ಬೆಂಗಳೂರು: ನಗರದ ಟ್ರಾಫಿಕ್ ಜಂಜಾಟದಿಂದ ಬೇಸತ್ತವರಿಗೆ ಪರಿಸರ ಸ್ನೇಹಿಯಾಗಿ ಸೈಕಲ್ ಓಡಿಸಲು ಪ್ರತ್ಯೇಕವಾಗಿ ಸೈಕಲ್ ಪಥ ನಿರ್ಮಾಣ ಮಾಡಲಾಗ್ತಿದೆ.
ನಗರದ ರೇಸ್ಕೋರ್ಸ್ ರಸ್ತೆಯಲ್ಲಿ ಹಸಿರು ಪಟ್ಟಿಯ ಸೈಕಲ್ ಪಥವನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ಮಾರ್ಟ್ ಸಿಟಿ ಅಭಿಯಾನದ ಭಾಗವಾಗಿ ನಗರದ ಆಯ್ದ ಪ್ರದೇಶಗಳಲ್ಲಿ 30 ಕಿ.ಮೀ. ಸೈಕಲ್ ಟ್ರ್ಯಾಕ್ ಮಾಡಲಾಗ್ತಿದೆ. ಇದೀಗ ರೇಸ್ ಕೋರ್ಸ್ನಲ್ಲಿ ಸೈಕಲ್ ಪಥ ಮಾಡಲಾಗಿದೆ.
ನವೆಂಬರ್ ಒಳಗೆ 5 ಕಿ.ಮೀ. ಪಥ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು. ಆದ್ರೆ ತಡವಾಗಿ ಅನುಷ್ಠಾನಗೊಂಡಿದೆ. ಮಾರ್ಚ್ನಲ್ಲಿ 30 ಕಿ.ಮೀ. ಸೈಕಲ್ ಪಥ ನಿರ್ಮಿಸುವ ಟಾರ್ಗೆಟ್ ಇದೆ. ಆದರೆ ಇದೀಗ ಅದು ಜೂನ್ ತಿಂಗಳಿಗೆ ಮುಂದೂಡಲ್ಪಟ್ಟಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಮರ್ಶಿಯಲ್ ಸ್ಟ್ರೀಟ್, ರಾಜಭವನ ರಸ್ತೆ, ತಿಮ್ಮಯ್ಯ ರಸ್ತೆ, ಇನ್ಫ್ಯಾಂಟ್ರಿ ರಸ್ತೆ, ಕ್ವೀನ್ಸ್ ರಸ್ತೆ ಸೇರಿದಂತೆ ಒಟ್ಟು 36 ರಸ್ತೆಗಳಲ್ಲಿ ರಸ್ತೆಯ ಎರಡೂ ಬದಿಗೆ ಸೈಕಲ್ ಟ್ರ್ಯಾಕ್ ಮಾರ್ಕಿಂಗ್ ಮಾಡಲಿದ್ದಾರೆ.
ಒಟ್ಟು 930 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಅಡಿಯಲ್ಲೇ ಸೈಕಲ್ ಪಥವೂ ಬರಲಿದೆ. ರೇಸ್ ಕೋರ್ಸ್ ರಸ್ತೆ, ರಾಜಭವನ ರಸ್ತೆ, ರಸ್ತೆಯಲ್ಲಿ ಈಗಾಗಲೇ ಸೈಕಲ್ ಪಥ ಮಾಡಲಾಗಿದ್ದು, ಜನವರಿ ಅಂತ್ಯದಲ್ಲಿ ಪ್ಲಾನೆಟೋರಿಯಂ ಹಾಗೂ ರಾಜಾರಾಮ್ ಮೋಹನ್ರಾಯ್ ರಸ್ತೆಯಲ್ಲೂ ಸೈಕಲ್ ಪಥ ಬರಲಿದೆ. ನಾಳೆ ಸಿಎಂ ಯಡಿಯೂರಪ್ಪ ಕೂಡ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ರು.
ಇದನ್ನೂ ಓದಿ:ಬಜೆಟ್ನಲ್ಲಿ ಆರೋಗ್ಯ ವೆಚ್ಚ ಜಿಡಿಪಿಯ ಶೇ.3ಕ್ಕೆ ಹೆಚ್ಚಿಸುವಂತೆ ಮುಖ್ಯ ಆರ್ಥಿಕ ಸಲಹೆಗಾರ ಶಿಫಾರಸು