ETV Bharat / state

ಬೆಂಗಳೂರಲ್ಲಿ ಹೆಚ್ಚಾಯ್ತು ಸೈಬರ್​ ಸ್ಕ್ಯಾಮ್ ಹಾವಳಿ: ಅದರ ಡಿಟೇಲ್ಸ್​ ಹೀಗಿದೆ ನೋಡಿ... - Cyber crime cases,

ಬೆಂಗಳೂರು ನಗರದಲ್ಲಿ ಸೈಬರ್ ಕಳ್ಳರ ಹಾವಳಿ‌ ದಿನೇ ದಿನೇ ಹೆಚ್ಚಾಗ್ತಿದೆ. ಸೈಬರ್ ಪೊಲೀಸರು ತನಿಖೆಗಿಳಿದು ಆರೋಪಿಗಳ ಹೆಡೆಮುರಿ ಕಟ್ಟುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ ಯಾವೆಲ್ಲಾ‌ ಪ್ರಕರಣ ಹೆಚ್ಚಾಗಿ ತಾಂಡವಾಡ್ತಿದೆ ಅನ್ನೋದ್ರ ವಿವರ​ ಇಲ್ಲಿದೆ ನೋಡಿ...

Cyber crime, Cyber crime cases, Cyber crime cases in Bangalore, ಸೈಬರ್​ ಪ್ರಕರಣಗಳು, ಬೆಂಗಳೂರಿನಲ್ಲಿ ಸೈಬರ್​ ಕ್ರೈಂ ಪ್ರಕರಣಗಳು, ಬೆಂಗಳೂರು ಸೈಬರ್​ ಕ್ರೈಂ ಪ್ರಕರಣಗಳ ಸುದ್ದಿ,
ನಗರದಲ್ಲಿ ಹೆಚ್ಚಾಯ್ತು ಸೈಬರ್​ ಸ್ಕ್ಯಾಮ್ ಹಾವಳಿ
author img

By

Published : Mar 10, 2020, 6:22 PM IST

Updated : Mar 10, 2020, 6:50 PM IST

  • ಒಎಲ್ಎಕ್ಸ್ ಅಥವಾ ಕ್ವಿಕ್ಕರ್ ಸ್ಕ್ಯಾಮ್:

ಆನ್ಲೈನ್ ವಂಚನೆ ಪ್ರಾರಂಭವಾದಾಗಿನಿಂದ ಈ ಒಎಲ್ಎಕ್ಸ್ ಹಾಗೂ ಕ್ವಿಕ್ಕರ್ ಬಳಸಿಕೊಂಡು ಆನ್ಲೈನ್ ಗ್ರಾಹಕರನ್ನು ಟಾರ್ಗೆಟ್ ಮಾಡೋದಷ್ಟೇ ಅಲ್ಲ, ಮಾರಾಟಗಾರರನ್ನೂ ವಂಚಿಸಲು ದುಷ್ಕರ್ಮಿಗಳು ಮುಂದಾಗಿದ್ದಾರೆ. OLX​ನಲ್ಲಿ ಸೆಕೆಂಡ್ ಹ್ಯಾಂಡ್ ವಾಹನದ ಜಾಹೀರಾತುಗಳನ್ನು ಹಾಕಿ ಯಾರ ಬಳಿ ರೆಡಿ ಕ್ಯಾಶ್ ಇದೆ ಎಂದು ತಿಳಿದುಕೊಂಡು ಸುಲಭವಾಗಿ ವಂಚನೆ ಮಾಡ್ತಾರೆ. ಅಲ್ಲದೆ, ವೆಹಿಕಲ್ ಟೆಸ್ಟ್ ಮಾಡಬೇಕು ಎಂದಾಗ ನೀವು ಮುಂಚಿತವಾಗಿ ಅಡ್ವಾನ್ಸ್ ಪೇ ಮಾಡಿ ಒಂದಷ್ಟು ಪ್ರೊಸಿಜರ್ಸ್​ಗಳಿವೆ ಎಂದು ನಂಬಿಸಿ ಅಕೌಂಟ್​ಗೆ ಹಣ ಹಾಕಿಸಿಕೊಂಡು ವೆಹಿಕಲ್ ಕೊಡದೇ ಎಸ್ಕೇಪ್ ಆಗ್ತಾರೆ. ಹೀಗೆ ಮೊಹಮ್ಮದ್ ಅಜರ್ ಎಂಬ ವ್ಯಕ್ತಿ ಒಲ್ಎಕ್ಸ್​ನಲ್ಲಿ ಸೆಕೆಂಡ್ ಹ್ಯಾಂಡ್ ವೆಹಿಕಲ್ ತೆಗೆದುಕೊಳ್ಳಲು ಹೋಗಿ 58 ಸಾವಿರ ರೂ ಕಳೆದುಕೊಂಡಿದ್ದಾರೆ. ಕ್ವಿಕ್ಕರ್​ನಲ್ಲೂ ಟೆಕಿಯೊಬ್ಬ ಮಹೀಂದ್ರ XUV ಪರ್ಚೇಸ್ ಮಾಡಲು ಹೋಗಿ 6 ಲಕ್ಷ ಹಣ ಕಳೆದುಕೊಂಡಿರುವ ದೂರು ದಾಖಲಾಗಿದೆ. ಇನ್ನು, 2018 ರಲ್ಲಿ 945 ಪ್ರಕರಣಗಳು ದಾಖಲಾಗಿದ್ರೆ 2019 ರಲ್ಲಿ 2099 ಪ್ರಕರಣ ದಾಖಲಾಗಿದೆ.

  • ಎಟಿಎಂ ಕಾರ್ಡ್ ಫ್ರಾಡ್:

ಇತ್ತೀಚೆಗೆ ಆನ್​ಲೈನ್​ ಸ್ಕ್ಯಾಮ್​ನಲ್ಲಿ ಅತಿ ಹೆಚ್ಚು ಕೇಳಿಬರ್ತಿರೋದು ಈ ಎಟಿಎಂ ಕಾರ್ಡ್ ಫ್ರಾಡ್. ನಿಮಗೆ ಗೊತ್ತಿಲ್ಲದಂತೆ ಎಟಿಎಂ ಯೂಸ್ ಮಾಡಿ ಅದರ ಒಟಿಪಿ ಜನರೇಟ್ ಕೂಡ ಮಾಡಿ ವಂಚನೆ ಮಾಡ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು, ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್​ ಅಪ್ಡೇಟ್ ಮಾಡಿಲ್ಲ ಅಂದ್ರೆ ನಿಮ್ಮ ಕಾರ್ಡ್ ಡೀ ಆ್ಯಕ್ಟಿವೇಟ್ ಆಗುತ್ತೆ ಎಂದು ಸುಳ್ಳು ಹೇಳ್ತಾರೆ. ಹಾಗೆಯೇ ನಿಮ್ಮ ಕಾರ್ಡ್ ಡೀಟೇಲ್ಸ್ ಕೊಟ್ರೆ ನಾವೇ ಅದನ್ನು ಅಪ್ಡೇಟ್ ಮಾಡ್ತೀವಿ ಅಂತಾ ಹೇಳಿ ಕಾರ್ಡ್ ನಂಬರ್ ಅದರ ಎಕ್ಸ್​ಪೈರಿ ಡೇಟ್ ಹಾಗೂ ಸಿವಿವಿ ನಂಬರ್ ಕೇಳ್ತಾರೆ. ಇನ್ನು ನೀವು ನಂಬಿ ಕೊಟ್ಟಾಗ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಬಂದಿದೆ, ಅದನ್ನು ಹೇಳಿ ಎಂದು ತಿಳಿಸಿ ಸುಲಭವಾಗಿ ನಿಮಗೆ ಗೊತ್ತಿಲ್ಲದಂತೆ ವಂಚಿಸಿ ಉಂಡೆ ನಾಮ ತಿಕ್ತಾರೆ. ವರ್ಷದಿಂದ ವರ್ಷಕ್ಕೆ ಎಟಿಎಂ ಕಾರ್ಡ್​ನಲ್ಲಿ ಮೋಸ ಹೋದವರ ಸಂಖ್ಯೆ ಏರುತ್ತಿದ್ದು, 2018 ರಲ್ಲಿ 2446 ಪ್ರಕರಣಗಳು ದಾಖಲಾಗಿದ್ರೆ, 2019 ರಲ್ಲಿ 3,782 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಯಾವುದೇ ಬ್ಯಾಂಕ್ ಸಿಬ್ಬಂದಿಯಾದ್ರು ಸರಿ, ಯಾರೇ ಆದ್ರೂ ಸರಿ ನಿಮ್ಮ ಒಟಿಪಿಯನ್ನ ಶೇರ್ ಮಾಡಬೇಡಿ.

  • ಮ್ಯಾಟ್ರಿಮೋನಿಯಲ್ ಅಥವಾ ವಿದೇಶದಿಂದ ಗಿಫ್ಟ್ ಸ್ಕ್ಯಾಮ್:

ಆನ್ಲೈನ್ ವೆಬ್ಸೈಟ್​ನಲ್ಲಿ ತಮ್ಮ ಸಂಗಾತಿ ಹುಡುಕ ಬಯಸುವ ಯುವತಿಯರು ಮ್ಯಾಟ್ರಿಮೋನಿಯಲ್ ವೆಬ್ಸೈಟ್ಸ್​ ಮೊರೆ ಹೋಗ್ತಾರೆ. ಅಲ್ಲಿ ಯಾವುದಾದರೂ ವಿದೇಶಿ ಪ್ರೊಫೈಲ್ ಹಾಗೂ ಚೆನ್ನಾಗಿರುವ ಫೋಟೋ ಹಾಕಿದ್ರೆ, ಖಂಡಿತ ಯುವತಿಯರು ಬಿದ್ದೇ ಬೀಳ್ತಾರೆ. ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳುವ ವಂಚಕರು ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡಿ ಯುವತಿಯರನ್ನು ನಂಬಿಸಿ ಒಂದಷ್ಟು ಸಲುಗೆ ಬೆಳೆಸಿಕೊಳ್ಳುತ್ತಾರೆ. ಅವರ ಬಗ್ಗೆ ತಿಳಿದುಕೊಂಡು ವಂಚನೆಯ ದಾರಿ ಹಿಡಿಯುತ್ತಾರೆ. ನಿನಗೆ ಗಿಫ್ಟ್ ಕಳುಹಿಸಬೇಕು. ವಿದೇಶದಲ್ಲಿ ಚೆನ್ನಾಗಿರುವ ಗಿಫ್ಟ್ ಸಿಗುತ್ತೆ ಎಂದು ಹೇಳಿ ಯುವತಿಯರನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಗಿಫ್ಟ್ ಫೋಟೋವನ್ನೂ ಕಳಿಸಿ ಅಲ್ಲಿಗೆ ತಲುಪಿಸಬೇಕಾದ್ರೆ ವಿದೇಶದ ಕೆಲವು ಪ್ರೊಸಿಜರ್ಸ್​ಗಳಿವೆ. ಗಿಫ್ಟ್ ತೆಗೆದುಕೊಳ್ಳಬೇಕಾದ್ರೆ ಇಂತಿಷ್ಟು ಹಣ ಕಟ್ಟಬೇಕು ಎಂದು ನಂಬಿಸಿ ಯುವತಿಯಿಂದ ಹಣ ಪೀಕಿ ಮೊಬೈಲ್ ಸ್ವಿಚ್ ಆಫ್ ಮಾಡ್ತಾರೆ. ಹೀಗೆ 33 ವರ್ಷದ ಶ್ರೀಲತಾ ಎಂಬ ಯುವತಿ ವಿದೇಶಿಗನ ಗಾಳಕ್ಕೆ ಬಿದ್ದು, ಆತ ಕೊಡುವ ಗಿಫ್ಟ್ ಕಲೆಕ್ಟ್ ಮಾಡಿಕೊಳ್ಳಲು ಆತನ ಅಕೌಂಟ್​ಗೆ 60 ಸಾವಿರ ಹಣ ಹಾಕಿ ಮೋಸ ಹೋಗಿದ್ದಾಳೆ.

  • ಕ್ಯೂ-ಆರ್ ಕೋಡ್ ಸ್ಕ್ಯಾಮ್:

ಆನ್ಲೈನ್​ನಲ್ಲಿ ನೀವೇನಾದ್ರು ಪರ್ಚೇಸ್ ಮಾಡಬೇಕು ಎಂದು ಮುಂದಾದಾಗ ನೀವು ಸೆಲೆಕ್ಟ್ ಮಾಡುವ ಯಾವುದೇ ಪ್ರಾಡಕ್ಟ್​ನ್ನು ನೋಡದೇ ತೆಗೆದುಕೊಳ್ಳಲು ಮುಂದಾದಗ ಇದನ್ನೇ ಫ್ರಾಡರ್ಸ್​ಗಳೂ ಎನ್​ಕ್ಯಾಶ್ ಮಾಡಿಕೊಳ್ತಾರೆ. ನೀವು ಪ್ರಾಡಕ್ಟ್ ಸೆಲೆಕ್ಟ್ ಮಾಡಿದ ಮೇಲೆ ನೀವು ಸುಲಭವಾಗಿ ಹಣ ಕಳುಹಿಸಬಹುದು ಎಂದು ನಿಮ್ಮ ಮೊಬೈಲ್ ಫೋನ್​ಗೆ ಒಂದು ಕ್ಯೂಆರ್ ಕೋಡ್ ಕಳುಹಿಸುತ್ತಾರೆ. ಅದರ ಮೂಲಕ ನೀವು ಬಿಲ್ ಪೇ ಮಾಡಬಹುದು ಎನ್ನುತ್ತಾರೆ. ನೀವೇನಾದ್ರೂ ಅದನ್ನ ನಂಬಿ ಸ್ಕ್ಯಾನ್ ಮಾಡಿ ಹಣ ಹಾಕಿದ್ರೆ ನಿಮ್ಮ ಕಂಪ್ಲೀಟ್ ಅಕೌಂಟ್ ಡೀಟೇಲ್ಸ್ ಸೈಬರ್ ವಂಚಕರ ಕೈ ಪಾಲಾಗುತ್ತೆ. ಈ ಮೂಲಕ ನಿಮ್ಮ ಅಕೌಂಟ್​ನಲ್ಲಿರುವ ಅಷ್ಟೂ ಹಣವನ್ನ ಕ್ಷಣಾರ್ಧದಲ್ಲಿ ಮಂಗಮಾಯ ಮಾಡ್ತಾರೆ. ಈ QR ಕೋಡ್ ಸ್ಕ್ಯಾನ್ ಮಾಡಿ 63 ವರ್ಷದ ಡಿಫೆನ್ಸ್​ನ ನಿವೃತ್ತ ಆಫೀಸರೊಬ್ಬರು 1 ಲಕ್ಷ ಹಣ ಕಳೆದುಕೊಂಡಿದ್ದಾರೆ. 2018ರಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ 45 ಪ್ರಕರಣ ದಾಖಲಾಗಿದ್ರೆ, 2019 ರಲ್ಲಿ 80 ಪ್ರಕರಣಗಳು ದಾಖಲಾಗಿವೆ.

  • ಅಟೆನ್ಶನ್ ಡೈವರ್ಷನ್ ಸ್ಕ್ಯಾಮ್:

ಮಾರ್ಕೆಟ್, ಬ್ಯಾಂಕ್, ಹೀಗೆ ಜನನಿಬಿಡ ಪ್ರದೇಶದಲ್ಲಿ ಈ ರೀತಿಯ ಸ್ಕ್ಯಾಮ್ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ನಗರದ ಉಪ್ಪಾರಪೇಟೆ, ಅವೆನ್ಯೂ ರೋಡ್, ಕಾಟನ್ಪೇಟೆ, ಮಾರ್ಕೆಟ್, ಈ ಸ್ಥಳಗಳಲ್ಲಿ ಅತಿ ಹೆಚ್ಚು ಅಟೆನ್ಶನ್ ಡೈವರ್ಷನ್ ಸ್ಕ್ಯಾಮ್ ನಡೆಯುತ್ತೆ. ಈ ಆರೋಪಿಗಳು ಜನನಿಬಿಡ ಪ್ರದೇಶದಲ್ಲಿ ಪರ್ಚೇಸಿಂಗ್, ಫೋನ್​ನಲ್ಲಿ ಮಾತನಾಡ್ತಾ ನಿಂತಿದ್ರೆ, ಇದನ್ನ ಎನ್​ಕ್ಯಾಶ್ ಮಾಡಿಕೊಳ್ಳುವ ಫ್ರಾಡರ್ಸ್​ಗಳು ನಿಮ್ಮ ಬಳಿ ಬಂದು, ಹಣ ಬೀಳಿಸಿಕೊಂಡಿದ್ದೀರಾ ಎಂದು ಹೇಳಿ ನಿಮ್ಮನ್ನ ಡೈವರ್ಟ್ ಮಾಡಿ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಪರ್ಸ್ ಹಾಗೂ ಕಾರಿನಲ್ಲಿರುವ ವಸ್ತು ದೋಚಿ ಪರಾರಿಯಾಗ್ತಾರೆ. ಅಲ್ಲದೆ ಬ್ಯಾಂಕ್ ಬಳಿ ಕಾಯುತ್ತಾ ಕುಳಿತುಕೊಳ್ಳುವ ವಂಚಕರು ನಿಮ್ಮ ಗಾಡಿ ಪಂಚರ್ ಆಗಿದೆ ಎಂದು ತಿಳಿಸಿ ಪರ್ಸ್ ಎಗರಿಸಿ ಎಸ್ಕೇಪ್ ಆಗ್ತಾರೆ.

  • ಜಾಬ್ ಫ್ರಾಡ್:

ವರ್ಷ ವರ್ಷಕ್ಕೂ ಜಾಬ್ ಫ್ರಾರ್ಡ್​ಗಳು ಹೆಚ್ಚಾಗುತ್ತಿದ್ದು, ಮತ್ತೆ ಮತ್ತೆ ನಂಬಿ ಮೋಸ ಹೋಗುವ ಜನರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆನ್ಲೈನ್​ನಲ್ಲಿ 100 ಕ್ಕೂ ಹೆಚ್ಚು ಜಾಬ್ ವೆಬ್ಸೈಟ್​ಗಳಿವೆ. ನೀವೇನಾದ್ರೂ ಫ್ರಾಡರ್ಸ್ ವೆಬ್ಸೈಟ್ ಗಳಿಗೆ ಸಿಲುಕಿದ್ರೆ ಕೆಲಸ ಕೊಡಿಸುವ ನೆಪದಲ್ಲಿ ನಿಮ್ಮ ಬಳಿಯೇ ಹಣ ತೆಗೆದುಕೊಂಡು ಮೋಸ ಮಾಡ್ತಾರೆ. ಮೊದಲು ಸೋ ಅಂಡ್ ಸೋ ಕಂಪನಿ ಕನ್ಸ್​ಲ್ಟೆನ್ಸಿ ಎಂದು ಹೇಳಿ ನಿಮಗೆ ಮಲ್ಟಿನ್ಯಾಷನಲ್ ಕಂಪನಿಯಿಂದ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಟ್ರೈನಿಂಗ್ ಚಾರ್ಜಸ್, ಹೀಗೆ ಬೇರೆ ಬೇರೆ ಟ್ರೈನಿಂಗ್ ಫೀ ಕೇಳಿ ನಿಮ್ಮ ಬಳಿ ಇಂತಿಷ್ಟು ಹಣ ತೆಗೆದುಕೊಂಡು ಮೋಸ ಮಾಡುತ್ತಾರೆ. ಈ ಮೂಲಕ ನೀವು ಕೊಟ್ಟ ಹಣಕ್ಕೆ ಕೆಲಸವೂ ಇರಲ್ಲ, ಇತ್ತ ಹಣವೂ ಬರಲ್ಲ. ಈ ಕುರಿತಂತೆ 2018ರಲ್ಲಿ 382 ಪ್ರಕರಣ ದಾಖಲಾದ್ರೆ, 2019 ರಲ್ಲಿ 498 ಪ್ರಕರಣಗಳು ದಾಖಲಾಗಿವೆ.

  • ಸೆಕ್ಸ್ ಸ್ಕ್ಯಾಮ್:

ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿ ನೀವೇನಾದ್ರು ಬ್ಯೂಟಿಫಲ್ ಯುವತಿಯರ ಜೊತೆ ಡೇಟಿಂಗ್ ಮಾಡಲು ಇಚ್ಛಿಸಿದ್ರೆ ನೀವು ಈ ನಂಬರ್​ಗೆ ಕರೆ ಮಾಡಿ ಅಂತ ಮೆಸೇಜ್ ಮಾಡ್ತಾರೆ. ಇದಾದ ಬಳಿಕ ನೀವೇನಾದ್ರು ಕರೆ ಮಾಡಿದ್ರೆ ಒಂದಷ್ಟು ಯುವತಿಯರ ಫೋಟೋ ಕಳಿಸ್ತಾರೆ. ಆ ಫೋಟೋಗೆ ಫಿದಾ ಆಗಿ ಡೇಟಿಂಗ್​ಗೆ ಒಪ್ಪಿಕೊಂಡ್ರೆ, ನಿಮ್ಮ ಬಳಿ ಪ್ರೊಸಿಜರ್ ಟೈಪ್ ಅಂತೆಲ್ಲಾ ಮೋಸ ಮಾಡಿ ಹಣ ತೆಗೆದುಕೊಂಡು ನಿಮಗೆ ಡೇಟಿಂಗ್​ಗೂ ಆಪ್ಶನ್ ಕೊಡದೇ ಲಕ್ಷ ಲಕ್ಷ ಹಣ ಪೀಕ್ತಾರೆ.

  • ಕೆಬಿಸಿ-ಕೌನ್ ಬನೇಗಾ ಕರೋಡ್​ಪತಿ ಸ್ಕ್ಯಾಮ್:

ಫ್ರಾಡರ್ಸ್​ಗಳು ಕೇವಲ ಆನ್ಲೈನ್ ಅಷ್ಟೇ ಅಲ್ಲ, ಟಿವಿ ಶೋಗಳ ಮೂಲಕ ಸಹ ವಂಚಿಸ್ತಾರೆ. ನಿಮ್ಮ ಮೊಬೈಲ್​ಗೆ ನಾವು ಇಂತಿಂತ ಟಿವಿ ಶೋನಿಂದ ಕರೆ ಮಾಡ್ತಿದ್ದೇವೆ. ನೀವು ಲಕ್ಕಿ ಡ್ರಾನಲ್ಲಿ ಹಣ ಗೆದ್ದಿದ್ದೀರಾ ಎಂದು ನಂಬಿಸುತ್ತಾರೆ. ಸರ್ಕಾರಕ್ಕೆ ಇಂತಿಷ್ಟು ಟ್ಯಾಕ್ಸ್​ ಪೇ ಮಾಡಬೇಕು ಎಂದು ಹೇಳಿ ಹಣ ಕೀಳ್ತಾರೆ. ಹೀಗೆ ಟೀಚರ್ ಒಬ್ಬರಿಗೆ ಕರೆ ಮಾಡಿದ ವಂಚಕರು, ನೀವು 30 ಲಕ್ಷ ಹಣ ಗೆದ್ದಿದ್ದೀರಾ. ನೀವು ಈ ಹಣ ವಿತ್​ಡ್ರಾ ಮಾಡಿಕೊಳ್ಳಲು ಇಂತಿಷ್ಟು ಟ್ಯಾಕ್ಸ್ ಪೇ ಮಾಡಬೇಕು ಎಂದು ತಿಳಿಸಿ ಅವರಿಂದ 12 ಲಕ್ಷ ಹಣ ತೆಗೆದುಕೊಳ್ಳುವ ಮೂಲಕ ವಂಚಿಸಿದ್ದಾರೆ.

  • ಕ್ಯಾಶ್ ಬ್ಯಾಕ್ ಸ್ಕ್ಯಾಮ್:

ಇತ್ತೀಚೆಗೆ ಸೈಬರ್ ಕ್ರೈಂನಲ್ಲಿ ಅತಿಹೆಚ್ಚು ಕೇಳಿಬರುತ್ತಿರುವ ಸ್ಕ್ಯಾಮ್ ಅಂದ್ರೆ ಅದು ಕ್ಯಾಶ್​ಬ್ಯಾಕ್​. ಲಕ್ಷ ಲಕ್ಷ ಟ್ರಾನ್ಸ್ಯಾಕ್ಷನ್ ಆಗುವ ಆನ್ಲೈನ್​ನ ಗುರಿಯಾಗಿಸಿಕೊಂಡು ನೀವು ಇಂತಿಷ್ಟು ರಿಚಾರ್ಜ್ ಮಾಡಿಸಿದ್ರಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತೆ ಎಂದು ತಿಳಿಸುತ್ತಾರೆ. ನೀವೇನಾದ್ರು ನಂಬಿ ಮೋಸ ಹೋದ್ರೆ ಅದನ್ನ ಟಾರ್ಗೆಟ್ ಮಾಡಿ ನಿಮಗೆ ಕ್ಯಾಶ್ ಬ್ಯಾಕ್ ಬೇಕಾದಲ್ಲಿ ಅಕೌಂಟ್ ಡೀಟೇಲ್ಸ್ ಹಾಗೂ ಓಟಿಪಿ ಶೇರ್ ಮಾಡಿ ಎಂದು ತಿಳಿಸುತ್ತಾರೆ. ಒಂದು ಶೇರ್​ ಮಾಡಿದ್ರೆ ನಿಮಗೆ ಮೂರು ನಾಮ ಗ್ಯಾರೆಂಟಿ.

  • ಸ್ಕಿಮ್ಮಿಂಗ್ ಹಾಗೂ ಕ್ಲೋನಿಂಗ್ ಸ್ಕ್ಯಾಮ್:

ನಗರದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಅತಿ ದೊಡ್ಡ ಸ್ಕ್ಯಾಮ್ ಅಂದ್ರೆ ಸ್ಕಿಮ್ಮಿಂಗ್ ಹಾಗೂ ಕ್ಲೋನಿಂಗ್ . ನೀವು ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಎಲ್ಲಾ ಕಡೆಯೂ ಎಚ್ಚರದಿದಂದರಬೇಕು. ನಿಮಗೇ ಗೊತ್ತಿಲ್ಲದಂತೆ ಫ್ರಾಡರ್ಸ್​ಗಳು ಎಟಿಎಂ ಮಿಷನ್ ಕೆಳಗೆ ಪಿನ್ ನೋಟ್ ಮಾಡುವ ಪುಟ್ಟ ಮೆಷಿನ್ ಇಟ್ಟಿರ್ತಾರೆ. ನೀವು ಡ್ರಾ ಮಾಡಿಕೊಂಡು ಕ್ಯಾನ್ಸಲ್ ಕೊಡದೇ ಇದ್ದಲ್ಲಿ ಸುಲಭವಾಗಿ ಪಿನ್ ತಿಳಿದಕೊಂಡು, ನಿಮ್ಮ ಅಕೌಂಟ್​ನಲ್ಲಿರುವ ಹಣ ತೆಗೆದುಕೊಳ್ತಾರೆ.

Last Updated : Mar 10, 2020, 6:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.