ETV Bharat / state

ಯುವ ಸಮುದಾಯಕ್ಕೆ ಸುಷ್ಮಾ ಸ್ವರಾಜ್ ಉತ್ಕೃಷ್ಟ ಮಾದರಿ.. ಸಂತಾಪ ನುಡಿಯಲ್ಲಿ ಡಿಕೆಶಿ ಬಣ್ಣನೆ - ಶೋಕ ಸಂದೇಶ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ನಿಧನಕ್ಕೆ ಮಾಜಿ ಸಚಿವ ಡಿ ಕೆ ಶಿವಕುಮಾರ್​ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.

ಡಿ.ಕೆ ಶಿವಕುಮಾರ್
author img

By

Published : Aug 7, 2019, 3:45 PM IST

ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್​ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಡಿ ಕೆ ಶಿವಕುಮಾರ್, ತಮ್ಮ ಹೋರಾಟ ಹಾಗೂ ಬದುಕಿನ ಮೂಲಕ ದೇಶದ ಯುವ ಸಮುದಾಯಕ್ಕೆ ಅವರು ಉತ್ಕೃಷ್ಟ ಮಾದರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ. ಮಾತೃ ಹೃದಯ, ದಿಟ್ಟತನ ಎರಡೂ ಮೇಳೈಸಿದ್ದ ಸುಷ್ಮಾ ಸ್ವರಾಜ್ ಅವರು ಚುರುಕುಮತಿ ಹಾಗೂ ಧೀರೋದಾತ್ತ ರಾಜಕಾರಣಿ ಆಗಿದ್ದರು. ಹೀಗಾಗಿಯೇ ಸಣ್ಣ ವಯಸ್ಸಿನಲ್ಲೇ ಶಾಸನಸಭೆ ಪ್ರವೇಶಿಸಿದರು. ಪಕ್ಷ, ತತ್ವ-ಸಿದ್ದಾಂತ ಮೀರಿ ಸರ್ವರನ್ನೂ ಒಳಗೊಳ್ಳುವ ಅವರ ಹೃದಯ ವೈಶಾಲ್ಯ, ಸಮನ್ವಯ ಭಾವ ಎಲ್ಲರ ಮನಗೆದ್ದಿತ್ತು. ನೇರ ನಡೆ-ನುಡಿಗೆ ಹೆಸರಾಗಿದ್ದ ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಕೇಂದ್ರ ಸಚಿವ ಸ್ಥಾನ, ದಿಲ್ಲಿ ಮುಖ್ಯಮಂತ್ರಿ ಪದವಿ ಸೇರಿದಂತೆ ತಾವು ವಹಿಸಿಕೊಂಡ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಂಥ ಸುಷ್ಮಾ ಸ್ವರಾಜ್ ಅವರ ಅಗಲಿಕೆ ಅತೀವ ನೋವು ತಂದಿದೆ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರ ನಿಧನ ಇಡೀ ದೇಶಕ್ಕೆ ಭರಿಸಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಅವರು ಶೋಕ ಸಂದೇಶದಲ್ಲಿ ಹೇಳಿದ್ದಾರೆ.

ಖರ್ಗೆ ಸಂತಾಪ : ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಖರ್ಗೆ, ಸುಮಾರು 25 ವರ್ಷದಿಂದ ಸುಷ್ಮಾ ಸ್ವರಾಜ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಪ್ರತಿ ಪಕ್ಷದ ನಾಯಕಿಯಾಗಿದ್ದರು. ಯಾವಾಗಲೂ ಗೌರವದಿಂದ ನನ್ನನ್ನು ಮಾತಾಡಿಸುತ್ತಿದ್ದರು. ಪಕ್ಷ ಪಂಗಡ ಮರೆತು ಪಕ್ಷಾತೀತವಾಗಿ ಹಿರಿಯರಿಗೆ ಗೌರವ ನೀಡುವ ವ್ಯಕ್ತಿತ್ವ ಅವರದ್ದಾಗಿತ್ತು. ಸದನದ ಒಳಗೆ, ಹೊರಗೆ ಭೇಟಿಯಾದಾಗ ಅವರು ನಿಜವಾಗಲೂ ಉತ್ತಮ ಹೃದಯವಂತಿಕೆಯಿಂದ ನಡೆದುಕೊಳ್ಳುತ್ತಿದ್ದರು. ಇಂತಹ ನಾಯಕಿ ಇಷ್ಟು ಬೇಗ ನಮ್ಮನ್ನು ಅಗಲಿ ಹೋಗಿರುವುದು ತೀವ್ರ ನೋವು ತಂದಿದೆ ಎಂದು ಹೇಳಿದರು.

Intro:NEWSBody:ಸುಷ್ಮಾ ಸ್ವರಾಜ್ ಅಗಲಿಕೆಗೆ ಸಂತಾಪ; ಪ್ರವಾಹದ ಬಗ್ಗೆ ಸಿಎಂ ಗಮನಹರಿಸಲಿ ಎಂದು ಎಚ್ಚರಿಸಿದ ಖರ್ಗೆ

ಬೆಂಗಳೂರು: ಸುಷ್ಮಾ ಸ್ವರಾಜ್ ನಿಧನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸುಷ್ಮಾ ಸ್ವರಾಜ್ ಪರಿಚಯ ಸುಮಾರು ವರ್ಷಗಳಿಂದಲೇ ನನಗಿತ್ತು. ಹರಿಯಾಣದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಂತ್ರಿಯಾಗಿ ರಾಜಕೀಯ ಜೀವನ ಪ್ರಾಭಿಸಿದ್ದರು. ಒಳ್ಳೆಯ ವಕ್ತಾರರಾಗಿದ್ದರು, ವಕೀಲೆಯಾಗಿ , ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಒಳ್ಳೆಯ ಭಾಷಣಕಾರರ ಕೂಡಾ ಆಗಿದ್ದರು ಎಂದು ನುಡಿದಿದ್ದಾರೆ.
ಸುಮಾರು 25 ವರ್ಷದಿಂದ ಅವರನ್ನು ಸಮೀಪದಿಂದ ಕಂಡಿದ್ದೇನೆ. ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಪ್ರತಿ ಪಕ್ಷದ ನಾಯಕಿಯಾಗಿದ್ದರು. ಯಾವಾಗಲೂ ಗೌರವದಿಂದ ನನ್ನನ್ನು ಮಾತಾಡಿಸುತ್ತಿದ್ದರು. ಪಕ್ಷ ಪಂಗಡ ಮರೆತು ಪಕ್ಷಾತೀತವಾಗಿ ಹಿರಿಯರಿಗೆ ಗೌರವ ನೀಡುವ ವ್ಯಕ್ತಿತ್ವ ಅವರದ್ದಾಗಿತ್ತು. ಅವರಿಗೆ ಬಹಳ ದಿನದಿಂದ ಆರೋಗ್ಯ ಸರಿಯಿರಲಿಲ್ಲ. ಸದನದ ಒಳಗೆ, ಹೊರಗೆ ಭೇಟಿಯಾದಾಗ ಅವರು ನಿಜವಾಗಲೂ ಉತ್ತಮ ಹೃದಯವಂತಿಕೆಯಿಂದ ನಡೆದುಕೊಳ್ಳುತ್ತಿದ್ದರು. ಇಂತಹ ನಾಯಕಿ ನಮ್ಮನ್ನು ಅಗಲಿ ಹೋಗಿದ್ದಾಳೆ. ವಾಕ್ ಚಾತುರ್ಯದಿಂದ ಜನರ ಮನಸ್ಸು ಗೆದ್ದವರು. ಅವರದು ದೊಡ್ಡ ವಯಸ್ಸೇನಿರಲಿಲ್ಲ. ನಮಗಿಂತ 10 ವರ್ಷ ಚಿಕ್ಕ ವಯಸ್ಸಿನವರು. ಇಷ್ಟು ಬೇಗ ಬಿಟ್ಟು ಹೋಗ್ತಾರೆ ಅಂತ ಗೊತ್ತಿರಲಿಲ್ಲ. ಅವರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಪ್ರವಾಹದಿಂದ ದೊಡ್ಡ ಅನಾಹುತ
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ವಿಚಾರ ಮಾತನಾಡಿ, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ನದಿ ದಂಡೆಯ ಮೇಲಿನ ಹಳ್ಳಿಗಳಿಗೆ ದೊಡ್ಡ ಅನಾಹುತ ಆಗಿವೆ. ಸರ್ಕಾರ ತಕ್ಷಣವೆ ಸಹಾಯ ಮಾಡಬೇಕಿದೆ. ಊಟದ ವ್ಯವಸ್ಥೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ , ಆಹಾರ ಧಾನ್ಯ ಮುಟ್ಟಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಇಂಥ ಕಷ್ಟ ಕಾಲದಲ್ಲಿ ಸ್ಪಂದಿಸಿದರೆ ಜನರ ಪ್ರೀತಿ ಗಳಿಸಿದ ಹಾಗೆ ಆಗುತ್ತದೆ. ಎಲ್ಲೆಲ್ಲಿ ಮನೆ ಬಿದ್ದಿವೆಯೂ ಅಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿ ಕೊಡಲಿ. ಸಿಎಂ ಯಡಿಯೂರಪ್ಪ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನರ್ಹ ಶಾಸಕರು ಪ್ರವಾಹ ಪೀಡಿತ ತಮ್ಮ ಕ್ಷೇತ್ರಗಳನ್ನು ಕಡೆಗಣನೆ ಮಾಡಿದ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಯಾರಿಗೆ ಮಾನವೀಯತೆ ಇದೆಯೋ ಅವರು ಅಧಿಕಾರದಲ್ಲಿ ಇರಲಿ ಬಿಡಲಿ. ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುವ ಅಗತ್ಯ ಇದೆ. ಎಲ್ಲರೂ ಸಾಮಾಜಿಕ ಕಾರ್ಯಕರ್ತರು ಅಂತ ಹೇಳಿಕೊಳ್ತಾರೋ, ರಾಜಕಾರಣಿಗಳು ಅಂತ ಹೇಳಿಕೊಳ್ತಾರೋ ಅವರು ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡೋದು ಕರ್ತವ್ಯ. ಹೀಗಾಗಿ ಎಲ್ಲರೂ ಜನರ ಕಷ್ಟಗಳಿಗೆ ಸ್ಪಂದಿಸುವ ಅಗತ್ಯ ಇದೆ ಎಂದಿದ್ದಾರೆ.
Conclusion:NEWS
ETV Bharat Logo

Copyright © 2025 Ushodaya Enterprises Pvt. Ltd., All Rights Reserved.