ಬೆಂಗಳೂರು : ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳ ಬಗ್ಗೆ ಕೆಲ ಪಟ್ಟಭದ್ರರು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದು, ಜನರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಅವರಿಗೆಲ್ಲಾ ತಕ್ಕ ಉತ್ತರ ನೀಡುವಂತೆ ಬಿಜೆಪಿ ಜಾಲತಾಣಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಕರೆ ನೀಡಿದ್ದಾರೆ.
ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಳ್ಳಲು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠಕ್ಕೆ ಡಿಸಿಎಂ ಕರೆ - ಬಿಜೆಪಿ ಜಾಲತಾಣಕ್ಕೆ ಡಿಸಿಎಂ ಅಶ್ವತ್ಥನಾರಾಯಣ್ ಕರೆ
ವ್ಯವಸಾಯ ಮಾಡಲು, ಕೈಗಾರಿಕೆ ತೆಗೆಯಲು, ಜನವಸತಿ ಪ್ರದೇಶ ನಿರ್ಮಾಣ ಮಾಡಿಕೊಡಲು ಅವಕಾಶ ಮಾಡಿಕೊಡುವುದಿಲ್ಲ ಎನ್ನುವುದು ಒಂದು ಸಣ್ಣ ಅನುಮತಿಗಾಗಿ ಹತ್ತು ವರ್ಷ ಪಡೆದುಕೊಂಡರೆ ಸುಧಾರಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇಡೀ ವಿಶ್ವದಲ್ಲಿ ಕರ್ನಾಟಕದಲ್ಲಿ ಇರುವಷ್ಟು ಭೂಮಿ ದರ ಬೇರೆ ಎಲ್ಲಿಯೂ ಇಲ್ಲ. ಅಮೆರಿಕದಲ್ಲಿ ಕೂಡ ಇಲ್ಲದಷ್ಟು ದುಬಾರಿ ಬೆಲೆ ನಮ್ಮ ರಾಜ್ಯದ ಭೂಮಿಗಿದೆ..
ಬೆಂಗಳೂರು
ಬೆಂಗಳೂರು : ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳ ಬಗ್ಗೆ ಕೆಲ ಪಟ್ಟಭದ್ರರು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದು, ಜನರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಅವರಿಗೆಲ್ಲಾ ತಕ್ಕ ಉತ್ತರ ನೀಡುವಂತೆ ಬಿಜೆಪಿ ಜಾಲತಾಣಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಕರೆ ನೀಡಿದ್ದಾರೆ.
ಸೆಸ್ ಕಡಿಮೆ ಮಾಡಿ ಸರ್ಕಾರಕ್ಕೆ ಆದಾಯ ಕಡಿಮೆ ಮಾಡಿಕೊಂಡಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಬಂದು ವ್ಯಾಪಾರ ವಹಿವಾಟು ಮಾಡಲು ಎಪಿಎಂಸಿಯಲ್ಲಿ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಎಪಿಎಂಸಿ ಬಳಕೆ ದರವನ್ನು ಕಡಿಮೆ ಮಾಡಿ ಇನ್ನಷ್ಟು ಹೆಚ್ಚಿನ ಜನ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೂ ಕೂಡ ಎಪಿಎಂಸಿಯನ್ನ ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮೂಲಸೌಕರ್ಯ ಕಡೆಗಣಿಸುತ್ತಿರುವ ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದರು. ರೈತ ಎಪಿಎಂಸಿಗೆ ಬಾರದಿದ್ದರೂ ಮನೆ ಬಾಗಿಲಿನಿಂದಲೇ ತನ್ನ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದೇವೆ.
ರೈತರ ಬೇಡಿಕೆ ಇದ್ದಿದ್ದೆ ನಮ್ಮ ಬೆಳೆಗೆ ಸೂಕ್ತ ಬೆಲೆ ಸಿಗಬೇಕು ಎಂದು, ಇದಕ್ಕಾಗಿಯೇ ನಾವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಬೆಳೆಗಾರನಿಂದ ಬಳಕೆದಾರನವರೆಗೆ ಇದನ್ನ ಸರಳೀಕರಣಗೊಳಿಸಲಾಗಿದೆ. ಆದರೂ ಇದರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಬೇಸರಿಸಿದರು. ಈ ಹಿಂದೆ ಗಣಕೀಕರಣ ಮಾಡುವ ಸ್ಥಿತಿಯಲ್ಲಿ ಕೂಡ ಇದೇ ಸ್ಥಿತಿ ಎದುರಾಗಿತ್ತು. ಇದನ್ನೆಲ್ಲ ನಾವು ಏಕಾಏಕಿ ಹೊಸದಾಗಿ ಮಾಡಿದ್ದಲ್ಲ.
ನಮ್ಮ ಪ್ರಣಾಳಿಕೆಗಳಲ್ಲಿ ಘೋಷಣೆ ಮಾಡಿದ್ದೆವು, ಅದರಂತೆ ಜಾರಿಗೆ ತರುತ್ತಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ವ್ಯಾಪಾರಿಗಳು ಎಲ್ಲವನ್ನ ನಿಯಂತ್ರಣ ಮಾಡಲಿದ್ದಾರೆ. ಹಾಗಾಗಿ, ಯಾರಿಗೂ ಯಾವ ಸ್ವಾತಂತ್ರ್ಯ ಇರುವುದಿಲ್ಲ, ರೈತರು ಅಸಹಾಯಕರಾಗುತ್ತಾರೆ. ರೈತರು ಸಬಲೀಕರಣವಾಗುವುದಿಲ್ಲ, ಅವರಿಗೆ ಮಾರಕವಾಗಲಿದೆ ಎಂದು ಕೇವಲ ಮುಂದಿನ ದಿನಗಳಲ್ಲಿ ಹೀಗಾಗಲಿದೆ ಎನ್ನುವ ಕಲ್ಪನೆಯಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಕೆಲ ಪಟ್ಟಭದ್ರ ಶಕ್ತಿಗಳು ಮತ್ತು ನಮ್ಮ ಮೇಲೆ ಅಪನಂಬಿಕೆ ನಿರ್ಮಾಣ ಮಾಡಬೇಕು ಎನ್ನುವ ಪ್ರಯತ್ನದಲ್ಲಿರುವ ಕೆಲ ವ್ಯಕ್ತಿಗಳು, ಪಕ್ಷಗಳು, ನಾಯಕರಿಗೆ ನಾವು ಸ್ಪಷ್ಟ ಸಂದೇಶ ರವಾನಿಸಬೇಕು, ರೈತರಿಗೆ ಈ ಕಾಯ್ದೆಗಳಿಂದ ಸಾಕಷ್ಟು ಅನುಕೂಲವಾಗಲಿದೆ ರೈತರಿಗೆ ಬೇಕಾದ ಬೆಲೆ ಸಿಗಲು ಪೂರಕವಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ ಎನ್ನುವ ಮಾಹಿತಿಯನ್ನು ತಲುಪಿಸಬೇಕು ಎಂದು ಪಕ್ಷದ ಕಾರ್ಯಕರ್ತರಿತೆ ಸೋಷಿಯಲ್ ಮೀಡಿಯಾ ಸೆಲ್‌ಗೆ ಕರೆ ನೀಡಿದರು.
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ಯಾರು ಮುಂದೆ ಬರುತ್ತಿರಲಿಲ್ಲ, ರೈತ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಲಿದೆ ಎಂಬ ಆತಂಕ ಎಲ್ಲರನ್ನೂ ಕಟ್ಟಿ ಹಾಕಿತ್ತು. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲಿ ಕೂಡ ಈ ರೀತಿ ರೈತರಿಗೆ ಮಾರಕವಾದ ಕಾಯ್ದೆ ಇರಲಿಲ್ಲ, ಕರ್ನಾಟಕದಲ್ಲಿ ಮಾತ್ರ ಇಂತಹ ಕಾಯ್ದೆ ಇತ್ತು. ಇದು ರೈತವಿರೋಧಿ ಕಾಯ್ದೆಯಾಗಿದೆ ಹಾಗೂ ಅಭಿವೃದ್ಧಿಗೆ ಪೂರಕವಾದ ಕಾಯ್ದೆಯಲ್ಲ.
ವ್ಯವಸಾಯ ಮಾಡಲು, ಕೈಗಾರಿಕೆ ತೆಗೆಯಲು, ಜನವಸತಿ ಪ್ರದೇಶ ನಿರ್ಮಾಣ ಮಾಡಿಕೊಡಲು ಅವಕಾಶ ಮಾಡಿಕೊಡುವುದಿಲ್ಲ ಎನ್ನುವುದು ಒಂದು ಸಣ್ಣ ಅನುಮತಿಗಾಗಿ ಹತ್ತು ವರ್ಷ ಪಡೆದುಕೊಂಡರೆ ಸುಧಾರಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇಡೀ ವಿಶ್ವದಲ್ಲಿ ಕರ್ನಾಟಕದಲ್ಲಿ ಇರುವಷ್ಟು ಭೂಮಿ ದರ ಬೇರೆ ಎಲ್ಲಿಯೂ ಇಲ್ಲ. ಅಮೆರಿಕದಲ್ಲಿ ಕೂಡ ಇಲ್ಲದಷ್ಟು ದುಬಾರಿ ಬೆಲೆ ನಮ್ಮ ರಾಜ್ಯದ ಭೂಮಿಗಿದೆ. ಕಠಿಣ ಕಾಯ್ದೆ ಮೂಲಕ ಸುಲಭವಾಗಿ ಭೂಮಿ ಸಿಗದಂತೆ ಮಾಡಲಾಗಿದೆ.
ಕೃತಕವಾಗಿ ಅಭಾವ ಸೃಷ್ಟಿಸಿರುವುದರಿಂದ ಬೇಡಿಕೆ ಹೆಚ್ಚಾಗಿ ಭೂಮಿಯ ಬೆಲೆ ಜಾಸ್ತಿಯಾಗಿದೆ ಹಾಗಾಗಿ ನಾವು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದು ಎಪಿಎಂಸಿ ಕಾಯ್ದೆ ಮತ್ತು ಭೂಸುಧಾರಣಾ ಕಾಯ್ದೆಯನ್ನು ಡಿಸಿಎಂ ಸಮರ್ಥಿಸಿಕೊಂಡರು. ರೈತರ ಪರ ತಂದಿರುವ ಕಾಯ್ದೆಗಳ ಬಗ್ಗೆ ಸದ್ಯದಲ್ಲೇ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖರಿಗೆ ಸಮಗ್ರ ವಿವರ ನೀಡಲಾಗುತ್ತದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಯ್ದೆಯಿಂದ ರೈತರಿಗೆ ಆಗುವ ಉಪಯೋಗದ ಕುರಿತು ಮಾಹಿತಿ ಒದಗಿಸಲಿದ್ದು, ಅದನ್ನು ಪಕ್ಷದ ಸಾಮಾಜಿಕ ಜಾಲತಾಣ ರಾಜ್ಯದ ಪ್ರತಿಯೊಬ್ಬರಿಗೂ ತಲುಪಿಸಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.