ಬೆಂಗಳೂರು: ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿದ್ದ ನಗರದ ದಕ್ಷಿಣ ವಿಭಾಗದ 40 ಪೊಲೀಸರಿಗೆ ಕೊರೊನಾ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿರುವ ಪೊಲೀಸರ ಆರೋಗ್ಯವನ್ನ ವೆಬ್ ಮೀಟಿಂಗ್ ನಡೆಸುವ ಮೂಲಕ ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪಟ್ ಮಾಡಿದರು.
ತಮ್ಮ ಕಚೇರಿಯಿಂದಲೇ ವೆಬ್ ಮೀಟಿಂಗ್ ಮಾಡಿದ ಡಿಸಿಪಿ, ಕೊರೊನಾ ವೈರಸ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ.
ಪೊಲೀಸರು ಚಿಕಿತ್ಸಾ ಕೇಂದ್ರದಲ್ಲಿ ಹೇಗಿದ್ದಾರೆ. ಅಲ್ಲಿ ಏನಾದರೂ ಸಮಸ್ಯೆಗಳು ಇವೆಯೇ. ಟ್ರೀಟ್ಮೆಂಟ್ ಮುಗಿಸಿ ಬಂದವರು ಯಾವ ರೀತಿ ಧೈರ್ಯದಿಂದ ಕೆಲಸಕ್ಕೆ ಹಾಜರಾಗಬೇಕು. ಅಲ್ಲದೇ ಸದ್ಯ ಟ್ರೀಟ್ಮೆಂಟ್ನಲ್ಲಿರುವವರ ಕುಟುಂಬದವರಿಗೆ ಏನಾದರೂ ಸಮಸ್ಯೆಯಾಗ್ತಿದ್ಯಾ ಎಂಬುದರ ಬಗ್ಗೆ ವಿಚಾರಿಸಿಕೊಂಡರು.
ಡಿಸಿಪಿ ಅವರ ಈ ಕೆಲಸಕ್ಕೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಹಾಗೂ ಐಜಿಪಿ ಹೇಮಂತ್ ನಿಂಬಾಳ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.