ETV Bharat / state

ದೇಶದಲ್ಲಿ ಲಕ್ಷಾಂತರ ಮಂದಿಯ ಸಾವಿಗೆ ಕಾರಣವೇ ತಿಳಿದಿಲ್ಲ: ರಾಷ್ಟ್ರೀಯ ಆರೋಗ್ಯ ಅಭಿಯಾನ ಕಳವಳ

author img

By

Published : Jul 16, 2021, 7:54 PM IST

ಕೋವಿಡ್ ಸಂದರ್ಭದಲ್ಲಿಯೇ ಲಕ್ಷಾಂತರ ಮಂದಿಯ ಸಾವಿಗೆ ನಿಖರ ಕಾರಣ ತಿಳಿದುಬರದಿರುವುದು ಪತ್ತೆಯಾಗಿದೆ. ಇದು ಕಳೆದ ವರ್ಷದ ಸಂಖ್ಯೆಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಜೊತೆಗೆ ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪಿರುವವರ ಸಂಖ್ಯೆಯೂ ಹೆಚ್ಚಾಗಿರುವುದು ರಾಷ್ಟ್ರೀಯ ಆರೋಗ್ಯ ಅಭಿಯಾನ ಬಿಡುಗಡೆ ಮಾಡಿರುವ ಅಂಕಿಅಂಶದಿಂದ ಬೆಳಕಿಗೆ ಬಂದಿದೆ.

-national-health-mission-report
ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಯಾರು ಊಹಿಸಲಾರದಷ್ಟು ಸಾವು-ನೋವು ಸಂಭವಿಸಿತ್ತು. ಈ ಮಧ್ಯೆ ದೇಶದಲ್ಲಿ ಕೊರೊನಾದಿಂದ ಸತ್ತವರ ಲೆಕ್ಕ ಕೈ ತಪ್ಪಿಹೋಗಿದೆಯಾ ಅನ್ನೋ ಅನುಮಾನಗಳು ಶುರುವಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಕಿಅಂಶದ ಪ್ರಕಾರ ದೇಶದಲ್ಲಿ ಲಕ್ಷಾಂತರ ಮಂದಿಯ ಸಾವಿಗೆ ಕಾರಣವೇ ತಿಳಿದುಬಂದಿಲ್ಲ. ಕೊರೊನಾ ಮೊದಲನೇ ಅಲೆಯ 6-7 ತಿಂಗಳಲ್ಲಿ ಸಂಭವಿಸಿದ್ದ ಸಾವು- ಸೋಂಕಿತರ ಸಂಖ್ಯೆ, 2ನೇ ಅಲೆಯಲ್ಲಿಯ ಕೇವಲ 2 ತಿಂಗಳಲ್ಲಿ ಘಟಿಸಿದೆ. 2ನೇ ಅಲೆಯಲ್ಲಿ ಏಪ್ರಿಲ್ ಹಾಗೂ ‌ಮೇ ತಿಂಗಳಲ್ಲಿ ಮರಣ ಮೃದಂಗ ಬಾರಿಸಿದೆ. ಜ್ವರ, ಶ್ವಾಸಕೋಶದ ಸೋಂಕು ಹಾಗೂ ಕಾರಣ ಗೊತ್ತಿಲ್ಲದೆ ಮೃತಪಟ್ಟವರ ಲೆಕ್ಕ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

https://etvbharatimages.akamaized.net/etvbharat/prod-images/kn-bng-4-death-no-reason-script-7201801_16072021174156_1607f_1626437516_895.jpg
ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಕಿ ಅಂಶದಿಂದ ಸಾವಿನ ರಹಸ್ಯ ಬಯಲಾಗಿದೆ. ಕಳೆದ ವರ್ಷದ ಸಾವಿಗಿಂತ ಎರಡೂವರೆ ಪಟ್ಟು ಈ ವರ್ಷದ ಸಾವಿನ ಸಂಖ್ಯೆ‌ ಹೆಚ್ಚಿದೆ.‌
ದೇಶದಲ್ಲಿ 2020 ಮೇ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ 1,85,994 ರಷ್ಟಿದ್ದರೆ, 2021ರ ಮೇ ತಿಂಗಳಿನಲ್ಲೇ 5 ಲಕ್ಷಕ್ಕೂ ಅಧಿಕ ಸಾವು ಸಂಭವಿಸಿದೆ. ಇದರಲ್ಲಿ ಕೊರೊನಾಗೆ 3 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.‌

ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ
ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ
ಏಪ್ರಿಲ್ ತಿಂಗಳ ಸಾವಿನ ಸಂಖ್ಯೆ

ಇನ್ನೂ ಏಪ್ರಿಲ್ ತಿಂಗಳಿನಲ್ಲಿ 2020ರಲ್ಲಿ 1,64,586 ಮಂದಿ ಮೃತಪಟ್ಟಿದ್ದರು, ಈ ವರ್ಷ ಅಂದರೆ 2021 ಏಪ್ರಿಲ್​​​ನಲ್ಲಿ 3,12,834 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 1,43,475 ಮಂದಿಯ ಸಾವಿನ ಕಾರಣ ಗೊತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಶ್ವಾಸಕೋಶದ‌ ಕಾಯಿಲೆ ಇಂದ ಮೃತಪಟ್ಟವರು (TB ಹೊರತು ಪಡಿಸಿ) 27,805 ಮಂದಿ ಹಾಗೂ ಜ್ವರದ ಕಾರಣಕ್ಕಾಗಿ 7,498 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ವರದಿ ಮಾಡಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ
ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ

ಮೇ ತಿಂಗಳ ಸಾವಿನ ಸಂಖ್ಯೆ

2020ನ ಮೇ ತಿಂಗಳಲ್ಲಿ ಒಟ್ಟು 1,85,994 ಮಂದಿ ಮೃತಪಟ್ಟಿದ್ದರೆ, 2021ರ ಮೇ ತಿಂಗಳಿನಲ್ಲಿ ಒಟ್ಟು 5,11,405 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 2,51,986 ಮಂದಿಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಅಲ್ಲದೆ ಶ್ವಾಸಕೋಶದ‌ ಕಾಯಿಲೆಯಿಂದ (TB ಹೊರತು ಪಡಿಸಿ) 57,122 ಮಂದಿ ಮೃತಪಟ್ಟರೆ, ಜ್ವರದ ಕಾರಣಕ್ಕಾಗಿ ‌15,418 ಮಂದಿ ಮೃತಪಟಿದ್ದಾರೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ
ರಾಷ್ಟ್ರೀಯ ಆರೋಗ್ಯ ಅಭಿಯಾನದ ವರದಿ

ಒಟ್ಟಾರೆ ಅಂಕಿಅಂಶವನ್ನ ಗಮಿನಿಸಿದರೆ ಕೋವಿಡ್ ಸಂದರ್ಭದಲ್ಲಿಯೇ ಲಕ್ಷಾಂತರ ಮಂದಿಯ ಸಾವಿಗೆ ನಿಖರ ಕಾರಣ ತಿಳಿದುಬರದಿರುವುದು ಪತ್ತೆಯಾಗಿದೆ. ಇದು ಕಳೆದ ವರ್ಷದ ಸಂಖ್ಯೆಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಜೊತೆಗೆ ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪಿರುವವರ ಸಂಖ್ಯೆಯೂ ಹೆಚ್ಚಿದೆ. ಈ ಸಂಖ್ಯೆಗಳು ಕೊರೊನಾ ಸಾವುಗಳನ್ನ ಸರಿಯಾಗಿ ದಾಖಲು ಮಾಡದೇ ಇರುವುದರ ಅನುಮಾನಕ್ಕೂ ಕಾರಣವಾಗಿದೆ.

ಈ ಹಿಂದೆ ಹೈಕೋರ್ಟ್ ತರಾಟೆ ತಗೆದುಕೊಂಡಾಗ ಒಂದು ದಿನದ ಸಾವು ಎಷ್ಟಾಗಿದೆ ಅಂತ ಅನೇಕ ರಾಜ್ಯಗಳು ಕೋರ್ಟ್​ಗೆ ಅಂಕಿಅಂಶ ಸಲ್ಲಿಸಿದ್ದವು. ಕಾರಣ ಗೊತ್ತಿಲ್ಲ ಅಂತ ದಾಖಲು ಮಾಡಿರುವುದೇ ಕೋವಿಡ್ ಸಾವು ಹೆಚ್ಚಳ ಆಗಿದೆ ಅಂತ ಹಲವರು ವಾದವನ್ನೂ ಮಾಡಿದರು.

ಇದನ್ನೂ ಓದಿ: ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಮರಣ ಪ್ರಮಾಣ ಕಡಿಮೆ: ಅಪೋಲೋ ವೈದ್ಯರ ತಂಡದ ಅಧ್ಯಯನ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.