ETV Bharat / state

ಲಾಕ್​​ಡೌನ್​​​ನಲ್ಲಿ ನೆಲಕಚ್ಚಿದ ಉದ್ಯಮಗಳು; ವಾಣಿಜ್ಯ ಪರವಾನಗಿ ಆದಾಯಕ್ಕೆ ತೀವ್ರ ಪೆಟ್ಟು! - ಲಾಕ್​ಡೌನ್​ ಸಂಕಷ್ಟ

ಟ್ರೇಡ್ ಲೈಸೆನ್ಸ್​​ ಹೊರಗಿಟ್ಟರೆ ಕಾನೂನುಬಾಹಿರವಾಗಿ ಅಂಗಡಿ ಮಳಿಗೆಗಳು ತಲೆ ಎತ್ತಬಹುದು. ಪಾಲಿಕೆಯಿಂದ ಕಾಲಕಾಲಕ್ಕೆ ಪರಿಶೀಲನೆ ನಡೆಯದಿದ್ದರೆ, ನಿಯಂತ್ರಣ ಕಷ್ಟ ಎಂದು ಬಿಬಿಎಂಪಿ ಮುಖ್ಯ ಸಾರ್ವಜನಿಕ ಆರೋಗ್ಯ ಅಧಿಕಾರಿ ವಿಜಯೇಂದ್ರ ತಿಳಿಸಿದರು.

Damage to commercial license revenue
ಮುಚ್ಚಿದ ಮಳಿಗೆ
author img

By

Published : Sep 16, 2020, 6:58 PM IST

Updated : Sep 18, 2020, 5:41 PM IST

ಬೆಂಗಳೂರು: ಕೊರೊನಾ ಲಾಕ್​ಡೌನ್ ಬಳಿಕ ನಗರದ ಅದೆಷ್ಟೋ ಅಂಗಡಿ, ಮಳಿಗೆಗಳು ಶಟರ್ ಎಳೆದಿವೆ. ಪ್ರತಿವರ್ಷದಂತೆ ಹೊಸ ವಾಣಿಜ್ಯ ಮಳಿಗೆಗಳು ಹೆಚ್ಚಾಗಿ ತಲೆ ಎತ್ತಿಲ್ಲ. ಇನ್ನು ಉದ್ಯಮ ನಷ್ಟದಿಂದಾಗಿ ವಾಣಿಜ್ಯ ಪರವಾನಗಿಯನ್ನೂ ನವೀಕರಣ ಮಾಡಲಾಗದೆ ಮಾಲೀಕರು ಪರದಾಡಿದ್ದಾರೆ. ಇವೆಲ್ಲವನ್ನು ಬಿಬಿಎಂಪಿಯ ಅಂಕಿ ಅಂಶಗಳೇ ದೃಢಪಡಿಸಿವೆ.

ಕೊರೊನಾ ಆರಂಭವಾಗುವ ಮೊದಲು 2019ರ ಫೆಬ್ರುವರಿ 1 ರಿಂದ 2020ರ ಮಾರ್ಚ್​​ 31 ರವರೆಗೆ 13,172 ಹೊಸ ಉದ್ಯಮಗಳು ಪರವಾನಗಿ ಪಡೆದಿದ್ದು, ಇದರಿಂದ ಪಾಲಿಕೆಗೆ 9,31,68,600 ರೂಪಾಯಿ ಆದಾಯ ಬಂದಿದೆ. ಆದರೆ ಈ ವರ್ಷದ ಆರಂಭದಿಂದ ಸೆ.9ರವರೆಗೆ ಕೇವಲ 3,438 ಹೊಸ ಉದ್ಯಮ ಆರಂಭವಾಗಿದ್ದು, ಇವುಗಳ ಪರವಾನಗಿಯಿಂದ 24,000,260 ಸಂಗ್ರಹವಾಗಿದೆ.

ಇನ್ನು, ಕಳೆದ ವರ್ಷ 38,392 ಉದ್ಯಮಗಳ ಪರವಾನಗಿ ನವೀಕರಣಗೊಳಿಸಿದ್ದು, 37,35,76,565 ರೂಪಾಯಿ ಆದಾಯ ಸಂಗ್ರಹವಾಗಿತ್ತು. ಆದರೆ, ಈ ಬಾರಿ 34,713 ವಾಣಿಜ್ಯ ಪರವಾನಗಿ ನವೀಕರಣಗೊಂಡಿದ್ದು, 45,88,92,725 ರೂಪಾಯಿ ಆದಾಯ ಬಂದಿದೆ.

ಬಿಬಿಎಂಪಿ ಮುಖ್ಯ ಸಾರ್ವಜನಿಕ ಆರೋಗ್ಯ ಅಧಿಕಾರಿ ವಿಜಯೇಂದ್ರ

ಪ್ರತಿ ವರ್ಷ ಅಥವಾ ಐದು ವರ್ಷಕ್ಕೊಮ್ಮೆ ವಾಣಿಜ್ಯ ಪರವಾನಗಿಯನ್ನು ನವೀಕರಣಗೊಳಿಸಲು ಬಿಬಿಎಂಪಿ ಆನ್​​ಲೈನ್ ವ್ಯವಸ್ಥೆ ಮಾಡಿರುವುದರಿಂದ ಹೆಚ್ಚಿನ ಮಾಲೀಕರು ನವೀಕರಣಗೊಳಿಸಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಹೊಸ ಉದ್ಯಮಗಳು ನಗರದ ಯಾವ ಭಾಗದಲ್ಲೂ ತಲೆ ಎತ್ತಿಲ್ಲ. ಮಹದೇವಪುರದಲ್ಲಿ ಪ್ರತಿ ವರ್ಷ 2,317 ಹೊಸ ಉದ್ಯಮಗಳು ತಲೆ ಎತ್ತಿದರೆ ಈ ಬಾರಿ ಕೇವಲ 630 ಮಾಲೀಕರು ಹೊಸ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಸಾರ್ವಜನಿಕ ಆರೋಗ್ಯ ಅಧಿಕಾರಿ ವಿಜಯೇಂದ್ರ, ಪುನರ್ ನವೀಕರಣ, ಹೊಸ ಟ್ರೇಡ್ ಲೈಸೆನ್ಸ್ ಪಡೆಯಲು ಆನ್​​ಲೈನ್ ವ್ಯವಸ್ಥೆ ಮಾಡಲಾಗಿದೆ. ಆನ್​ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಆರಂಭದಲ್ಲಿ ಉದ್ದಿಮೆ ಪರವಾನಗಿಯನ್ನು ಆನ್​​ಲೈನ್ ಮೂಲಕ ಡೌನ್​​ಲೋಡ್ ಮಾಡಿಕೊಂಡು, ನಂತರ ಆರೋಗ್ಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾನೂನು ಅನ್ವಯ ಇದೆಯೋ ಇಲ್ಲವೋ ಎಂಬುದನ್ನು ದೃಢಪಡಿಸುತ್ತಾರೆ ಎಂದರು.

ಇದನ್ನೂ ಓದಿ...ಆರ್ಥಿಕ ಸಂಕಷ್ಟದಲ್ಲಿ ವ್ಯಾಪಾರಸ್ಥರು, ಪರವಾನಿಗೆ ನವೀಕರಣಕ್ಕೆ ಹಿಂದೇಟು!

ಕೋವಿಡ್ ಪರಿಣಾಮ ವಾಣಿಜ್ಯ ಚಟುವಟಿಕೆಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಅರ್ಜಿಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಾರ್ಚ್ 31ರೊಳಗೆ ನವೀಕರಣಕ್ಕೆ ದಂಡ ಇರುವುದಿಲ್ಲ. ಆದರೆ, ನಂತರ ಮಾಡಿದರೆ ಶೇ.100ರಷ್ಟು ದಂಡ ಪಾವತಿಸಬೇಕು. ಉದ್ಯಮಿಗಳ, ವಾಣಿಜ್ಯ ಮಳಿಗೆಗಳ ಮಾಲೀಕರು ಬೇಡಿಕೆಯನ್ನಿಟ್ಟು ಕಾನೂನು ಪ್ರಕಾರ ವ್ಯಾಪಾರ ಪರವಾನಗಿಯಿಂದ ಹೊರಗಿಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟೇ ಸಭೆ ನಡೆಯಬೇಕಿದೆ. ಯಾವ ಉದ್ದಿಮೆಗಳನ್ನು ವ್ಯಾಪಾರ ಪರವಾನಿಗೆಯಡಿಗೆ ತರಬೇಕು. ಯಾವುದನ್ನು ಹೊರಗಿಡಬೇಕು ಎಂದು ಸಮಗ್ರವಾಗಿ ಪರಿಶೀಲಿಸಿ ಸಮಿತಿ ರಚಿಸಿ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ವಲಯವಾರು ಹೊಸ ಉದ್ಯಮ ಪರವಾನಗಿ ಅರ್ಜಿ ವಿವರ

ವಲಯ2019ರ ಫೆ.1-2020ರ ಮಾ.312020-21 (ಸೆ.9ರವರೆಗೆ)
ಯಲಹಂಕ 1,101302
ಮಹದೇವಪುರ2,317630
ದಾಸರಹಳ್ಳಿ 26089
ರಾಜರಾಜೇಶ್ವರಿ ನಗರ1,770438
ಬೆಂಗಳೂರು ಪಶ್ಚಿಮ1,790401
ಬೆಂಗಳೂರು ದಕ್ಷಿಣ2,193541
ಬೆಂಗಳೂರು ಪೂರ್ವ2,177581
ಬೊಮ್ಮನಹಳ್ಳಿ1,564456
ಒಟ್ಟು 13,1723,438

ವಾಣಿಜ್ಯ ಪರವಾನಗಿ ಎಲ್ಲರಿಗೂ ಅನ್ವಯ ಇಲ್ಲ!: ಇನ್ನು, ಈ ಬಗ್ಗೆ ಫೆಡರೇಶನ್ ಆಫ್ ಬೆಂಗಳೂರು ಟ್ರೇಡರ್ಸ್ ಅಸೋಸಿಯೇಷನ್​​ನ ಅಧ್ಯಕ್ಷ ಡಾ.ಪ್ರಕಾಶ್ ಮಂಡೋತ್ ಮಾತನಾಡಿ, 2007ರಿಂದಲೂ ಈ ವ್ಯಾಪಾರ ಪರವಾನಗಿ ಕುರಿತು ಕೆಲಸ ಮಾಡುತ್ತಿದ್ದೇವೆ. ಸರ್ಕಾರಕ್ಕೆ ದುಡ್ಡು ಪಾವತಿಸಲು ನಮಗೆ ತೊಂದರೆ ಇಲ್ಲ. ಆದರೆ, ನಾವು ಈಗಾಗಲೇ ಶಾಪ್ಸ್ ಆಂಡ್ ಎಸ್ಟಾಬ್ಲಿಷ್​ಮೆಂಟ್ ಆ್ಯಕ್ಟ್ ಅಡಿಯಲ್ಲಿ ಇದ್ದೇವೆ. ಪ್ರತೀ ವರ್ಷ ಪ್ರೊಫೆಷನಲ್ ಟ್ಯಾಕ್ಸ್ ಕಟ್ಟುತ್ತೇವೆ ಎಂದರು.

ಕೆಎಂಸಿ ಅಡಿಯಲ್ಲಿ ನಗರ ಪಾಲಿಕೆಗೆ ಟ್ರೇಡ್ ಲೈಸೆನ್ಸ್ ಅಂತ ಹೆಚ್ಚುವರಿ ತೆರಿಗೆ ವಿಧಿಸಲು ಅಧಿಕಾರ ಇಲ್ಲ ಎಂಬ ಕಾನೂನೇ ಇದೆ. ಆರೋಗ್ಯಕ್ಕೆ ಸಂಬಂಧಿಸಿದ ಆಸ್ಪತ್ರೆ, ಹೋಟೆಲ್, ರೆಸ್ಟೋರೆಂಟ್, ಲ್ಯಾಬ್​​​ಗಳಿಗೆ ಮಾತ್ರ ಕಾನೂನು ಇದೆ. ಆದರೆ ಜೆರಾಕ್ಸ್​​ ಅಂಗಡಿ, ಬಟ್ಟೆ, ಬ್ಯಾಗ್ ಅಂಗಡಿಗಳಿಗೂ ಆರೋಗ್ಯಕ್ಕೂ ಸಂಬಂಧ ಇಲ್ಲ. ಆದರೂ ಬಿಬಿಎಂಪಿ ಇದನ್ನು ಸರಿಪಡಿಸಿಲ್ಲ. ಜಯನಗರ ಮಾರುಕಟ್ಟೆ, ಕಮರ್ಷಿಯಲ್ ರಸ್ತೆಗಳಲ್ಲಿರುವ ಅಂಗಡಿಗಳಿಗೂ ವ್ಯಾಪಾರ ಪರವಾನಗಿ ಯಾಕೆ ವಿಧಿಸಬೇಕು. ಈಗಾಗಲೇ ಕಮರ್ಷಿಯಲ್ ಬಾಡಿಗೆ, ನೀರು-ವಿದ್ಯುತ್ ಬಿಲ್ ಕಟ್ಟಿ, ಕಮರ್ಷಿಯಲ್ ಕಂದಾಯ ಸಂಗ್ರಹಿಸಿ, ಎರಡು ಮೂರು ರೀತಿಯಲ್ಲಿ ತೆರಿಗೆ ಪಾವತಿಸಿದರೂ ಮತ್ತೆ ವ್ಯಾಪಾರ ಪರವಾನಗಿ ಏಕೆ? ಹೀಗಾಗಿ, ನಾವು ಕಟ್ಟುವುದಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

Last Updated : Sep 18, 2020, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.