ETV Bharat / state

ಬೆಂಗಳೂರಿನಲ್ಲಿ ನಿತ್ಯ 2 ಸಾವಿರ ಕೋವಿಡ್ ಟೆಸ್ಟ್​​.. ಈವರೆಗೆ 25 ಮಂದಿ ಕ್ವಾರಂಟೈನ್ : ವಿಶೇಷ ಆಯುಕ್ತ ಡಿ.ರಂದೀಪ್

author img

By

Published : Aug 6, 2021, 3:51 PM IST

ಕೇರಳ ಹಾಗೂ ಮಹಾರಾಷ್ಟ್ರದ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್​​ಗೆ ಒಳಪಡಿಸಲು ದಿನಕ್ಕೆ 750 ರೂ. ನಂತೆ ಪಾಲಿಕೆ 9 ಹೋಟೆಲ್​​ಗಳನ್ನು ಗುರುತಿಸಿದೆ. ಪಾಲಿಕೆಯೇ ಖರ್ಚು ವೆಚ್ಚ ನೋಡಿಕೊಳ್ಳಲಿದೆ. ನಿತ್ಯ 2 ಸಾವಿರ ಟೆಸ್ಟ್ ಮಾಡಲಾಗುತ್ತಿದ್ದು, ಈವರೆಗೆ 25 ಜನರನ್ನು ಕ್ವಾರಂಟೈನ್ ಮಾಡಲಾಗಿದೆ..

Special Health Commissioner  D. Randeep
ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್

ಬೆಂಗಳೂರು : ನಗರದಲ್ಲಿ ನಿಧಾನಗತಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. 10 ರಿಂದ 14 ದಿನಗಳ ಕಾಲ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಅಥವಾ ಮನೆ ಐಸೋಲೇಷನ್​​ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈ ಪ್ರಕಾರ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ನಿಗದಿಯಾಗುತ್ತದೆ.

ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್ ಮಾಹಿತಿ

ಕೆಲ ಸಂದರ್ಭ ಆಸ್ಪತ್ರೆಗಳಲ್ಲಿ ಹೆಚ್ಚು ದಿನಗಳ ಕಾಲ ಚಿಕಿತ್ಸೆ ಪಡೆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಎರಡು ವಾರಗಳ ಹಿಂದೆ 300 ರಿಂದ 350 ಇದ್ದು, ಇತ್ತೀಚೆಗೆ 400 ರಿಂದ 450ಕ್ಕೆ ಏರಿಕೆಯಾಗುತ್ತಿದೆ.

ಪ್ರತಿ ವಾರದ ಲೆಕ್ಕಾಚಾರದಲ್ಲಿ ನೋಡಿದಾಗ ನಿಧಾನವಾಗಿ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದರು. ನಗರದಲ್ಲಿ 155 ಕಂಟೈನ್‌ಮೆಂಟ್ ಝೋನ್​​ಗಳಿವೆ. ಈ ಪೈಕಿ 78 ಅಪಾರ್ಟ್‌ಮೆಂಟ್​​ಗಳಲ್ಲಿ ಕ್ಲಸ್ಟರ್ಸ್ ಕಂಡು ಬಂದಿದ್ದರೆ, 70 ಮನೆಗಳಲ್ಲಿ ಹಾಗೂ 3-4 ಹಾಸ್ಟೆಲ್​​ಗಳಲ್ಲಿ ಕಂಡು ಬಂದಿದೆ‌ ಎಂದರು.

ದಿನಾಂಕ - ಪಾಸಿಟಿವ್ ಕೇಸ್ - ಪಾಸಿಟಿವಿಟಿ ದರ - ಡಿಸ್ಚಾರ್ಜ್ ಸಂಖ್ಯೆ

  • ಜು.15 ರಿಂದ ಜು.21 - 2684 - 0.64% - 6414
  • ಜು.22 ರಿಂದ ಜು.28 - 2819 - 0.69% - 3116
  • ಜು.29 ರಿಂದ ಆ.4 - 2877 - 0.66% - 2684

25 ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಿದ ಪಾಲಿಕೆ : ಕೇರಳ ಹಾಗೂ ಮಹಾರಾಷ್ಟ್ರದ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್​​ಗೆ ಒಳಪಡಿಸಲು ದಿನಕ್ಕೆ 750 ರೂ. ನಂತೆ ಪಾಲಿಕೆ 9 ಹೋಟೆಲ್​​ಗಳನ್ನು ಗುರುತಿಸಿದೆ. ಪಾಲಿಕೆಯೇ ಖರ್ಚು ವೆಚ್ಚ ನೋಡಿಕೊಳ್ಳಲಿದೆ. ನಿತ್ಯ 2 ಸಾವಿರ ಟೆಸ್ಟ್ ಮಾಡಲಾಗುತ್ತಿದ್ದು, ಈವರೆಗೆ 25 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.

ಪ್ರಯಾಣಿಕರು ಮೂರು ದಿನದ ಒಳಗಾಗಿ ಆರ್​​ಟಿಪಿಸಿಆರ್ ನೆಗೆಟಿವ್ ಟೆಸ್ಟ್ ರಿಪೋರ್ಟ್ ತರುತ್ತಿಲ್ಲ. ಇದರಿಂದಾಗಿ ಪ್ರಮುಖ ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಪ್ರಯಾಣ ಆರಂಭಕ್ಕೂ ಮೊದಲೇ ಅವಧಿ ತಿಳಿದುಕೊಂಡು 9 ತಂಡಗಳಿಂದ ಟೆಸ್ಟಿಂಗ್ ನಡೆಯುತ್ತಿದೆ. ಇಂದಿನಿಂದ ಕ್ವಾರಂಟೈನ್ ಕೂಡ ಹೆಚ್ಚು ಮಾಡಲಾಗುವುದು. ಪ್ರಯಾಣಿಕರಲ್ಲಿ 2% ಪಾಸಿಟಿವ್ ಮಾತ್ರ ಬಂದಿದ್ದು, ಸಿಸಿಸಿ ಸೆಂಟರ್​​ಗೆ ದಾಖಲಿಸಲಾಗಿದೆ ಎಂದು ಡಿ.ರಂದೀಪ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.