ಬೆಂಗಳೂರು/ಆನೇಕಲ್ : 'ದಲಿತ ನಾಯಕ ಸಿಎಂ ಆಗ್ತಾನೆ ಎಂಬ ಕನಸು ಕಾಣುವವನು ಹುಚ್ಚ' ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ. ಆನೇಕಲ್ ಪಟ್ಟಣದ ಗುಡ್ನಹಳ್ಳಿ ಗ್ರಾಮದ ಸಾಯಿರಾಮ್ ಕಾಲೇಜಿನ 21ನೇ ಘಟಿಕೋತ್ಸವ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ನೀಡಿದ್ದಾರೆ.
ದಲಿತ ಮುಖ್ಯಮಂತ್ರಿ ಕನಸು ಕಾಣುವವನು ಹುಚ್ಚ. ಅದಕ್ಕೆ ಇತಿಹಾಸದಲ್ಲಿ ಹಲವು ಉದಾಹರಣೆಗಳಿವೆ. ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಐದು ವರ್ಷ ಮಂತ್ರಿಯಾಗಲು ಯಾವ ರಾಜಕೀಯ ಪಕ್ಷಗಳು ಬೆಂಬಲ ನೀಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಹಲವು ಬಾರಿ ಶಾಸಕರಾಗಿದ್ದರು.
ಬೇಕಂತಲೇ ಅವರನ್ನು ಮುಖ್ಯಮಂತ್ರಿ ಮಾಡಲು ಬಿಡಲಿಲ್ಲ. ರಾಜಕಾರಣದಲ್ಲಿ ಅವರನ್ನು ಬೇಕಂತಲೇ ಸೋಲಿಸಿದರು. ಕಾಂಗ್ರೆಸ್‌ನಲ್ಲಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಆಗಲು ಬಿಡದೇ ಸೋಲಿಸಿದರು. ಇಂತಹ ಕೆಟ್ಟ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾನೆ ಎಂಬ ಕನಸು ಕಾಣುವವನು ಹುಚ್ಚ. ಬೊಮ್ಮಾಯಿ ರಾಜ್ಯದ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದರು.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ನಿರ್ನಾಮ.. ಶಾಸಕ ಈಶ್ವರಪ್ಪ ಭವಿಷ್ಯ