ಬೆಂಗಳೂರು: ಲಾಕ್‌ಡೌನ್ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಸೈಬರ್ ಖದೀಮರು ಐಟಿ ಹಾಗೂ ತೆರಿಗೆ ಇಲಾಖೆಗಳ ಹೆಸರಿನಲ್ಲಿ ನಕಲಿ ಲಿಂಕ್‌ಗಳನ್ನು ಸೃಷ್ಟಿಸಿ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಸಂಚು ರೂಪಿಸಿದ್ದಾರೆ.
ದೇಶದಲ್ಲಿ ಕೊರೊನಾ ಹಿನ್ನೆಲೆ ಐಟಿ ಇಲಾಖೆಗೆ ತೆರಿಗೆ ಪಾವತಿಸಿರುವ ಜನರಿಗೆ, ಆ ಹಣವನ್ನು ವಾಪಸ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆನ್‌ಲೈನ್ ಅರ್ಜಿ ಭರ್ತಿ ಮಾಡುವಂತೆ ಸೂಚಿಸಿ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಯಿಂದ ಹಣ ದೋಚಲು ಸಂಚು ರೂಪಿಸಿದ್ದಾರೆ ಖದೀಮರು. ಹೀಗಾಗಿ ತೆರಿಗೆ ವಾಪಸ್ ನೀಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಎಚ್ಚರಿಸಿದೆ.
ಸಂದೇಶ ಅಥವಾ ಇಮೇಲ್ ಕಳುಹಿಸಬಹುದು ಎಂದು ಹೇಳಿ ಜನರ ಹಣ ದೋಚಲು ಲಿಂಕ್ ಸೃಷ್ಟಿಸಿಕೊಂಡಿದ್ದಾರೆ. ಮೊಬೈಲ್‌ಗೆ ಸಂದೇಶ ಅಥವಾ ಇಮೇಲ್ ಮೂಲಕ ಲಿಂಕ್ ಕಳುಹಿಸುತ್ತಿದ್ದಾರೆ. ಲಿಂಕ್‌ನಲ್ಲಿ ಹೆಸರು, ಪ್ಯಾನ್ ನಂಬರ್, ಬ್ಯಾಂಕ್ ವಿವರ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಂಬರ್, ಎಟಿಎಂ ಪಿನ್ ಸೇರಿ ಮುಂತಾದ ಮಾಹಿತಿಯನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ಇದಾದ ಕೆಲ ಹೊತ್ತಿನಲ್ಲೆ ಖಾತೆಯಿಂದ ಹಣ ವರ್ಗಾವಣೆಯಾಗಲಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್‌ನ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಐಟಿ ಇಲಾಖೆ ಎಚ್ಚರಿಕೆ ನೀಡಿದೆ.