ಬೆಂಗಳೂರು: ಬೆಂಗಳೂರು ಸಂಚಾರ ಸುಗಮಗೊಳಿಸುವ ಬಗ್ಗೆ ಲಂಡನ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಮುಖ್ಯಸ್ಥರೊಂದಿಗೆ ಬಿಎಂಆರ್ಡಿಎ ಕಚೇರಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸಭೆ ನಡೆಸಿದರು.
ಇನ್ನು ಈ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಬಿಎಂಟಿಸಿ ಎಂಡಿ ಶಿಖಾ, ಟ್ರಾಫಿಕ್ ಕಮಿಷನರ್ ರವಿಕಾಂತೇಗೌಡರು, ಬಿ ಪ್ಯಾಕ್ ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು. ಆದರೆ, ಬಿ. ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭಾಗಿಯಾಗಿ ಅಚ್ಚರಿ ಮೂಡಿಸಿದ್ದು, ಮತ್ತೆ ಸರ್ಕಾರದಲ್ಲಿ ವಿಜಯೇಂದ್ರ ದರ್ಬಾರ್ ಶುರುವಾಯಿತಾ? ಅಮಿತ್ ಷಾ ಸೂಚನೆ ಉಲ್ಲಂಘಿಸಿ ವಿಜಯೇಂದ್ರ ಸಭೆಯಲ್ಲಿ ಭಾಗಿಯಾಗಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಜಯೇಂದ್ರ ಭಾಗಿ ಸಂಬಂಧ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು, ಇದು ಸರ್ಕಾರದಿಂದ ಮಾಡಿರೋ ಸಭೆಯಲ್ಲ ಬದಲಾಗಿ ಬಿ ಪ್ಯಾಕ್ ಮಾಡಿದ್ದ ಸಭೆ. ಬೆಂಗಳೂರಿನ ಸಂಚಾರ ದಟ್ಟಣೆ ಸುಗಮಗೊಳಿಸಲು ಅನುಕೂಲವಾಗುವಂತೆ ಪರಿಣಿತರ ಸಭೆ ನಡೆಸಿತು. ಲಂಡನ್ನ ಸಂಚಾರ ಮುಖ್ಯಸ್ಥರಾದ ವರ್ಮಾ ಮತ್ತು ಬೆನ್ ಅವರ ಜೊತೆ ಮಾತುಕತೆಯಲ್ಲಿ ಭಾಗಿಯಾಗಿದ್ದು ಅಷ್ಟೇ ಅಂತ ಸ್ಪಷ್ಟನೆ ನೀಡಿದ್ದಾರೆ.