ETV Bharat / state

ಹೊಸ ವರ್ಷಾಚರಣೆ ಸಭೆ - ಸಮಾರಂಭಗಳ ಮೇಲೆ  ಕಣ್ಗಾವಲಿಗೆ ಜಿಲ್ಲಾಡಳಿತದ ತಂಡ ಸಿದ್ಧ: ಜಿಲ್ಲಾಧಿಕಾರಿ - ಜಿಲ್ಲಾಧಿಕಾರಿ ಜೆ. ಮಂಜುನಾಥ್

ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಲಾಗ್ತಿದೆ.

dc-j-manjunath
ಜಿಲ್ಲಾಧಿಕಾರಿ ಜೆ. ಮಂಜುನಾಥ್
author img

By

Published : Dec 21, 2021, 3:34 PM IST

ಬೆಂಗಳೂರು: ಬೆಂಗಳೂರು‌ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಜನರು ಸೇರುತ್ತಾರೆ, ಸಭೆ, ಸಮಾರಂಭ ಅಥವಾ ಹೊಸ ವರ್ಷ ಆಚರಣೆಗೆ ಎಲ್ಲಿ ಜನರು ಗುಂಪುಗೂಡುತ್ತಾರೆ ಅಲ್ಲಿ ಕಣ್ಗಾವಲಿಡಲು ಜಿಲ್ಲಾಡಳಿತದಿಂದ ತಂಡಗಳು ಇದ್ದೇ ಇರುತ್ತವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ನಗರದ ಫ್ರೀಡಂ ಪಾರ್ಕ್​ನಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಜೆ. ಮಂಜುನಾಥ್

ಹೊಸ ವರ್ಷಕ್ಕೆ ನಗರದ ಹೊರವಲಯದಲ್ಲಿ ಪಾರ್ಟಿ, ರೆಸಾರ್ಟ್​ಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗಳಲ್ಲಿ ತಂಡಗಳಿದ್ದು, ಅವರು ಪ್ರತೀ ಸ್ಥಳಕ್ಕೆ ಭೇಟಿ ನೀಡಿ, ತಪಾಸಣೆ ನಡೆಸುವುದು, ನಿಗಾವಹಿಸುವ ಕೆಲಸ ಮಾಡಲಾಗುತ್ತಿದೆ. ಬಿಬಿಎಂಪಿ ಹೊರವ್ಯಾಪ್ತಿಯಲ್ಲಿ 36 ಪಿಹೆಚ್​ಸಿ, 3 ಸಿಹೆಚ್​ಸಿ, 4 ತಾಲೂಕು ಆಸ್ಪತ್ರೆಗಳಿದ್ದು, ಪ್ರತೀ ಆಸ್ಪತ್ರೆ ವ್ಯಾಪ್ತಿಯಲ್ಲಿ ಒಂದೊಂದು ತಂಡ ಕೆಲಸ ಮಾಡುತ್ತಿದೆ. 900 ಗ್ರಾಮಗಳಿದ್ದು, ಪ್ರತೀ ಮನೆಯವರ ಆರೋಗ್ಯ ಸ್ಥಿತಿಗತಿ, ಲಸಿಕೆ ಪೂರೈಕೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದರು.

ಬೆಂಗಳೂರು ಜಿಲ್ಲಾಧಿಕಾರಿ ಹೇಳಿಕೆ

ಇನ್ನು ಕ್ರಿಸ್ಮಸ್ ಮತ್ತು ಹೊಸ ವರ್ಷ ಸೆಲೆಬ್ರೇಷನ್ ಹಿನ್ನಲೆ ಹೊಸ ನಿಯಮಗಳ ಜಾರಿ ಬಗ್ಗೆ ಸರ್ಕಾರದ ಮಾರ್ಗಸೂಚಿಗೆ ಬೆಂಗಳೂರು ಜಿಲ್ಲಾಡಳಿತ ಎದುರು ನೋಡುತ್ತಿದೆ. ಈಗಾಗಲೇ ನಗರದಲ್ಲಿ ಕಡ್ಲೆಕಾಯಿ ಪರಿಷೆ, ಸಮಾರಂಭಗಳು ನಡೆದಿದೆ. ಸದ್ಯ ಸಮುದಾಯಕ್ಕೆ ಒಮಿಕ್ರಾನ್ ಹರಡಿಲ್ಲ ಎಂದು ತಿಳಿಸಿದರು.

ಇನ್ನು ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹೈ- ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಲಾಗ್ತಿದೆ. ನೆಗೆಟಿವ್ ಬಂದರೂ 7 ದಿನಗಳಿಗೆ ಮತ್ತೆ ಟೆಸ್ಟ್ ಮಾಡಲಾಗ್ತಿದೆ. ಒಮಿಕ್ರಾನ್ ‌ಸದ್ಯದ ಪರಿಸ್ಥಿತಿ ಬಗ್ಗೆ ಆತಂಕ ಬೇಡ. ಕ್ಲಸ್ಟರ್ ರೀತಿಯ ಪ್ರಕರಣಗಳು ಆತಂಕಕಾರಿ ಆಗಿಲ್ಲ. ವ್ಯಾಕ್ಸಿನೇಷನ್‌ ಡ್ರೈವ್ ಚೆನ್ನಾಗಿದೆ ಎಂದರು.

ಓದಿ: ಮೇಕೆದಾಟು ಯೋಜನೆ ಆರಂಭಿಸಲು ಸರ್ಕಾರ ಹಿಂದೇಟು ಹಾಕಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.