ETV Bharat / state

ಸೈಬರ್ ಖದೀಮರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಕಳವು: ಡಾಲರ್​ಗಟ್ಟಲೆ ಹಣಕ್ಕೆ ಬೇಡಿಕೆ

ಕಂಪೆನಿಯೊಂದರ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸೈಬರ್ ಖದೀಮರು ಕಳವು ಮಾಡಿ ಹಣ ನೀಡುವಂತೆ ಬ್ಲಾಕ್ ಮೇಲ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯ ವಿರುದ್ಧ ಉದ್ಯಮಿ ಪ್ರವೀಣ್ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿ ಬೀನು ಅರೋರಾ ಎಂಬಾತನ ವಿರುದ್ಧ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

cyber-launderers-steal-consumer-personal-information-and-demands-money-dot-dot-dot
ಸೈಬರ್ ಖದೀಮರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಕಳವು: ಡಾಲರ್​ಗಟ್ಟಲೇ ಹಣಕ್ಕೆ ಬೇಡಿಕೆ...
author img

By

Published : Nov 9, 2020, 9:43 PM IST

ಬೆಂಗಳೂರು: ಆಹಾರ ಮತ್ತು ದಿನಸಿ ಸಾಮಗ್ರಿ ಸರಬರಾಜು ಮಾಡುವ ಕಂಪೆನಿಯೊಂದರ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸೈಬರ್ ಖದೀಮರು ಕಳವು ಮಾಡಿ ಹಣ ನೀಡುವಂತೆ ಬ್ಲಾಕ್ ಮೇಲ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಇನ್ನೋವೇಟಿವ್ ರಿಟೇಲ್ ಕಾನ್‌ಸೆಪ್ಟ್ ಕಂಪೆನಿ ಮಾಲೀಕರಾದ ಉದ್ಯಮಿ ಪ್ರವೀಣ್ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿ ಬೀನು ಅರೋರಾ ಎಂಬಾತನ ವಿರುದ್ಧ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪೆನಿಯು ಆನ್‌ಲೈನ್ ಮುಖಾಂತರ ಆಹಾರ ಮತ್ತು ದಿನಸಿ ಸಾಮಗ್ರಿ ಸರಬರಾಜು ಮಾಡಲು ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿತ್ತು. ಇದನ್ನು ಅನಧಿಕೃತವಾಗಿ ಪಡೆದುಕೊಂಡು ಡಾರ್ಕ್‌ನೆಟ್ ವೆಬ್‌ನಲ್ಲಿ ಪ್ರಕಟಿಸಿರುವುದಾಗಿ ಬೀನು ಅರೋರಾ ಇ-ಮೇಲ್ ಕಳುಹಿಸಿದ್ದಾನೆ. ಅಲ್ಲದೆ, ತಾನು ಸೈಬಲಾ ಕಂಪೆನಿಯ ಸಿಇಒ ಎಂದು ಹೇಳಿಕೊಂಡಿದ್ದಾನೆ. ಡಾರ್ಕ್‌ನೆಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯನ್ನು ತೆಗೆಯಲು 70 ಸಾವಿರ ಡಾಲರ್ ಹಣ ನೀಡಬೇಕು ಎಂದು ಡಿಮ್ಯಾಂಡ್​ ಮಾಡಿದ್ದಾನೆ. ಆನಂತರ ಈ ರೀತಿ ಮುಂದಿನ 2 ವರ್ಷಗಳವರೆಗೆ ಆಗದಂತೆ ಸುರಕ್ಷತಾ ಕ್ರಮ ಕೈಗೊಳ್ಳಲು ಹೆಚ್ಚುವರಿಯಾಗಿ 1 ಲಕ್ಷ ಡಾಲರ್ ಹಣವನ್ನು, ಬಿಟ್‌ಕಾಯಿನ್ ರೂಪದಲ್ಲಿ ಸಂದಾಯ ಮಾಡುವಂತೆ ವ್ಯಾಟ್ಸಾಪ್ ಮತ್ತು ಗೂಗಲ್‌ಮೀಟ್ ಮುಖಾಂತರ ಬೇಡಿಕೆ ಇಟ್ಟಿದ್ದಾನೆ. ಸರ್ವರ್ ಪರಿಶೀಲನೆ ವೇಳೆ ಪಾಸ್‌ವರ್ಡ್ ಬಳಸಿ ಅ.13 ರಂದು ಕಂಪೆನಿಯ ಗ್ರಾಹಕರ ಮಾಹಿತಿಯನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.