ಬೆಂಗಳೂರು: ನಟ ಸುದೀಪ್ ಚಿತ್ರದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ, ಯುವತಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಇರುವ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ರೈನ್ ಬೋ ಡ್ಯಾನ್ಸ್ ಶಾಲೆಯ ಪವನ್ ಮಾಸ್ಟರ್ ಬಂಧಿತ ಆರೋಪಿ. ನಾಗರಭಾವಿಯ 2ನೇ ಸ್ಟೇಜ್ನಲ್ಲಿರುವ ರೈನ್ ನೃತ್ಯ ಶಾಲೆ ನಡೆಸುತ್ತಿದ್ದ, ಆರೋಪಿಗೆ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯು ಡ್ಯಾನ್ಸ್ ಕಲಿಯಲು ಹೋಗಿದ್ದಾಗ ಪರಿಚಯವಾಗಿತ್ತು. ಹೀಗೆ ಪರಿಯಚಯಗೊಂಡ ಇಬ್ಬರು ಡ್ಯಾನ್ಸ್ ಶೋ ಹೋಗಿ ಬರುತ್ತಿದ್ದರು.
ಇದೇ ಸಲುಗೆಯಿಂದ ಆರೋಪಿ ಪವನ್ ಜನವರಿ 12 ರಂದು ಕರೆ ಮಾಡಿ ನಟ ಸುದೀಪ್ ಚಿತ್ರದಲ್ಲಿ ತಂಗಿ ಪಾತ್ರ ಸಿಕ್ಕಿದೆ ಎಂದು ಡ್ಯಾನ್ಸ್ ಕ್ಲಾಸ್ಗೆ ಕರೆಸಿಕೊಂಡಿದ್ದ. ಆಡಿಷನ್ಗೆ ಡೈರಕ್ಟರ್ ಬಂದಿದ್ದಾರೆ ಎಂದು ಕರೆಸಿಕೊಂಡು ಪಾರ್ಟಿಗೆ ಹೋಗೋಣ ಎಂದು ಬಲವಂತ ಮಾಡಿದ್ದನಂತೆ. ಜೊತೆಗೆ ಮೊಬೈಲ್ನಲ್ಲಿ ಅಶ್ಲೀಲ ದೃಶ್ಯ ತೋರಿಸಿ ಅಸಭ್ಯ ವರ್ತಿಸಿ ಮತ್ತು ಮದ್ದು ಬರಿಸೋ ದ್ರಾವಣ ಕುಡಿಸಿ ಮಾನಭಂಗ ಮಾಡಿರುವ ಆರೋಪ ಈತನ ಮೇಲಿದೆ.
ಕೃತ್ಯದ ಬಳಿಕ ಆರೋಪಿ ಪವನ್, ಸಂತ್ರಸ್ತೆಯ ಸ್ನೇಹಿತನ ಜೊತೆಗೂಡಿ ಆಕೆಯನ್ನ ಮನೆಗೆ ತಂದು ಬಿಟ್ಟಿದ್ದ. ಬಳಿಕ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.