ಬೆಂಗಳೂರು: ದಿನೇ ದಿನೇ ಹೆಚ್ಚಾಗುತ್ತಿರುವ ಇಂದಿನ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕವಾಗುತ್ತಿರುವ ಹರಡುತ್ತಿರುವ ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿಂಗಾಪುರದ ಮೂಲದ ಸೈಫರ್ಮಾ ಕಂಪನಿಯೂ ಟೆಕ್ ಮಾರ್ಕ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸೈಬರ್ ಸೆಕ್ಯೂರಿಟಿ ಕುರಿತಂತೆ ಎರಡು ಕಂಪನಿಗಳು ಪರಸ್ಪರ ಒಪ್ಪಂದ ಮಾಡಿಕೊಂಡವು. ಇಂದಿನ ಹೈಟೆಕ್ ಯುಗದಲ್ಲಿ ಆನ್ ಲೈನ್ನಲ್ಲೇ ಹಣಕಾಸಿನ ವ್ಯವಹಾರ ಅಧಿಕಗೊಂಡಂತೆ ಸೈಬರ್ ಖದೀಮರು ತಮ್ಮ ಕೈಚಳಕ ತೋರುತ್ತಿದ್ದಾರೆ. ಕೋವಿಡ್ ನಂತರ ಕಾಲದಲ್ಲಿ ಆನ್ ಲೈನ್ ಖದೀಮರು ವಂಚಿಸುವವರ ಸಂಖ್ಯೆ ಅಧಿಕವಾಗಿದೆ. ಅಧ್ಯಯನವೊಂದರ ಪ್ರಕಾರ ಕೋವಿಡ್ ಬಳಿಕ ದೇಶದಲ್ಲಿ ಶೇ.170 ರಷ್ಟು ಸೈಬರ್ ಅಪರಾಧಗಳು ಹೆಚ್ಚಾಗಿವೆ.
2022ರ ಮೊದಲ ಆರು ತಿಂಗಳಲ್ಲಿ 70 ಸಾವಿರ ಕೇಸ್ ಗಳು ದಾಖಲಾಗಿದ್ದು 2025ರ ವೇಳೆಗೆ ಸೈಬರ್ ಅಪರಾಧ ತಡೆಯುವುದರ ಬಗ್ಗೆ ಯೋಚಿಸಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಸೈಫರ್ಮಾ ಹಾಗೂ ಟೆಕ್‌ಮಾರ್ಕ್ ಕಂಪನಿಯೂ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್ ಭದ್ರತೆಗಳನ್ನು ಕಾಪಾಡಲು ಸಹಕಾರಿಯಾಗಲಿದೆ.
ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸೈಫರ್ಮಾ ಕಂಪನಿಯ ಗ್ಲೋಬಲ್ ಹೆಡ್ ಅಮಿತ್ ಠಾಕೂರ್ 'ಸೈಬರ್ ಭದ್ರತೆ ಹಾಗೂ ಸುರಕ್ಷತೆ ಕುರಿತಂತೆ ಕಾರ್ಯನಿರ್ವಹಿಸುವ ಕಂಪನಿ ಇದಾಗಿದ್ದು, ಪ್ರಧಾನ ಕಚೇರಿ ಸಿಂಗಾಪುರದಲ್ಲಿದೆ. ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಫಿಲಿಫೆನ್ಸ್ ನ ಸೈಬರ್ ಇಂಟಿಲಿಜೆನ್ಸ್ ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಭಾರತದಲ್ಲಿ ಸೈಬರ್ ಸೆಕ್ಯೂರಿಟಿ ಬಗ್ಗೆ ಕಾರ್ಯನಿರ್ವಹಿಸಲು ಮುಂದಾಗಿದ್ದು ಈ ಸಂಬಂಧ ಆಂಧ್ರಪ್ರದೇಶ, ಒಡಿಶಾ ಹಾಗೂ ಗುಜರಾತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈಗ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಲು ಸನ್ನದ್ದವಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಆದಾಗಲೇ ನಗರದಲ್ಲಿ ಕಂಪೆನಿಯು ಕಾರ್ಯ ನಿರ್ವಹಿಸುತ್ತಿದ್ದು 150 ಮಂದಿಗಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಟೆಕ್ ಮಾರ್ಕ್ ಕಂಪೆನಿಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಾತನಾಡಿ ' ಸೈಫರ್ಮಾ ಕಂಪೆನಿಯೊಂದಿಗೆ ಸೈಬರ್ ಭದ್ರತೆ ವಿಚಾರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್ ದಾಳಿಯನ್ನು ರಕ್ಷಣೆ ಮಾಡಲಿದೆ ಭರವಸೆ ವ್ಯಕ್ತಪಡಿಸಿದರು.
ಬೆಂಗಳೂರಿನ ಸೈಬರ್ ಪ್ರಕರಣಗಳು: ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ನಗರದ 9 ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಒಟ್ಟು 8951 ಪ್ರಕರಣಗಳು ದಾಖಲಾಗಿವೆ. ಇನ್ನು 2021ರಲ್ಲಿ 6,423 ಹಾಗೂ 2020 ರಲ್ಲಿ 8,892 ಕೇಸ್ಗಳು ದಾಖಲಾಗಿದ್ದವು. ನಾವು ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿ ನೋಡಿದಾಗ ತುಂಬಾ ವ್ಯತ್ಯಾಸವಿರುವುದನ್ನು ಗಮನಿಸಬಹುದು. ಈ ಕ್ರೈಂಗಳು ಹೋದ ಹಾಗೆ ಹೆಚ್ಚಾಗುತ್ತಲೇ ಇವೆ. ಬೆಂಗಳೂರಿನ ಪೊಲೀಸರು ಈ ಸಂಬಂಧ ತನಿಖೆ ನಡೆಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಲೇ ಇದ್ದವು. ಇನ್ನು, ಕಳೆದ ವರ್ಷ ದಾಖಲೆಯಾದ ಪ್ರಕರಣದಲ್ಲಿ ಕೇವಲ ಶೇ.10 ಮಾತ್ರ ಭೇದಿಸಲಾಗಿದೆ.
ವಿವಿಧ ರೀತಿಯಲ್ಲಿ ವಂಚಿಸುವ ವಂಚಕರು: ಹೈಟೆಕ್ ಸೈಬರ್ ಖದೀಮರಂತೂ ಬೇರೆ ಬೇರೆ ರೀತಿಯಲ್ಲೆಲ್ಲಾ ಜನರನ್ನು ವಂಚಿಸುತ್ತಿದ್ದು, ಡೆಬಿಟ್ ಕಾರ್ಡ್ ಅಪ್ಡೇಟ್, ಆನ್ಲೈನ್ ಮನಿ ಟ್ರಾನ್ಸ್ಫರ್, ಬ್ಯುಸಿನೆಸ್ ಗೆ ಸಂಬಂಧಿಸಿದಂತೆ ಅತಿ ಹೆಚ್ಚಾಗಿ ಜನರು ಮೋಸ ಹೋಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಇವುಗಳದ್ದೇ ಕೇಸ್ ಹೆಚ್ಚಾಗಿವೆ. ಅದೇನೆ ಇರಲಿ, ಈಗ ಎರಡು ಕಂಪನಿಗಳ ಒಡಂಬಡಿಕೆಯಿಂದಾಗಿ ಈ ಕ್ರೈಂ ಗಳು ಕಡಿಮೆಯಾದರೆ ಸಾಕು.
ಇದನ್ನೂ ಓದಿ: ಮುಂದುವರಿದ ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಪ್ರತಿಭಟನೆ.. ಸರ್ಕಾರದ ವಿರುದ್ಧ ಆಕ್ರೋಶ