ETV Bharat / state

ವಿಶ್ವ ಹೃದಯ ದಿನ.. ಜಯದೇವ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ - ವಿಶ್ವ ಹೃದಯ ದಿನ

ರಾಜ್ಯದ ಪ್ರಮುಖ ಹೃದಯ ಆಸ್ಪತ್ರೆಗಳಲ್ಲಿ ಒಂದಾದ ಜಯದೇವ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಆಚರಣೆ ನಡೆಸಲಾಯಿತು. ಕಾರ್ಯಕಮವನ್ನು ಡಿಸಿಎಂ ಅಶ್ವಥ್ ನಾರಾಯಣ್ ಉದ್ಘಾಟಿಸಿದರು.

ವಿಶ್ವ ಹೃದಯ ದಿನ
author img

By

Published : Sep 28, 2019, 8:46 AM IST

ಬೆಂಗಳೂರು: ರಾಜ್ಯದ ಪ್ರಮುಖ ಹೃದಯ ಆಸ್ಪತ್ರೆಗಳಲ್ಲಿ ಒಂದಾದ ಜಯದೇವ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಆಚರಣೆ ನಡೆಸಲಾಯಿತು. ಕಾರ್ಯಕಮವನ್ನು ಡಿಸಿಎಂ ಅಶ್ವತ್ಥ್‌ ನಾರಾಯಣ್ ಉದ್ಘಾಟಿಸಿದರು. ಇದೇ ವೇಳೆ, ಪರಿಸರದಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯದಿಂದ ಹೆಚ್ಚೆಚ್ಚು ಹೃದಯಾಘಾತ ಉಂಟಾಗುತ್ತಿದೆ ಎಂಬ ಅಧ್ಯಯನ ವರದಿಯನ್ನೂ ಬಿಡುಗಡೆ ಮಾಡಲಾಯಿತು.

ವಿಶ್ವ ಹೃದಯ ದಿನ.. ಜಯದೇವ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಉದ್ಘಟಿಸಿದ ಡಿಸಿಎಂ

ಉಪಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಜಯದೇವಾ ನಿರ್ದೇಶಕರಾದ ಡಾ. ಮಂಜುನಾಥ್ ನೇತೃತ್ವದಲ್ಲಿ ವಿಶ್ವ ಹೃದಯ ದಿನ ಆಚರಿಸಲಾಯಿತು. ಅಲ್ಲದೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಹೃದ್ರೋಗಿಗಳಿಗೆ ಯೋಗ ಮಾಡಿಸುವ ಮೂಲಕ, ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗದ ಪ್ರಾಮುಖ್ಯತೆಯನ್ನು ಸಾರಿದರು.

ಇನ್ನು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ. ಮಂಜುನಾಥ್ ಅವರು, ಇತ್ತೀಚಿನ ದಿನಗಳಗಳಲ್ಲಿ ವಾಯು ಮಾಲಿನ್ಯದಿಂದ ಹೆಚ್ಚು ಹೃದಯ ಸಮಸ್ಯೆ ಕಾಣಿಸುತ್ತಿದೆ‌. ದುರಂತ ಅಂದ್ರೆ 25 ರಿಂದ 35 ವಯಸ್ಸಿನವರಲ್ಲಿ ಹೆಚ್ಚು ಹೃದಯ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಜನರು ಅವರ ಜೀವನ ಶೈಲಿ, ಆಹಾರ ಶೈಲಿಗಳಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಜನರಿಗೆ ಕಿವಿ ಮಾತು ಹೇಳಿದರು.

ಇನ್ನು, ಇದೇ ವೇಳೆ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥ್‌ ನಾರಾಯಣ, ನಗರ ಪ್ರದೇಶಗಳಲ್ಲಿ ಕಸದ ಸಮಸ್ಯೆ ಇಂದ ಜನರಲ್ಲಿ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಆದ್ದರಿಂದ ಸರ್ಕಾರದ ಜೊತೆ ಜನರು ಕೂಡ ಜಾಗೃತರಾಗಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಗಮನಹರಿಸಬೇಕು ಎಂದು ಮನವಿ ಮಾಡಿದರು.

Intro:ರಾಜ್ಯದ ಪ್ರಮುಖ ಹೃದಯ ಆಸ್ಪತ್ರೆಗಳಲ್ಲಿ ಒಂದಾದ ಜಯದೇವ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಆಚರಣೆ ನಡೆಯಿತು. ಇದೇ ವೇಳೆ, ಪರಿಸರದಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯದಿಂದ ಹೆಚ್ಚೆಚ್ಚು ಹೃದಯಾಘಾತ ಉಂಟಾಗುತ್ತಿದೆ ಎಂಬ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಲಾಯಿತು. ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಜಯದೇವಾ ನಿರ್ದೇಶಕರಾದ ಡಾ. ಮಂಜುನಾಥ್ ನೇತೃತ್ವದಲ್ಲಿ ವಿಶ್ವ ಹೃದಯ ದಿನ ಆಚರಿಸಲಾಯಿತು. ಅಲ್ಲದೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಹೃದ್ರೋಗಿಗಳಿಗೆ ಯೋಗ ಮಾಡಿಸುವ ಮೂಲಕ, ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗದ ಪ್ರಾಮುಖ್ಯತೆಯನ್ನು ಸಾರಿದರು.

Body:ಕಾರ್ಯಕ್ರಮದಲ್ಲಿ ಮಾತನಾಡಿದ ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ ಮಂಜುನಾಥ್ ಅವರು, ಇತ್ತೀಚಿನ ದಿನಗಳಗಳಲ್ಲಿ ವಾಯು ಮಾಲಿನ್ಯದಿಂದ ಹೆಚ್ಚು ಹೃದಯ ಸಮಸ್ಯೆ ಕಾಣಿಸುತ್ತಿದೆ‌.ದುರಂತ ಅಂದ್ರೆ ೨೫ರಿಂದ ೩೯ ವಯಸ್ಸಿನವರಲ್ಲಿ ಹೆಚ್ಚು ಹೃದಯ ಸಮಸ್ಯೆ ಕಾಡುತ್ತಿದೆ.
ಅದ್ದರಿಂದ ಜನರು ಅವರ ಜೀವನ ಶೈಲಿಬ,ಆಹಾರ ಶೈಲಿಗಳಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಜನರಿಗೆ ಕಿವಿ ಮಾತು ಹೇಳಿದ್ರು.. ನಂತರ ಮಾತನಾಡಿದ ಡಿ ಸಿಎಮ್ ಅಶ್ವಥ್ ನಾರಾಯಣ್ ನಗರ ಪ್ರದೇಶಗಳಲ್ಲಿ ಕಸದ ಸಮಸ್ಯೆ ಇಂದ ಜನರಲ್ಲಿ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳ್ತಿದೆ.ಅದ್ದರಿಂದ ಜನರು ಸರ್ಕಾರದ ಜೊತೆ ಅವರು ಕೂಡ ಜಾಗೃತರಾಗಿ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳುವತ್ತ ಗಮನಹರಿಸಬೇಕು ಎಂದು ಮನವಿ ಮಾಡಿದ್ರು.

ಸತೀಶ ಎಂಬಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.