ETV Bharat / state

ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ ಪ್ರಕರಣ.. ಮೃತದೇಹದ ಸ್ಯಾಂಪಲ್ FSL​ಗೆ ರವಾನೆ..

author img

By

Published : Feb 16, 2021, 6:05 PM IST

ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ ಫೋಟೋ ಕಳುಹಿಸಲಾಗಿದೆ‌‌. ಮೃತ ವ್ಯಕ್ತಿಯ ಚಹರೆ ಹೋಲುತ್ತದೆ ಎಂದು ಕೇಳಿಕೊಂಡು ಬಂದರೆ ತನಿಖೆ ನಡೆಸಲಾಗುವುದು. 4 ವರ್ಷದ ಹಿಂದೆ ಮೋರಿ ನಿರ್ಮಾಣ ಗುತ್ತಿಗೆ ಪಡೆದಿದ್ದವರ ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ..

dead body found
ಶವ ಪತ್ತೆ

ಬೆಂಗಳೂರು : ಒಳಚರಂಡಿ ದುರಸ್ಥಿಗಾಗಿ ಬಿಬಿಎಂಪಿ ಸಿಬ್ಬಂದಿ ಕಾಮಗಾರಿ ನಡೆಸುವಾಗ ಮೋರಿಯಲ್ಲಿ ಶವ ಪತ್ತೆ ಸಂಬಂಧ ಮೃತದೇಹದ ಸುತ್ತಮುತ್ತ ಇರುವ ಮಣ್ಣು ಸಂಗ್ರಹಣೆ ಹಾಗೂ ಮೃತದೇಹದ ಸ್ಯಾಂಪಲ್ ಪಡೆದು ಡಿಎನ್​ಎ ಪರೀಕ್ಷೆಗೆ ರವಾನಿಸಲಾಗಿದೆ‌.

ಕಳೆದ 4 ವರ್ಷದ ಹಿಂದೆ ಬಿಬಿಎಂಪಿ ಮೋರಿ ಕಾಮಗಾರಿ ನಡೆಸಿತ್ತು. ಆ ವೇಳೆ ಕೊಲೆ ಮಾಡಿ ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ‌. ಸದ್ಯ 4 ವರ್ಷದಿಂದ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್​ಗಳ ಪರಿಶೀಲನೆ ನಡೆಸಲಾಗುತ್ತಿದೆ‌.

ಮೃತದೇಹದ ಸ್ಯಾಂಪಲ್ ಎಫ್​ಎಸ್​ಎಲ್​ಗೆ ರವಾನೆ..

ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ ಫೋಟೋ ಕಳುಹಿಸಲಾಗಿದೆ‌‌. ಮೃತ ವ್ಯಕ್ತಿಯ ಚಹರೆ ಹೋಲುತ್ತದೆ ಎಂದು ಕೇಳಿಕೊಂಡು ಬಂದರೆ ತನಿಖೆ ನಡೆಸಲಾಗುವುದು. 4 ವರ್ಷದ ಹಿಂದೆ ಮೋರಿ ನಿರ್ಮಾಣ ಗುತ್ತಿಗೆ ಪಡೆದಿದ್ದವರ ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್​) ಮತ್ತು ಡಿಎನ್ಎ ವರದಿ ಬಂದ ನಂತರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ನಿನ್ನೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಮುಂಭಾಗದ ಹೆಚ್‌ ಬಿ ಕಲ್ಯಾಣ ಮಂಟಪದ ಬಳಿಯ ಚರಂಡಿಯಲ್ಲಿ ಶವ ಪತ್ತೆಯಾಗಿತ್ತು. ಇನ್ನೂ ಮೃತಪಟ್ಟಿರುವವರ ಹೆಸರು, ವಿಳಾಸ ಗೊತ್ತಾಗಿಲ್ಲ. ಈ ಹಿಂದೆ‌ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.