ETV Bharat / state

ಉಪ ಚುನಾವಣೆಯಲ್ಲಿ ಅಭಿವೃದ್ಧಿಯ ಮಾನದಂಡವೇ ಬಿಜೆಪಿಗೆ ಶ್ರೀರಕ್ಷೆ : ಡಿಸಿಎಂ ಸವದಿ

ಬಲಿಷ್ಠ ಮತ್ತು ಭವ್ಯ ಭಾರತವನ್ನು ಕಟ್ಟುವ ಮೋದಿ ಪ್ರಯತ್ನಕ್ಕೆ ಮತದಾರರು ತಮ್ಮ ಬೆಂಬಲ ನೀಡುವುದು ಶತಃಸಿದ್ಧ ಎಂಬ ವಿಶ್ವಾಸದೊಂದಿಗೆ ನಮ್ಮ ಬಿಜೆಪಿಯ ಚುನಾವಣಾಭೂಮಿಕೆ ಸಿದ್ಧವಾಗಿದೆ. ಇದರಿಂದಾಗಿ ವಿರೋಧ ಪಕ್ಷಗಳಲ್ಲಿ ಈಗಾಗಲೇ ತಳಮಳ ಶುರುವಾಗಿದೆ..

author img

By

Published : Mar 17, 2021, 3:56 PM IST

dcm laxman savadi talk
ಡಿಸಿಎಂ ಸವದಿ

ಬೆಂಗಳೂರು : ಬೆಳಗಾವಿ, ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ಮುಂದಿನ ತಿಂಗಳು ಉಪಚುನಾವಣೆ ನಡೆಯಲಿದೆ. ಅಭಿವೃದ್ಧಿಯ ಮಾನದಂಡವೇ ಬಿಜೆಪಿಗೆ ಶ್ರೀರಕ್ಷೆಯಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಓದಿ: ವಿಮಾನ ನಿಲ್ದಾಣ ಅನುದಾನದಲ್ಲಿ ಶಿವಮೊಗ್ಗಕ್ಕೆ ಬೆಣ್ಣೆ, ವಿಜಯಪುರಕ್ಕೆ ಸುಣ್ಣ : ಯತ್ನಾಳ್​

ಉಪಚುನಾವಣೆ ಹಿನ್ನೆಲೆ ಕಳೆದ 2 ತಿಂಗಳಿನಿಂದಲೂ ಹಲವು ಹಂತಗಳಲ್ಲಿ ಚುನಾವಣಾ ರಣತಂತ್ರಗಳನ್ನು ರೂಪಿಸುವ ಮೂಲಕ ಬಿಜೆಪಿ ಈ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ವಿಜಯ ದುಂದುಭಿ ಮೊಳಗಿಸಲು ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.

ಬಸವಕಲ್ಯಾಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿಯು ನನ್ನನ್ನೂ ಸೇರಿದಂತೆ ಸಚಿವರಾದ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಂಸದ ಭಗವಂತ ಖೂಬಾ, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಮುಖಂಡರಾದ ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಸಿಂಗ್ ಠಾಕೂರ್, ಅಮರನಾಥ್ ಪಾಟೀಲ್ ಅವರನ್ನೊಳಗೊಂಡ ಉಸ್ತುವಾರಿ ಸಮಿತಿಯನ್ನು ಕಳೆದ ಫೆಬ್ರವರಿಯಲ್ಲಿಯೇ ರಚಿಸಿದ್ದು, ತಂಡ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಸುಮಾರು 18 ಮಂದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈಗಾಗಲೇ ಇವರ ಎಲ್ಲಾ ಮಾಹಿತಿಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗಿದೆ. ಪಕ್ಷದ ವರಿಷ್ಠರ ಮಂಡಳಿ ಈ ಪೈಕಿ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಲು ಪಣತೊಡಲಿದ್ದಾರೆ.

ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಪಕ್ಷದ ಎಲ್ಲಾ ಮುಖಂಡರೂ ಈ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗುವಂತೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರೂ ಬಸವಕಲ್ಯಾಣಕ್ಕೆ ಭೇಟಿ ಕೊಟ್ಟು ಸೂಕ್ತ ನಿರ್ದೇಶನಗಳನ್ನು ನೀಡಿ ಹುರಿದುಂಬಿಸಿದ್ದಾರೆ.

ಆದ್ದರಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲದಂತೆ ಎಚ್ಚರಿಕೆವಹಿಸಲಾಗಿದೆ. ಈ ಉಪಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುವುದಲ್ಲದೇ, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯೊಂದಿಗೆ ಮತದಾರರನ್ನು ಸ್ಪಂದಿಸುವುದು ನಮ್ಮ ಗುರಿಯಾಗಿದೆ.

ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಮತ್ತು ದೀನ ದಲಿತರಿಗೆ ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನೀಡಿರುವ ಅನೇಕ ಕೊಡುಗೆಗಳು ಮತ್ತು ಕಾರ್ಯಕ್ರಮಗಳು ಈ ಉಪಚುನಾವಣೆಯಲ್ಲಿಯೂ ನಮಗೆ ಶ್ರೀರಕ್ಷೆಯಾಗಲಿವೆ.

ಆದ್ದರಿಂದ ಈ ಬಾರಿ ಬಸವಕಲ್ಯಾಣವಲ್ಲದೇ ಮಸ್ಕಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿಯ ಅಭ್ಯರ್ಥಿಗಳು ಅತ್ಯಧಿಕ ಬಹುಮತದಿಂದ ಗೆಲ್ಲುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಮನೆಗಳಿಗೆ ಭೇಟಿ ನೀಡಿ ಅವರ ಮನಸ್ಸನ್ನು ಗೆಲ್ಲುವುದಕ್ಕೆ ಶ್ರಮಿಸಲು ನಿರಂತರ ಪ್ರಯತ್ನಗಳನ್ನು ನಡೆಸುವುದಲ್ಲದೇ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಿಜೆಪಿ ಸರ್ಕಾರಗಳ ಕಾರ್ಯಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈಗ ಮೋದಿ ನೇತೃತ್ವದಲ್ಲಿ ಇಡೀ ದೇಶದಲ್ಲೇ ಅಭಿವೃದ್ಧಿಯ ಹೊಸ ಪರ್ವ ಪ್ರಾರಂಭವಾಗಿದೆ. ಆದ್ದರಿಂದ ವಿರೋಧ ಪಕ್ಷಗಳು ಯಾವುದೇ ರೀತಿಯ ವಾಮಮಾರ್ಗವನ್ನು ಅನುಸರಿಸಿದರೂ ಅಥವಾ ಅಪಪ್ರಚಾರ ನಡೆಸಿದರೂ ಈ ಬಾರಿ ಅವರು ಯಶಸ್ವಿಯಾಗುವುದಿಲ್ಲ.

ಯಾಕೆಂದರೆ, ಮತದಾರರು ಸಂಪೂರ್ಣ ಬಿಜೆಪಿಯ ಸಕಾರಾತ್ಮಕ ಆಡಳಿತದ ಪರವಾಗಿದ್ದಾರೆ ಎಂಬುದು ಅಲ್ಲಿಗೆ ಭೇಟಿ ಕೊಟ್ಟಾಗ ನನಗೆ ತಿಳಿದು ಬಂದ ಸಂಗತಿ. ಅಷ್ಟೇ ಅಲ್ಲ, ಕೋವಿಡ್ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಸಾರ್ವಜನಿಕರ ಕಷ್ಟನಷ್ಟಗಳಿಗೆ ಸ್ಪಂದಿಸಿದ್ದನ್ನು ಮತದಾರರು ಮರೆಯುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ನಡೆಯುವ ಎಲ್ಲಾ ಉಪ ಚುನಾವಣೆಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಈಗಾಗಲೇ ಪಕ್ಷದ ವರಿಷ್ಠರು ನಮಗೆ ನೀಡಿದ ನಿರ್ದೇಶನದಂತೆ ಚುನಾವಣಾ ಪ್ರಚಾರಾರ್ಥವಾಗಿ ಬಸವಕಲ್ಯಾಣಕ್ಕೆ ಬಿಜೆಪಿಯ ಹಲವು ಹಿರಿಯ ಮುಖಂಡರೂ ಭೇಟಿ ನೀಡಲಿದ್ದಾರೆ. ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಸಕಲ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ.

ಬಲಿಷ್ಠ ಮತ್ತು ಭವ್ಯ ಭಾರತವನ್ನು ಕಟ್ಟುವ ಮೋದಿ ಪ್ರಯತ್ನಕ್ಕೆ ಮತದಾರರು ತಮ್ಮ ಬೆಂಬಲ ನೀಡುವುದು ಶತಃಸಿದ್ಧ ಎಂಬ ವಿಶ್ವಾಸದೊಂದಿಗೆ ನಮ್ಮ ಬಿಜೆಪಿಯ ಚುನಾವಣಾಭೂಮಿಕೆ ಸಿದ್ಧವಾಗಿದೆ. ಇದರಿಂದಾಗಿ ವಿರೋಧ ಪಕ್ಷಗಳಲ್ಲಿ ಈಗಾಗಲೇ ತಳಮಳ ಶುರುವಾಗಿದೆ.

ಹಿಂದಿನ ಉಪ ಚುನಾವಣೆಗಳಲ್ಲಿ ಬಿಜೆಪಿಯು ಹೆಚ್ಚಿನ ಕ್ಷೇತ್ರಗಳಲ್ಲಿ ಜಯಸಾಧಿಸಿದಂತೆಯೇ, ಈ ಉಪ ಚುನಾವಣೆಯಲ್ಲೂ ಸಹ ಎಲ್ಲಾ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿ ಹೊಸ ದಾಖಲೆ ನಿರ್ಮಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸವದಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.