ETV Bharat / state

ಆಯ್ದ ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ವಿಚಾರ: ಬಿಜೆಪಿ - ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್

author img

By

Published : Oct 29, 2022, 8:21 PM IST

ಆಯ್ದ ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ನೀಡಿರುವ ವಿಚಾರದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಟ್ವೀಟ್ ವಾರ್ ನಡೆಯುತ್ತಿದೆ.

ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ವಿಚಾರ
ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ವಿಚಾರ

ಬೆಂಗಳೂರು: ದೀಪಾವಳಿ ಹಬ್ಬದ ಅಂಗವಾಗಿ ಕರ್ನಾಟಕದ ಆಯ್ದ ಪತ್ರಕರ್ತರಿಗೆ ಗಿಫ್ಟ್ ಕಳಿಸಿರುವ ವಿಚಾರ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್ ನಡೆಯುತ್ತಿದೆ.

ದೀಪಾವಳಿ ಗಿಫ್ಟ್ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಚುನಾವಣೆ ಮೊದಲು - ತಿನ್ನಲ್ಲ, ತಿನ್ನಲು ಬಿಡಲ್ಲ ಎನ್ನುತ್ತಿದ್ದ ಬಿಜೆಪಿಯು ಚುನಾವಣೆ ಬಳಿಕ ಶೇ.40 ರಷ್ಟು ಕಮಿಷನ್ ತಿಂದು ಮತ್ತು ದೀಪಾವಳಿಯ ಸಿಹಿ ಡಬ್ಬದಲ್ಲಿ ಕರ್ನಾಟಕದ ಪತ್ರಕರ್ತರಿಗೆ ಲಂಚವನ್ನೂ ಕಳಿಸಿದೆ. ಬಿಜೆಪಿಯ ಪೇಸಿಎಂ ಮತ್ತು ಪೇಪಿಎಂ ಸರ್ಕಾರವು ದೇಶದಲ್ಲಿ ಭ್ರಷ್ಟಾಚಾರದ ಡಬಲ್ ಎಂಜಿನ್ ಸರ್ಕಾರವಾಗಿದೆ' ಎಂದು ಕಾಂಗ್ರೆಸ್ ನಾಯಕ ಟೀಕಾಸ್ತ್ರ ನಡೆಸಿದ್ದಾರೆ.

  • चुनाव के पहले - न खाऊंगा, न खाने दूंगा।

    चुनाव के बाद - ‘40% कमीशन’ खाऊंगा, फिर दिवाली पर मिठाई के डब्बों में कर्नाटक मीडिया को रिश्वत भिजवाऊंगा।

    ‘PayCM’ और ‘PayPM’ की भाजपा सरकार, पूरे देश में ‘डबल इंजन’ का भ्रष्टाचार।

    — Rahul Gandhi (@RahulGandhi) October 29, 2022 " class="align-text-top noRightClick twitterSection" data=" ">

ಸಚಿವ ಸುಧಾಕರ್ ಅವರ ಕಡೆಯಿಂದಲೂ ಪತ್ರಕರ್ತರಿಗೆ ದುಬಾರಿ ಬೆಲೆ ಲಂಚ ರೂಪದ ಉಡುಗೊರೆ ನೀಡಿರುವ ಸಂಗತಿ ಹೊರಬಂದಿದೆ. ಸುಧಾಕರ್ ಅವರು ಏಕೆ ಈ ಬಗ್ಗೆ ತಾವು ತುಟಿ ಬಿಚ್ಚುತ್ತಿಲ್ಲ?. ಅಕ್ರಮ ಮುಚ್ಚಿಕೊಳ್ಳಲು ಸರ್ಕಾರ ಯಾವ ಹಂತಕ್ಕೆ ಬೇಕಿದ್ದರೂ ಇಳಿಯಬಹುದು ಎನ್ನಲು ಪತ್ರಕರ್ತರಿಗೆ ಲಂಚ ನೀಡಿದ ಈ ಪ್ರಕರಣವೇ ನಿದರ್ಶನ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

  • ಇಫ್ತಾರ್ ಕೂಟ, ಕ್ರಿಸ್ಮಸ್ ಹಬ್ಬಗಳಂದು ಕಾಂಗ್ರೆಸ್ ಪಕ್ಷಕ್ಕೆ ಇರುವ ಸಡಗರ ಸಂಭ್ರಮ ಅದೇಕೋ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇರುವುದಿಲ್ಲ.

    ಹಿಂದೂ ಧರ್ಮದ ಮೇಲೆ ನಿಮಗಿರುವ ದ್ವೇಷಕ್ಕೆ ನಮ್ಮ ಪರಂಪರೆ, ಆಚರಣೆಗಳನ್ನು ಏಕೆ ದೂಷಿಸುತ್ತೀರಿ?

    1/4 https://t.co/dG0BoQEOed

    — Dr Sudhakar K (@mla_sudhakar) October 29, 2022 " class="align-text-top noRightClick twitterSection" data="

ಇಫ್ತಾರ್ ಕೂಟ, ಕ್ರಿಸ್ಮಸ್ ಹಬ್ಬಗಳಂದು ಕಾಂಗ್ರೆಸ್ ಪಕ್ಷಕ್ಕೆ ಇರುವ ಸಡಗರ ಸಂಭ್ರಮ ಅದೇಕೋ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇರುವುದಿಲ್ಲ.

ಹಿಂದೂ ಧರ್ಮದ ಮೇಲೆ ನಿಮಗಿರುವ ದ್ವೇಷಕ್ಕೆ ನಮ್ಮ ಪರಂಪರೆ, ಆಚರಣೆಗಳನ್ನು ಏಕೆ ದೂಷಿಸುತ್ತೀರಿ?

1/4 https://t.co/dG0BoQEOed

— Dr Sudhakar K (@mla_sudhakar) October 29, 2022 ">

ಕಾಂಗ್ರೆಸ್ ಆರೋಪಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, 'ಇಫ್ತಾರ್ ಕೂಟ, ಕ್ರಿಸ್ಮಸ್ ಹಬ್ಬಗಳಂದು ಕಾಂಗ್ರೆಸ್ ಪಕ್ಷಕ್ಕೆ ಇರುವ ಸಡಗರ ಸಂಭ್ರಮ ಅದೇಕೋ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇರುವುದಿಲ್ಲ. ಹಿಂದೂ ಧರ್ಮದ ಮೇಲೆ ನಿಮಗಿರುವ ದ್ವೇಷಕ್ಕೆ ನಮ್ಮ ಪರಂಪರೆ, ಆಚರಣೆಗಳನ್ನು ಏಕೆ ದೂಷಿಸುತ್ತೀರಿ?. ಹಬ್ಬಗಳೆಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಖುಷಿ ಪಡುವ, ಪರಸ್ಪರ ಖುಷಿ ಹಂಚಿಕೊಳ್ಳುವ ಸಂಭ್ರಮ, ಸಡಗರದ ದಿನ. ಬೆಳಕಿನ ಹಬ್ಬ ದೀಪಾವಳಿ ಹಬ್ಬದಲ್ಲಿ ಪರಸ್ಪರ ಸಿಹಿ ಹಂಚಿಕೊಳ್ಳುವ ಕೊಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಹಿಂದೂ ಸಂಪ್ರದಾಯ ಆಚರಣೆಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಎಷ್ಟೇ ದ್ವೇಷ, ಅಸಡ್ಡೆ ಇರಲಿ, ನಾವು ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚೇ ಹಚ್ಚುತ್ತೇವೆ, ಪರಸ್ಪರ ಸಿಹಿ ಹಂಚಿಕೊಳ್ಳುತ್ತೇವೆ, ಹೋಳಿ ಹಬ್ಬಕ್ಕೆ ಬಣ್ಣ ಹಚ್ಚುತ್ತೇವೆ. ಹಿಂದೂ ದ್ವೇಷಿ ಕಾಂಗ್ರೆಸ್​​ಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ' ಎಂದಿದ್ದಾರೆ.

  • ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ದ ನಿರಂತರವಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಈ ರೀತಿಯ ಆರೋಪ ಸತ್ಯಕ್ಕೆ ದೂರವಾಗಿದೆ.

    ಕಾಂಗ್ರೆಸ್ ರಾಜ್ಯಾಧ್ಯಕ್ಷ @DKShivakumar ಈ ಹಿಂದೆ ಐ ಫೋನ್ ನೀಡಿರುವ ಬಗ್ಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿರುವುದು @INCKarnataka ಮರೆತಂತಿದೆ.#CongressLies pic.twitter.com/IH7IPh5pJz

    — BJP Karnataka (@BJP4Karnataka) October 28, 2022 " class="align-text-top noRightClick twitterSection" data=" ">

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಈ ರೀತಿಯ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಈ ಹಿಂದೆ ಐ ಫೋನ್ ನೀಡಿರುವ ಬಗ್ಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿರುವುದನ್ನು ಕಾಂಗ್ರೆಸ್ ಮರೆತಂತಿದೆ ಎಂದು ಬಿಜೆಪಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದೆ.

(ಓದಿ: ಸಿಎಂ ಹೆಸರಲ್ಲಿ ಅತಿರೇಕದ ವರ್ತನೆ ತೋರಿದರೆ ಕ್ರಮ: ಸಿ ಟಿ ರವಿ)

ಬೆಂಗಳೂರು: ದೀಪಾವಳಿ ಹಬ್ಬದ ಅಂಗವಾಗಿ ಕರ್ನಾಟಕದ ಆಯ್ದ ಪತ್ರಕರ್ತರಿಗೆ ಗಿಫ್ಟ್ ಕಳಿಸಿರುವ ವಿಚಾರ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್ ನಡೆಯುತ್ತಿದೆ.

ದೀಪಾವಳಿ ಗಿಫ್ಟ್ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಚುನಾವಣೆ ಮೊದಲು - ತಿನ್ನಲ್ಲ, ತಿನ್ನಲು ಬಿಡಲ್ಲ ಎನ್ನುತ್ತಿದ್ದ ಬಿಜೆಪಿಯು ಚುನಾವಣೆ ಬಳಿಕ ಶೇ.40 ರಷ್ಟು ಕಮಿಷನ್ ತಿಂದು ಮತ್ತು ದೀಪಾವಳಿಯ ಸಿಹಿ ಡಬ್ಬದಲ್ಲಿ ಕರ್ನಾಟಕದ ಪತ್ರಕರ್ತರಿಗೆ ಲಂಚವನ್ನೂ ಕಳಿಸಿದೆ. ಬಿಜೆಪಿಯ ಪೇಸಿಎಂ ಮತ್ತು ಪೇಪಿಎಂ ಸರ್ಕಾರವು ದೇಶದಲ್ಲಿ ಭ್ರಷ್ಟಾಚಾರದ ಡಬಲ್ ಎಂಜಿನ್ ಸರ್ಕಾರವಾಗಿದೆ' ಎಂದು ಕಾಂಗ್ರೆಸ್ ನಾಯಕ ಟೀಕಾಸ್ತ್ರ ನಡೆಸಿದ್ದಾರೆ.

  • चुनाव के पहले - न खाऊंगा, न खाने दूंगा।

    चुनाव के बाद - ‘40% कमीशन’ खाऊंगा, फिर दिवाली पर मिठाई के डब्बों में कर्नाटक मीडिया को रिश्वत भिजवाऊंगा।

    ‘PayCM’ और ‘PayPM’ की भाजपा सरकार, पूरे देश में ‘डबल इंजन’ का भ्रष्टाचार।

    — Rahul Gandhi (@RahulGandhi) October 29, 2022 " class="align-text-top noRightClick twitterSection" data=" ">

ಸಚಿವ ಸುಧಾಕರ್ ಅವರ ಕಡೆಯಿಂದಲೂ ಪತ್ರಕರ್ತರಿಗೆ ದುಬಾರಿ ಬೆಲೆ ಲಂಚ ರೂಪದ ಉಡುಗೊರೆ ನೀಡಿರುವ ಸಂಗತಿ ಹೊರಬಂದಿದೆ. ಸುಧಾಕರ್ ಅವರು ಏಕೆ ಈ ಬಗ್ಗೆ ತಾವು ತುಟಿ ಬಿಚ್ಚುತ್ತಿಲ್ಲ?. ಅಕ್ರಮ ಮುಚ್ಚಿಕೊಳ್ಳಲು ಸರ್ಕಾರ ಯಾವ ಹಂತಕ್ಕೆ ಬೇಕಿದ್ದರೂ ಇಳಿಯಬಹುದು ಎನ್ನಲು ಪತ್ರಕರ್ತರಿಗೆ ಲಂಚ ನೀಡಿದ ಈ ಪ್ರಕರಣವೇ ನಿದರ್ಶನ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

  • ಇಫ್ತಾರ್ ಕೂಟ, ಕ್ರಿಸ್ಮಸ್ ಹಬ್ಬಗಳಂದು ಕಾಂಗ್ರೆಸ್ ಪಕ್ಷಕ್ಕೆ ಇರುವ ಸಡಗರ ಸಂಭ್ರಮ ಅದೇಕೋ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇರುವುದಿಲ್ಲ.

    ಹಿಂದೂ ಧರ್ಮದ ಮೇಲೆ ನಿಮಗಿರುವ ದ್ವೇಷಕ್ಕೆ ನಮ್ಮ ಪರಂಪರೆ, ಆಚರಣೆಗಳನ್ನು ಏಕೆ ದೂಷಿಸುತ್ತೀರಿ?

    1/4 https://t.co/dG0BoQEOed

    — Dr Sudhakar K (@mla_sudhakar) October 29, 2022 " class="align-text-top noRightClick twitterSection" data=" ">

ಕಾಂಗ್ರೆಸ್ ಆರೋಪಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, 'ಇಫ್ತಾರ್ ಕೂಟ, ಕ್ರಿಸ್ಮಸ್ ಹಬ್ಬಗಳಂದು ಕಾಂಗ್ರೆಸ್ ಪಕ್ಷಕ್ಕೆ ಇರುವ ಸಡಗರ ಸಂಭ್ರಮ ಅದೇಕೋ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇರುವುದಿಲ್ಲ. ಹಿಂದೂ ಧರ್ಮದ ಮೇಲೆ ನಿಮಗಿರುವ ದ್ವೇಷಕ್ಕೆ ನಮ್ಮ ಪರಂಪರೆ, ಆಚರಣೆಗಳನ್ನು ಏಕೆ ದೂಷಿಸುತ್ತೀರಿ?. ಹಬ್ಬಗಳೆಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಖುಷಿ ಪಡುವ, ಪರಸ್ಪರ ಖುಷಿ ಹಂಚಿಕೊಳ್ಳುವ ಸಂಭ್ರಮ, ಸಡಗರದ ದಿನ. ಬೆಳಕಿನ ಹಬ್ಬ ದೀಪಾವಳಿ ಹಬ್ಬದಲ್ಲಿ ಪರಸ್ಪರ ಸಿಹಿ ಹಂಚಿಕೊಳ್ಳುವ ಕೊಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಹಿಂದೂ ಸಂಪ್ರದಾಯ ಆಚರಣೆಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಎಷ್ಟೇ ದ್ವೇಷ, ಅಸಡ್ಡೆ ಇರಲಿ, ನಾವು ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚೇ ಹಚ್ಚುತ್ತೇವೆ, ಪರಸ್ಪರ ಸಿಹಿ ಹಂಚಿಕೊಳ್ಳುತ್ತೇವೆ, ಹೋಳಿ ಹಬ್ಬಕ್ಕೆ ಬಣ್ಣ ಹಚ್ಚುತ್ತೇವೆ. ಹಿಂದೂ ದ್ವೇಷಿ ಕಾಂಗ್ರೆಸ್​​ಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ' ಎಂದಿದ್ದಾರೆ.

  • ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ದ ನಿರಂತರವಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಈ ರೀತಿಯ ಆರೋಪ ಸತ್ಯಕ್ಕೆ ದೂರವಾಗಿದೆ.

    ಕಾಂಗ್ರೆಸ್ ರಾಜ್ಯಾಧ್ಯಕ್ಷ @DKShivakumar ಈ ಹಿಂದೆ ಐ ಫೋನ್ ನೀಡಿರುವ ಬಗ್ಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿರುವುದು @INCKarnataka ಮರೆತಂತಿದೆ.#CongressLies pic.twitter.com/IH7IPh5pJz

    — BJP Karnataka (@BJP4Karnataka) October 28, 2022 " class="align-text-top noRightClick twitterSection" data=" ">

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಈ ರೀತಿಯ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಈ ಹಿಂದೆ ಐ ಫೋನ್ ನೀಡಿರುವ ಬಗ್ಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿರುವುದನ್ನು ಕಾಂಗ್ರೆಸ್ ಮರೆತಂತಿದೆ ಎಂದು ಬಿಜೆಪಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದೆ.

(ಓದಿ: ಸಿಎಂ ಹೆಸರಲ್ಲಿ ಅತಿರೇಕದ ವರ್ತನೆ ತೋರಿದರೆ ಕ್ರಮ: ಸಿ ಟಿ ರವಿ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.