ETV Bharat / state

ಬೆಂಗಳೂರು ಗಲಭೆ ಪ್ರಕರಣ: ಗಲಭೆಯಲ್ಲಿ 21ಕ್ಕೂ ಹೆಚ್ಚು ಬಾಲಪರಾಧಿಗಳು ಭಾಗಿ - Bangalore More than 21 juveniles News

ಘಟನೆ ನಡೆದಾಗ ಬಹುತೇಕ ಮಕ್ಕಳು ಕಲ್ಲು ತೂರಾಟದಲ್ಲಿ ಭಾಗಿಯಾಗಿರುವ ವಿಚಾರ ಬಯಲಾಗಿದ್ದು, ಸುಮಾರು 21ಕ್ಕೂ ಹೆಚ್ಚು ಮಕ್ಕಳನ್ನ ಬಂಧಿಸಿದ್ದಾರೆ.

ಬೆಂಗಳೂರು ಗಲಭೆ ಪ್ರಕರಣ
ಬೆಂಗಳೂರು ಗಲಭೆ ಪ್ರಕರಣ
author img

By

Published : Aug 25, 2020, 9:44 AM IST

ಬೆಂಗಳೂರು : ಡಿ.ಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಸದ್ಯ ಹಲವಾರು ಮಂದಿಯನ್ನ ಸಿಸಿಬಿ ಹಾಗೂ ಡಿ.ಜೆ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ, ಸಿಸಿಟಿವಿ ವೀಕ್ಷಣೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಆದರೆ, ಘಟನೆ ನಡೆದಾಗ ಬಹುತೇಕ ಮಕ್ಕಳು ಕಲ್ಲು ತೂರಾಟದಲ್ಲಿ ಭಾಗಿಯಾಗಿರುವ ವಿಚಾರ ಬಯಲಾಗಿದ್ದು, ಸುಮಾರು 21ಕ್ಕೂ ಹೆಚ್ಚು ಮಕ್ಕಳನ್ನ ಬಂಧಿಸಿದ್ದಾರೆ.

ಸದ್ಯ ಪ್ರಕರಣದಲ್ಲಿ ಸುಮಾರು 350ಕ್ಕೂ ಹೆಚ್ಚು ಆರೋಪಿಗಳ ಬಂಧನವಾದ ಕಾರಣ, ಈ ಗಲಭೆ ನಡೆಯಲು ಕಾರಣವೇನು ಅನ್ನೋ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಹಾಗೆ ಘಟನೆಯ ಪ್ರಮುಖ ಆರೋಪಿಗಳ‌ ಕಡೆಗೆ ಸಿಸಿಬಿ‌ ಪೋಕಸ್ ‌ಮಾಡಿದೆ. ಹೀಗಾಗಿ ಸದ್ಯ ಕಲ್ಲು ಎಸೆದು, ಬೆಂಕಿ ಹಚ್ಚಿ ಪೊಲೀಸರ ವಿರುದ್ಧ ತಿರುಗಿ ಬಿದ್ದ ಸುಮಾರು 21 ಮಕ್ಕಳನ್ನ 169 ಅಡಿ ಸೆಕ್ಷನ್ ಹಾಕಿ ಬಿಟ್ಟು ಕಳುಹಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ವಿಚಾರಣೆ ನಡೆಸಲು ತನಿಖಾಧಿಕಾರಿಗಳಿಗೆ ಸಾಧ್ಯವಿಲ್ಲ.

ಬಾಲ ಅಪರಾಧಿಗಳ ಮೇಲೆ ಸಿಸಿಬಿ ಕಣ್ಣು : ಸದ್ಯ ಬಾಲ ಅಪರಾಧಿಗಳ ತನಿಖೆ ನಡೆಸಲು ಸಿಸಿಬಿ ಮುಂದಾಗಿಲ್ಲ. ಆದರೂ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣುತ್ತಿದ್ದ ಹಾಗೆ 169 ಅಡಿಯಲ್ಲಿ ಬಾಲಪರಾಧಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ತದ ನಂತರ ವಿಚಾರಣೆ ನಡೆಸಿ ಬಾಲ ಮಂದಿರಕ್ಕೆ ಕಳುಹಿಸಲಿದ್ದಾರೆ. ಬಾಲಪರಾಧಿಗಳು ಘಟನೆಯಲ್ಲಿ ಗಲಭೆ ಸೃಷ್ಟಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವುದೇ ಶಿಕ್ಷೆ ನೀಡದೆ ಹಾಗೆ ಬಿಟ್ಟರೆ ಮುಂದೆ ಸಮಾಜಘಾತುಕ ಕೆಲಸ ಮಾಡುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.