ETV Bharat / state

ಮತ ಚಲಾಯಿಸಿದ ಆರ್​ಎಸ್​ಎಸ್​ನ ದತ್ತಾತ್ರೇಯ ಹೊಸಬಾಳೆ, ವಚನಾನಂದ ಶ್ರೀ..

author img

By

Published : May 10, 2023, 4:32 PM IST

ಚುನಾವಣೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಈ ಹಬ್ಬವನ್ನು ಆಚರಿಸಬೇಕು. ಈ ಬಾರಿ ಬಹಳಷ್ಟು ಯುವ ಮತದಾರರು ಮತ ಚಲಾವಣೆ ಮಾಡಲಿದ್ದೀರಿ. ಅಧಿಕಾರಿಗಳು ಮತ ಚಲಾವಣೆಯ ಅನುಭವವನ್ನು ಬಹಳಷ್ಟು ಸುಲಲಿತಗೊಳಿಸಿದ್ದಾರೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

Assembly election
ಮತ ಚಲಾಯಿಸಿದ ಆರ್​ಎಸ್​ಎಸ್​ನ ದತ್ತಾತ್ರೇಯ ಹೊಸಬಾಳೆ, ವಚನಾನಂದ ಶ್ರೀ..

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಬುಧವಾರ ಮತದಾನ ಮಾಡಿದರು.

ಇಲ್ಲಿನ ಶೇಷಾದ್ರಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮತಕೇಂದ್ರದಲ್ಲಿ ಆರ್.ಎಸ್.ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತದಾನ ಮಾಡಿದರು. ಸಂಘದಲ್ಲಿ ಮೋಹನ್ ಭಾಗವತ್ ನಂತರದ ಸ್ಥಾನದಲ್ಲಿರುವ ಹೊಸಬಾಳೆ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಇದನ್ನೂ ಓದಿ: ಹಕ್ಕು ಚಲಾಯಿಸಿದ ಕಿಚ್ಚ.. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಸುದೀಪ್​ ಮನವಿ: ವಿಡಿಯೋ

ಮತದಾನದಿಂದ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿ- ವಚನಾನಂದ ಶ್ರೀಗಳ ಕರೆ: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಭೂಪಸಂದ್ರ ಮುಖ್ಯ ರಸ್ತೆಯಲ್ಲಿರುವ ವಿದ್ಯಾಸಾಗರ ಪ್ರಿ ಸ್ಕೂಲ್​​ನಲ್ಲಿನ ಬೂತ್​ನಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಮತ ಚಲಾವಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದನ್ನೂ ಓದಿ: ತಮಗೆ ತಾವೇ ವೋಟ್​ ಮಾಡಿಕೊಂಡ ಬಿಜೆಪಿ ಅಭ್ಯರ್ಥಿ ಶ್ರೀವತ್ಸ.. ಮೊದಲ ಬಾರಿ ಹಕ್ಕು ಚಲಾಯಿಸಿದ ಯುವಕ

ಚುನಾವಣೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಈ ಹಬ್ಬವನ್ನು ಆಚರಿಸಬೇಕು. ಈ ಬಾರಿ ಬಹಳಷ್ಟು ಯುವ ಮತದಾರರು ಮತ ಚಲಾವಣೆ ಮಾಡಲಿದ್ದೀರಿ. ಅಧಿಕಾರಿಗಳು ಮತ ಚಲಾವಣೆಯ ಅನುಭವವನ್ನು ಬಹಳಷ್ಟು ಸುಲಲಿತಗೊಳಿಸಿದ್ದಾರೆ. ಎಲ್ಲರೂ ಮತದಾನ ಮಾಡಬೇಕು. ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಜೆಡಿಎಸ್​ ರಾಜ್ಯದಲ್ಲಿ ಬಹುಮತ ಪಡೆಯಲಿದೆ: ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸ

ಮತ ಚಲಾಯಿಸಿದ ದಿವ್ಯಾಂಗ: ಅಂಗ ವೈಕಲ್ಯದ ನಡುವೆಯೂ ಅಶ್ವತ್ ಮತದಾನ ಮಾಡಿ ಮೆಚ್ಚುಗೆಗೆ ಪಾತ್ರರಾದರು. ಗೋವಿಂದರಾಜ ನಗರದ ಪಂತರ ಪಾಳ್ಯ ವಾರ್ಡ್​ನಲ್ಲಿ ವೋಟ್ ಮಾಡಿದ ದಿವ್ಯಾಂಗ ಚೇತನ ಗಮನ ಸೆಳೆದರು. ತಂದೆ - ತಾಯಿ ಸಹಾಯದಿಂದ ಮತಗಟ್ಟೆಗೆ ಬಂದು ವೋಟ್ ಮಾಡಿದರು.

ಇದನ್ನೂ ಓದಿ: ಮಂಗಳೂರು: ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಿದ ಯುವ ಮತದಾರರು ಫುಲ್ ಖುಷ್

ಕಾದು ಕಾದು ಸುಸ್ತಾದ ಮತದಾರರು: ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್​ನಲ್ಲಿರುವ ವೀವರ್ಸ್ ಕಾಲೋನಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಮತಗಟ್ಟೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಮತದಾನ ಪ್ರಕ್ರಿಯೆ ಚುರುಕು ಕಾಣಲಿಲ್ಲ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮಠಾಧೀಶರಿಂದ ಹಕ್ಕು ಚಲಾವಣೆ-ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.