ETV Bharat / state

ನಿಗಮ ಮಂಡಳಿ ಅಧಿಕಾರ ಸ್ವೀಕರಿಸದ ಪರಾಜಿತ ಅಭ್ಯರ್ಥಿಗಳು: ಬಿಎಸ್​ವೈಗೆ ಮತ್ತೆ ಸಂಕಷ್ಟ ಶುರು

ನಿಗಮ-ಮಂಡಳಿಗಳಿಗೆ ನೇಮಿಸಿ ಆದೇಶ ಹೊರಡಿಸಿ ಒಂದು ವಾರ ಕಳೆದರೂ ಕ್ಯಾರೇ ಅನ್ನದ ಬಿಜೆಪಿ ಪರಾಜಿತ ಅಭ್ಯರ್ಥಿಗಳು, ಅಧಿಕಾರ ಬೇಡ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಅನರ್ಹರ ಮತ್ತು ಪರಾಜಿತರಿಂದ ತಲೆನೋವು ಶುರುವಾಗಿದೆ ಎನ್ನಲಾಗ್ತಿದೆ.

ಬಿ.ಎಸ್‌.ಯಡಿಯೂರಪ್ಪ
author img

By

Published : Oct 16, 2019, 7:43 PM IST

ಬೆಂಗಳೂರು: ಅನರ್ಹ ಶಾಸಕರಿಗೆ ಅಡ್ಡಿಯಾಗಿದ್ದವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ನಿರಾಳರಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ‌ ಮತ್ತೆ ತಲೆನೋವು ಶುರುವಾಗಿದೆ. ಕೇವಲ ಓರ್ವ ಮಾತ್ರ ಅಧಿಕಾರ ಸ್ವೀಕರಿಸಿದ್ದು, ಉಳಿದವರು ಬಂಡಾಯದ ಕಹಳೆ ಮೊಳಗಿಸುವ ಸುಳಿವು ನೀಡಿದ್ದಾರೆ.

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಗೆ ಇನ್ನೂ ತಲೆನೋವು ಮುಗಿದಿಲ್ಲ. ನಿಗಮ-ಮಂಡಳಿ ನೀಡಿದರೂ ಇನ್ನೂ ಅಧಿಕಾರ ವಹಿಸಿಕೊಳ್ಳದ ಪರಾಜಿತ ಅಭ್ಯರ್ಥಿಗಳು ಬಂಡಾಯದ ಸುಳಿವು ನೀಡಿದ್ದಾರೆ. 8 ಪರಾಜಿತ ಅಭ್ಯರ್ಥಿಗಳ ಪೈಕಿ ಒಬ್ಬರು ಮಾತ್ರ ಅಧಿಕಾರ ಸ್ವೀಕಾರ ಮಾಡಿದ್ದಾರೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಯಲ್ಲಾಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಿ.ಎಸ್. ಪಾಟೀಲ್ ಅಧಿಕಾರ ವಹಿಸಿಕೊಂಡಿದ್ದು, ಉಳಿದ ಏಳು ಪರಾಜಿತರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಇದರಿಂದಾಗಿ ಪರಾಜಿತರಿಗೆ ನಿಗಮ-ಮಂಡಳಿ ಅಧಿಕಾರ ನೀಡಿ ಅನರ್ಹ ಶಾಸಕರನ್ನು ಸಮಾಧಾನಪಡಿಸುವ ಬಿಜೆಪಿ ಯತ್ನಕ್ಕೆ ಹಿನ್ನೆಡೆಯಾದಂತಾಗಿದೆ.

ನಿಗಮ-ಮಂಡಳಿಗೆ ನೇಮಕಾತಿ ಆದೇಶ ಮಾಡಿ ಒಂದು ವಾರ ಕಳೆದರೂ ಇದಕ್ಕೆ ಕ್ಯಾರೇ ಅನ್ನದ ಪರಾಜಿತ ಅಭ್ಯರ್ಥಿಗಳು, ಅಧಿಕಾರ ಬೇಡ ಟಿಕೆಟ್ ಬೇಕು ಎಂದು ಪಟ್ಟು ಮುಂದುವರಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಅನರ್ಹರ ಮತ್ತು ಪರಾಜಿತರಿಂದ ಮತ್ತೊಂದು ಸಂಕಷ್ಟ ಎದುರಾಗಿದೆ.

ಅನರ್ಹ ಶಾಸಕರಿಗೆ ಅಡ್ಡಿಯಾಗಿದ್ದವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ಅಸಮಾಧಾನ ಶಮನಕ್ಕೆ ಸಿಎಂ ಯತ್ನಿಸಿದ್ದರು. ಶರತ್ ಬಚ್ಚೇಗೌಡ, ಯುಬಿ ಬಣಕಾರ್, ನಂದೀಶ್ ರೆಡ್ಡಿ, ರಾಜು ಕಾಗೆ, ಅಶೋಕ್ ಪೂಜಾರಿ ಸೇರಿದಂತೆ 8 ಮಂದಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.

  1. ಅಶೋಕ್ ಪೂಜಾರಿ - ಗಡಿ ಅಭಿವೃದ್ಧಿ ಪ್ರಾಧಿಕಾರ( ಗೋಕಾಕ್)
  2. ಭರಮಗೌಡ (ರಾಜು)ಕಾಗೆ - ಅಧ್ಯಕ್ಷರು ಕಾಡಾ ಬೆಳಗಾವಿ (ಕಾಗವಾಡ)
  3. ಯಬಿ ಬಣಕಾರ್ - ಅಧ್ಯಕ್ಷರು, ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣ ನಿಗಮ (ಹಿರೇಕೇರೂರು)
  4. ಬಸವನ ಗೌಡ ತುರವಿಹಾಳ- ಅಧ್ಯಕ್ಷರು, ಕಾಡಾ ಮುನಿರಾಬಾದ್ ರಾಯಚೂರು( ಮಸ್ಕಿ)
  5. ವಿ ಎಸ್ ಪಾಟೀಲ್- ಅಧ್ಯಕ್ಷರು, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ
  6. ಹೆಚ್ ಆರ್ ಗವಿಯಪ್ಪ- ಅಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
  7. ನಂದೀಶ್ ರೆಡ್ಡಿ, ಉಪಾಧ್ಯಕ್ಷರು, ಬಿಎಂಟಿಸಿ (ಕೆಆರ್ ಪುರಂ)
  8. ಶರತ್ ಬಚ್ಚೇಗೌಡ, ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ (ಹೊಸಕೋಟೆ)

Intro:

ಬೆಂಗಳೂರು: ಅನರ್ಹ ಶಾಸಕರಿಗೆ ಅಡ್ಡಿಯಾಗಿದ್ದವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ನಿರಾಳರಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ‌ ಮತ್ತೆ ತಲೆನೋವು ಶುರುವಾಗಿದೆ ಕೇವಲ ಓರ್ವ ಮಾತ್ರ ಅಧಿಕಾರ ಸ್ವೀಕರಿಸಿದ್ದು ಉಳಿದವರು ಮತ್ತೆ ಬಂಡಾಯದ ಕಹಳೆ ಮೊಳಗಿಸುವ ಸುಳಿವು ನೀಡಿದ್ದಾರೆ.

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಗೆ ಇನ್ನೂ ತಲೆನೋವು ಮುಗಿದಿಲ್ಲ, ನಿಗಮ- ಮಂಡಳಿ ನೀಡಿದರೂ ಇನ್ನೂ ಅಧಿಕಾರ ವಹಿಸಿಕೊಳ್ಳದ ಪರಾಜಿತ ಅಭ್ಯರ್ಥಿಗಳು ಬಂಡಾಯದ ಸುಳಿವು ನೀಡಿದ್ದಾರೆ.8 ಪರಾಜಿತ ಅಭ್ಯರ್ಥಿಗಳ ಪೈಕಿ ಒಬ್ಬರು ಮಾತ್ರ ಅಧಿಕಾರ ಸ್ವೀಕಾರ ಮಾಡಿದ್ದಾರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಯಲ್ಲಾಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಿ.ಎಸ್. ಪಾಟೀಲ್ ಅಧಿಕಾರ ವಹಿಸಿಕೊಂಡಿದ್ದು
ಉಳಿದ ಏಳು ಪರಾಜಿತರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ ನ ಇದರಿಂದಾಗಿ ಪರಾಜಿತರಿಗೆ ನಿಗಮ- ಮಂಡಳಿ ಅಧಿಕಾರ ನೀಡಿ ಅನರ್ಹ ಶಾಸಕರನ್ನು ಸಮಾಧಾನಿಸುವ ಬಿಜೆಪಿ ಯತ್ನಕ್ಕೆ ಹಿನ್ನಡೆಯಾದಂತಾಗಿದೆ.

ನಿಗಮ- ಮಂಡಳಿಗೆ ನೇಮಕಾತಿ ಆದೇಶ ಮಾಡಿ ಒಂದು ವಾರ ಕಳೆದರೂ ಕ್ಯಾರೇ ಅನ್ನದ ಬಿಜೆಪಿ ಪರಾಜಿತ ಅಭ್ಯರ್ಥಿಗಳು, ಅಧಿಕಾರ ಬೇಡ ಟಿಕೆಟ್ ಬೇಕು ಎಂದು ಪಟ್ಟು ಮುಂದುವರಿಸಿದ್ದಾರೆ ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಅನರ್ಹರ ಮತ್ತು ಪರಾಜಿತರಿಂದ ಸಂಕಷ್ಟ ಮುಂದುವರೆದಿದೆ.

ಅನರ್ಹ ಶಾಸಕರಿಗೆ ಅಡ್ಡಿಯಾಗಿದ್ದವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ಅಸಮಧಾನ ಶಮನಕ್ಕೆ ಸಿಎಂ ಯತ್ನಿಸಿದ್ದರು.ಶರತ್ ಬಚ್ಚೇಗೌಡ, ಯುಬಿ ಬಣಕಾರ್, ನಂದೀಶ್ ರೆಡ್ಡಿ, ರಾಜು ಕಾಗೆ, ಅಶೋಕ್ ಪೂಜಾರಿ ಸೇರಿದಂತೆ 8 ಮಂದಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.

ಅಶೋಕ್ ಪೂಜಾರಿ- ಗಡಿ ಅಭಿವೃದ್ಧಿ ಪ್ರಾಧಿಕಾರ( ಗೋಕಾಕ್)

ಭರಮಗೌಡ(ರಾಜು)ಕಾಗೆ
- ಅಧ್ಯಕ್ಷರು- ಕಾಡಾ ಬೆಳಗಾವಿ(ಕಾಗವಾಡ)

ಯಬಿ ಬಣಕಾರ್- ಅಧ್ಯಕ್ಷರು, ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣ ನಿಗಮ (ಹಿರೇಕೇರೂರು)

ಬಸವನ ಗೌಡ ತುರವಿಹಾಳ- ಅಧ್ಯಕ್ಷರು, ಕಾಡಾ ಮುನಿರಾಬಾದ್ ರಾಯಚೂರು( ಮಸ್ಕಿ)

ವಿ ಎಸ್ ಪಾಟೀಲ್- ಅಧ್ಯಕ್ಷರು, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ

ಹೆಚ್ ಆರ್ ಗವಿಯಪ್ಪ- ಅಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ

ನಂದೀಶ್ ರೆಡ್ಡಿ, ಉಪಾಧ್ಯಕ್ಷರು, ಬಿಎಂಟಿಸಿ(ಕೆಆರ್ ಪುರಂ)

ಶರತ್ ಬಚ್ಚೇಗೌಡ, ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ ( ಹೊಸಕೋಟೆ)

Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.