ಬೆಂಗಳೂರು: 'End of abuse of women and child' ('ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ') ಎಂದು ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ನಾಲ್ವರ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರಿಗೆ ದೊರೆತ ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಇಂದು ಘಟನೆ ನಡೆದ ಮನೆಯ ಸ್ಥಳ ಮಹಜರು ಕಾರ್ಯ ಮುಗಿದಿದ್ದು, ನಾಳೆಗೆ ಸಂಪೂರ್ಣ ಮರಣೋತ್ತರ ಪರೀಕ್ಷೆಯ ವರದಿ ಕೈಸೇರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂರು ಡೆತ್ ನೋಟ್ಗಳು ಪತ್ತೆ:
ಮನೆಯ ಯಜಮಾನ ಶಂಕರ್ ಸಮ್ಮುಖದಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಮಹಜರು ನಡೆಸಿದ ಸಂದರ್ಭದಲ್ಲಿ ಮಕ್ಕಳಾದ ಸಿಂಚನ, ಸಿಂಧುರಾಣಿ ಹಾಗು ಮಧುಸಾಗರ್ ಬರೆದಿರುವ ಡೆತ್ ನೋಟ್ ದೊರೆಯಿತು.
ಸಿಂಚನ ತನ್ನ ಪತಿ ಪ್ರವೀಣ್ ವಿರುದ್ಧ ಕಿರುಕುಳ ನೀಡಿರುವುದಾಗಿ ತಿಳಿಸಿದ್ದಾರೆ. ಇತ್ತ ಸಿಂಧುರಾಣಿ ಸಹ ತನ್ನ ಪತಿ ಶ್ರೀಕಾಂತ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಇದಲ್ಲದೆ ಇಬ್ಬರು ಹೆಣ್ಣುಮಕ್ಕಳು ಡೆತ್ ನೋಟ್ನಲ್ಲಿ ಹಲವು ಅಂಶಗಳನ್ನು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹಣ-ಆಸ್ತಿ ಎಲ್ಲವೂ ಇತ್ತು.. ಮಾನಸಿಕ ನೆಮ್ಮದಿ ಮರೆಯಾಗಿತ್ತು: ಮಕ್ಕಳ ದಾಂಪತ್ಯದ ಬಿರುಕಿಗೆ ಇಡೀ ಕುಟುಂಬ ಬಲಿ
ತಮಗೆ ತಂದೆ ಮನೆಯಲ್ಲಿ ನೋಡಿಕೊಳ್ಳಲಿಲ್ಲ. ಗಂಡನ ಮನೆಯಲ್ಲೂ ಸರಿಯಾಗಿ ನೆಮ್ಮದಿ ಇರಲಿಲ್ಲ. ಹೀಗಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಎಲ್ಲವೂ 3-4 ಪುಟಗಳ ಸುದೀರ್ಘ ಡೆತ್ ನೋಟ್ನಲ್ಲಿ ವಿವರವಾಗಿ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
10 -12 ಲಕ್ಷ ರೂ ನಗದು ಪತ್ತೆ:
ಪೊಲೀಸ್ ಮೂಲಗಳ ಮಾಹಿತಿಯಂತೆ ನಾಲ್ಕು ಫೋನ್, ಮೂರು ಲ್ಯಾಪ್ ಟಾಪ್ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅಂದಾಜು 1ಕೆ.ಜಿ ಚಿನ್ನಾಭರಣ, ₹10-12 ಲಕ್ಷ ನಗದು ಪತ್ತೆಯಾಗಿದೆ. ಮಡಚಿದ ರೀತಿಯಲ್ಲಿ ಮನೆಯಲ್ಲಿ ನೋಟುಗಳು ಬಿದ್ದಿದ್ದವು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಇಂದು ಪೊಲೀಸರಿಂದ ಸ್ಥಳ ಮಹಜರು