ETV Bharat / state

ನಾಯಿ ಮರಿ ನೀಡುವುದಾಗಿ ಹಣ ಪೀಕಿದರು... ವಾರದ ನಂತರ ಕಾಲ್​ ಮಾಡಿದಾಗ ಕಾದಿತ್ತು ಶಾಕ್​!

author img

By

Published : Jul 28, 2020, 7:42 PM IST

ಸೈಬರ್​ ಖದೀಮರ ಹಾವಳಿ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತೊಂದು ಸೈಬರ್​ ವಂಚನೆಯ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ನಾಯಿ ಕೊಡುತ್ತೇವೆಂದು ಹಣ ಪಡೆದವರು ವ್ಯಕ್ತಿಯೊಬ್ಬರಿಗೆ ಪಂಗನಾಮ ಹಾಕಿದ್ದಾರೆ.

ನಾಯಿ ನೀಡುತ್ತೇವೆಂದು ಪಂಗನಾಮ ಹಾಕಿದ ಸೈಬರ್​ ಖದೀಮರು

ಬೆಂಗಳೂರು: ಸದ್ಯ ಸೈಬರ್ ಖದೀಮರ ಹಾವಳಿ ಹೆಚ್ಚಾಗಿದ್ದು, ವಿವಿಧ ರೀತಿಯಲ್ಲಿ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಫೇಸ್​ಬುಕ್​ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ಒಳ್ಳೆಯ ತಳಿಯ ನಾಯಿ ಮಾರಾಟ ಮಾಡಲಾಗುವುದು ಎಂದು ಪೋಸ್ಟ್ ಹಾಕಿದ್ದರು. ನಗರದ ನಿಖಿಲ್ ಕುಮಾರ್ ಎಂಬುವರು ಪೋಸ್ಟ್ ನೋಡುತ್ತಿದ್ದಂತೆ ಸೈಬರ್ ಖದೀಮರಿಗೆ ಮೆಸ್ಸೇಜ್ ಮಾಡಿ ಈ ಶ್ವಾನದ ಬಗ್ಗೆ ವಿಚಾರಿಸಿದ್ದಾರೆ.

ನಾಯಿಯನ್ನು ಖರೀದಿಸಲು ಮುಂದಾದ ನಿಖಿಲ್, ವಂಚಕರ ಬಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೈಬರ್ ಖದೀಮರು ನಾವು ಅನ್ಯ ರಾಜ್ಯದವರು, ನಿಮಗೆ ಶ್ವಾನ ನೀಡುತ್ತೇವೆ. ನಮ್ಮ ಬಳಿ ಗೋಲ್ಡನ್ ರಿಟ್ರೀವರ್ ನಾಯಿ ಇದೆ ಎಂದಿದ್ದಾರೆ. ಅನ್ಯ ರಾಜ್ಯ ಎಂದು ಹೇಳಿದ ಕಾರಣ ನಿಖಿಲ್ ಆಧಾರ್ ಕಾರ್ಡ್ ಕಳುಹಿಸಲು ಹೇಳಿದ್ದಾರೆ. ಅದನ್ನೂ ಫೇಕ್ ಮಾಡಿದ್ದ ಕಳ್ಳರು, ನಕಲಿ ದಾಖಲೆಯನ್ನು ಕಳುಹಿಸಿದ್ದಾರೆ.

ಇದನ್ನ ನಂಬಿ ನಿಖಿಲ್ ನಾಯಿ ಖರೀದಿಗೆ ಮುಂದಾಗಿದ್ದಾರೆ. ಹಾಗೆ ಆರೋಪಿಗಳು ಕಳುಹಿಸಿದ್ದ ಅಕೌಂಟ್​ ನಂಬರ್​ಗೆ ಮೊದಲು 20 ಸಾವಿರ ರೂಪಾಯಿ ಹಾಕಿದ್ದಾರೆ. ಅದಾದ ಬಳಿಕ ಅನ್ಯ ರಾಜ್ಯದಿಂದ ಕಳುಹಿಸಲು 11 ಸಾವಿರ ಆಗುತ್ತೆ ಎಂದಿದ್ದಾರೆ. ಅದಕ್ಕೂ ಸೈ ಎಂದು ಹಣ ನೀಡಿದ್ದಾರೆ.

ಆದರೆ ನಿಖಿಲ್​ಗೆ ಒಂದು ವಾರ ಕಳೆದರೂ ಸಹ ನಾಯಿ ಮರಿ ತಲುಪಿರಲಿಲ್ಲ. ಹೀಗಾಗಿ ಮತ್ತೆ ಕಾಲ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದೆ. ಯಾರೋ ಮೋಸ ಮಾಡಿದ್ದಾರೆ ಎಂದು ತಿಳಿದು ನಿಖಿಲ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.