಂಗ್‌ಗೆ ಬಳಸಲಾಗುತ್ತದೆ. ನಂತರ ಎರಡನೇ ಹಂತದ ಟ್ರೈನಿಂಗ್‌ಗೆ ಹಾಕ್ ವಿಮಾನ ನೀಡಲಾಗುತ್ತದೆ ಎಂದು ವಿವರಣೆ ನೀಡಿದರು.
ಓದಿ: ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಬಂಡವಾಳ ಹೂಡಿಕೆ ಹಿಂತೆಗೆತ ಶೀಘ್ರ ಶುರು: ನೀತಿ ಆಯೋಗ
ಎಲ್‌ಸಿಎ ತೇಜಸ್ ಒಪ್ಪಂದಕ್ಕೆ ಹೆಚ್‌ಎಎಲ್ - ರಕ್ಷಣಾ ಇಲಾಖೆ ಸಹಿ ಹಾಕಿರುವುದು ಹೆಮ್ಮೆಯ ವಿಚಾರ. ನಮಗೆ ವಿಶ್ವಾಸವಿದೆ ಅವಧಿಗೂ ಮುನ್ನವೇ 84 ವಿಮಾನಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಸದ್ಯಕ್ಕೆ ಸಿಎಟಿ ತಂತ್ರಜ್ನಾನದ ಕುರಿತು ಹೆಚ್‌ಎಎಲ್ ಸಾಕಷ್ಟು ಶ್ರಮ ಪಡುತ್ತಿದ್ದು, ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗವಂಥ ತಂತ್ರಜ್ಞಾನ ಹೊರ ಬರಲಿದೆ. ಒಟ್ಟಾರೆ ತೇಜಸ್ ಒಪ್ಪಂದ ಹೆಚ್‌ಎಎಲ್‌ಗೆ ಉತ್ತೇಜನೆ ನೀಡಿದ್ದು, ಈ ವರ್ಷದ ಕೊನೆಯಲ್ಲಿ ಸುಖೋಯ್ ವಿಮಾನದ ನವೀಕರಣಕ್ಕೂ ಸಂಸ್ಥೆ ಸಜ್ಜಾಗಿದೆ.