ಬೆಂಗಳೂರು: ಬಿಡಿಎ, ಬಿಬಿಎಂಪಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ, ಕಡತಗಳನ್ನು ಮನೆ ಬಾಗಿಲಿಗೆ ತಲುಪಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಅಂಗವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಶನಿವಾರ ವರ್ಚುಯಲ್ ಮೂಲಕ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘಗಳ ಪ್ರತಿನಿಧಿಗಳ ಜತೆ ಸಂವಾದ ನಡೆಸಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
-
ಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಂವಾದ ನಡೆಸಲಾಯಿತು. ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
— DK Shivakumar (@DKShivakumar) July 15, 2023 " class="align-text-top noRightClick twitterSection" data="
ಬ್ರ್ಯಾಂಡ್ ಬೆಂಗಳೂರು… pic.twitter.com/hW6ryeN3Ma
">ಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಂವಾದ ನಡೆಸಲಾಯಿತು. ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
— DK Shivakumar (@DKShivakumar) July 15, 2023
ಬ್ರ್ಯಾಂಡ್ ಬೆಂಗಳೂರು… pic.twitter.com/hW6ryeN3Maಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಂವಾದ ನಡೆಸಲಾಯಿತು. ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
— DK Shivakumar (@DKShivakumar) July 15, 2023
ಬ್ರ್ಯಾಂಡ್ ಬೆಂಗಳೂರು… pic.twitter.com/hW6ryeN3Ma
ಬಿಡಿಎ, ಬಿಬಿಎಂಪಿ ಆಸ್ತಿ ಸಂಬಂಧ ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಿ ಅದನ್ನು ಮನೆ ಮನೆಗೆ ತಲುಪಿಸಲು ತೀರ್ಮಾನಿಸಿದ್ದೇವೆ. ಭೂಮಿ ರೀತಿಯಲ್ಲಿ ಡಿಜಟಲೀಕರಣ ಮಾಡಲು ಚಿಂತನೆ ನಡೆಸಿದ್ದೇವೆ. ಇದನ್ನು ಹಂತ ಹಂತವಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಸಂಬಂಧ ಈ ಹಿಂದೆ ಪ್ರಮುಖರ ಜೊತೆ ಸಭೆ ನಡೆಸಿದ್ದೇನೆ. ಶಾಸಕರ ಜೊತೆಗೂ ಸಭೆ ನಡೆಸಿದ್ದೇನೆ. 30 ಸಾವಿರಕ್ಕೂ ಹೆಚ್ಚು ಜನರು ಅಭಿಪ್ರಾಯ ಸಂಗ್ರಹವಾಗಿದೆ. ಕೆಲ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದೇವೆ. ಇಂದು ಸಾಲಿಡ್ ವೇಸ್ಟ್ ನಿರ್ವಹಣೆ, ಒಎಫ್ ಸಿ, ಕೆರೆ ಅಭಿವೃದ್ಧಿ, ಟ್ರಾಫಿಕ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ.
ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ಜೊತೆ ಸಂಪರ್ಕದಲ್ಲಿರಬೇಕು. ಸಮಸ್ಯೆಗಳನ್ನು ಆಲಿಸಬೇಕು. ವಾರ್ಡ್ ಸಭೆ ನಡೆಸಿ ಅಭಿಪ್ರಾಯ ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಬೆಂಗಳೂರಲ್ಲಿ ಫುಟ್ ಪಾತ್ ಒತ್ತುವರಿ, ಟ್ರಾಫಿಕ್ ಸಮಸ್ಯೆ, ಮಕ್ಕಳ ಬಾಗಿದಾರಿಕೆಯೂ ಇರಬೇಕು. ಮಕ್ಕಳ ಅಭಿಪ್ರಾಯವನ್ನೂ ಪಡೆಯಬೇಕು ಎಂದು ಮಾಹಿತಿ ನೀಡಿದರು.
ಮಕ್ಕಳ ಜೊತೆನೂ ಚರ್ಚೆ ನಡೆಸಲು ತೀರ್ಮಾನ ಮಾಡಿದ್ದೇವೆ. ಆಸ್ತಿ ತೆರಿಗೆ ಸಂಬಂಧ ಕಾನೂನು ಉಲ್ಲಘಿಸುವವರಿಗೆ ರಕ್ಷಣೆ ಸಿಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ಸಮಸ್ಯೆಗಳನ್ನು ಹೇಳಿದ್ದಾರೆ. ಹಂತ ಹಂತವಾಗಿ ಜಾರಿ ಮಾಡಲಿದ್ದೇವೆ. ಕುಡಿಯುವ ನೀರು, ಕೆರೆ ಒತ್ತುವರಿ, ವಿದ್ಯುತ್ ಕಡಿತಗಳ ಬಗ್ಗೆಯೂ ಗಮನ ಸೆಳೆದರು. ತಂತ್ರಜ್ಞಾನ ಬಳಸಿ ಹೊಸ ಕಾರ್ಯಕ್ರಮ ಕೊಡಲಿದ್ದೇವೆ ಎಂದು ಭರವಸೆ ನೀಡಿದರು.
ದುಬಾರಿ ತೆರಿಗೆ ಹಾಕುವ ಯಾವ ಚಿಂತನೆಯೂ ಇಲ್ಲ. ಸರಿಯಾಗಿ ಆಸ್ತಿ ತೆರಿಗೆ ಪಾವತಿಸದ ಬಗ್ಗೆ ತಂತ್ರಜ್ಞಾನ ಅಳವಡಿಸಲು ಚಿಂತನೆ ಮಾಡಿದ್ದೇವೆ. 100 ದಿನಗಳಲ್ಲಿ ಅಧ್ಯಯನ ಮಾಡಿ, ಬೆಂಗಳೂರು ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮದು ರೂಪುರೇಷೆ ಸಿದ್ಧವಾಗಲಿದೆ. ಅಧಿಕಾರಿಗಳಿಗೆ ಫುಟ್ ಪಾತ್ ಒತ್ತುವರಿ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದರು. ಫುಟ್ಪಾತ್ ವ್ಯಾಪಾರಿಗಳ ಪರವಾದ ಕಾನೂನು ಇದೆ. ಅವರನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುತ್ತೇವೆ. ಆಸ್ತಿ ವಿಚಾರವಾಗಿ ಮಾಲ್ ಗಳು, ಕಟ್ಡಡಗಳ ಮ್ಯಾಪಿಂಗ್ ಮಾಡಲು ತೀರ್ಮಾನಿಸಲಾಗಿದೆ.
ಜಾಹೀರಾತು ಹೊಸ ನೀತಿ: ಜಾಹೀರಾತು ಸಂಬಂಧ ಹೊಸ ನೀತಿ ಜಾರಿಗೆ ತರುತ್ತೇವೆ. ತಿಂಗಳ ಕೊನೆ ಹೊಸ ರೂಪ ಬರಲಿದೆ.
ಇನ್ನು ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಟ್ರಾಫಿಕ್ ಪೊಲೀಸ್ ಜೊತೆ ಸಭೆ ನಡೆಸಲಿದ್ದೇನೆ. ಪಾಟ್ ಹೋಲ್ಸ್ ಬಗ್ಗೆ ಸಭೆ ನಡೆಸಲಿದ್ದೇವೆ. ಬೆಂಗಳೂರು ಪೊಲೀಸರೊಂದಿಗೆ ಸಭೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂಓದಿ:ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ನೂತನ ಕಾನೂನು ತರುತ್ತೇವೆ: ಸಚಿವ ಹೆಚ್ ಕೆ ಪಾಟೀಲ್