ಬೆಂಗಳೂರು: ರಾಜ್ಯದಲ್ಲಿಂದು 337 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 93 ಮಂದಿ ಹೊರ ರಾಜ್ಯದಿಂದ ಬಂದವರಾಗಿದ್ದು, 11 ಜನ ಅಂತರ್ರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 10 ಜನ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 124ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿ ಒಟ್ಟಾರೆ 8,281 ಸೋಂಕಿತರಿದ್ದು, 5210 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಉಳಿದ 2943 ಮಂದಿ ಸಕ್ರಿಯ ಸೋಂಕಿತರು ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 78 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸೋಂಕು ಪರೀಕ್ಷೆ ಮಾಡಿಕೊಂಡವರ ಸಂಖ್ಯೆ 5 ಲಕ್ಷಕ್ಕೆ ಏರಿಕೆ ಆಗಲಿದೆ. ಈಗಾಗಲೇ 4,84,060 ಜನ ಕೊರೊನಾ ಪರೀಕ್ಷೆ ಮಾಡಿಸಿದ್ದು, ಇದರಲ್ಲಿ 4,64,338 ಮಂದಿಯ ವರದಿ ನೆಗೆಟಿವ್ ಬಂದಿದೆ.
ಕೊರೊನಾ ಡೆತ್ ಸಿಟಿ ಆಗಲಿದ್ಯಾ ಸಿಲಿಕಾನ್ ಸಿಟಿ:
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು, ಇದೀಗ ಸಾವಿನ ಸಂಖ್ಯೆಯಲ್ಲೂ ಮೊದಲ ಸ್ಥಾನವನ್ನೇ ಕಾಯ್ದಿದಿರಿಸಿಕೊಂಡಿದೆ. ಅಂದಹಾಗೆ ಮತ್ತೊಂದು ಆತಂಕದ ವಿಷಯವೆಂದರೇ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಹೆಚ್ಚಿದೆ. ನಗರದಲ್ಲಿ 35 ಮಂದಿ ಐಸಿಯುನಲ್ಲಿ ಇದ್ದಾರೆ.
ಬೆಂಗಳೂರಿನಲ್ಲಿ ಈವರೆಗೆ ಒಟ್ಟಾರೆ 982 ಮಂದಿ ಸೋಂಕಿತರು ಇದ್ದು, ಇದರಲ್ಲಿ 392 ಮಂದಿ ಗುಣಮುಖರಾಗಿದ್ದಾರೆ. 531 ಸಕ್ರಿಯ ಪ್ರಕರಣಗಳಿದ್ದು, 58 ಮಂದಿ ಮೃತಪಟ್ಟಿದ್ದಾರೆ.
ಕಳೆದ 10 ದಿನದಿಂದ ಬೆಂಗಳೂರಿನಲ್ಲಿ ಹೆಚ್ಚಾದ ಸಾವಿನ ಸಂಖ್ಯೆ:
10-6-2020. 2 ಮಂದಿ
11-6-2020. 2 ಮಂದಿ
12-6-2020 4 ಮಂದಿ
13-6-2020 2 ಮಂದಿ
14-6-2020 3 ಮಂದಿ
15-6-2020 1 ಮಂದಿ
16-6-2020 5 ಮಂದಿ
17-6-2020. 5 ಮಂದಿ
18-6-2020. 8 ಮಂದಿ
19-6-2020. 7 ಮಂದಿ
ಒಟ್ಟು= 39 ಮಂದಿ ಕೊರೊನಾಗೆ ಬಲಿ