ETV Bharat / state

ಸಚಿವರ ಹೆಸರಿನಲ್ಲಿ ಬಿಎಂಟಿಸಿಗೆ ಸೈಬರ್​​ ವಂಚಕರ ಕನ್ನ - ಮಹಾನಗರ ಸಾರಿಗೆ ಸಂಸ್ಥೆಗೆ ಸೈಬರ್ ಕಾಟ

ಸಚಿವರ ಹೆಸರಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Cyber fraud attempt  Bengaluru Metropolitan Transport  BMTC  ಮಹಾನಗರ ಸಾರಿಗೆ ಸಂಸ್ಥೆಗೆ ಸೈಬರ್ ಕಾಟ  ಪೊಲೀಸ್​ ಠಾಣೆಯಲ್ಲಿ ಪ್ರಕರಣ
, ಸುಮಾರು 10 ಲಕ್ಷ ನೀಡುವಂತೆ ಸಂದೇಶ
author img

By ETV Bharat Karnataka Team

Published : Jan 15, 2024, 1:33 PM IST

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೆಸರಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಸೈಬರ್ ವಂಚಕರು ಕನ್ನ ಹಾಕಿರುವ ಘಟನೆ ನಡೆದಿದೆ. ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ನೀಡಿರುವ ದೂರಿನನ್ವಯ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನವರಿ 13ರ ಸಂಜೆ ಸಚಿವರ ಹೆಸರಿನಲ್ಲಿ ಬಿಎಂಟಿಸಿಯ ಆರ್ಥಿಕ ವಿಭಾಗದ ಅಧಿಕೃತ ಇ-ಮೇಲ್ ಐಡಿಗೆ ಸಂದೇಶ ರವಾನಿಸಿರುವ ವಂಚಕರು, ತುರ್ತಾಗಿ 9.7 ಲಕ್ಷ ರೂ ಆರ್.ಟಿ.ಜಿ.ಎಸ್ ಮಾಡುವಂತೆ ಸೂಚಿಸಿದ್ದಾರೆ. ತಕ್ಷಣ ಸಚಿವರಿಗೆ ಕರೆ ಮಾಡಿದ್ದಾರೆ. ಬಳಿಕ ಯಾವುದೇ ಹಣ ಕುರಿತು ಇ-ಮೇಲ್​ ಮಾಡಿಲ್ಲ ಎಂದು ಖಚಿತಪಡಿಸಿಕೊಂಡಿರುವ ಲೆಕ್ಕಾಧಿಕಾರಿ ಅಬ್ದುಲ್ ಖುದ್ದುಸ್.ಬಿ, ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಸಾರಿಗೆ ನಿಗಮಗಳ ಶಕ್ತಿಗೆ 5500 ಬಸ್ ಖರೀದಿ: 100 ಇವಿ ಬಸ್​ಗಳ ಸಂಚಾರಕ್ಕೆ ಡಿ. 26 ರಂದು ಗ್ರೀನ್ ಸಿಗ್ನಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.