ಬೆಂಗಳೂರು: ಕ್ರೀಡಾಪಟುಗಳು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈಜುಕೊಳಗಳಿಗೆ ಬರಲಿ ಎಂದು ಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನ್ಲಾಕ್ 5 ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಸ್ವಿಮ್ಮಿಂಗ್ ಪೂಲ್ಗಳಿಗೂ ಅವಕಾಶ ಮಾಡಿಕೊಟ್ಟಿದೆ. ಯಾರಿಗೆ ಸೋಂಕು ಇದೆಯೋ ಅವರು ಈಜುಕೊಳಗಳಿಗೆ ಬರದೇ ಇರುವುದು ಉತ್ತಮ ಎಂದು ಮನವಿ ಮಾಡಿದರು.
ಅನ್ ಲಾಕ್ 5 ಮಾರ್ಗ ಸೂಚಿಯಲ್ಲಿ ಸಿನಿಮಾ ಪ್ರದರ್ಶನಕ್ಕೂ ಅವಕಾಶ ಮಾಡಿ ಕೊಡಲಾಗಿದೆ. ಇಲ್ಲಿ ಕೂಡ ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ ಸಿನೆಮಾ ಥಿಯೇಟರ್ ಆರಂಭಿಸಲು ಅನುಮತಿ ನೀಡಲಾಗಿದೆ. ಇದನ್ನೂ ಕೂಡ ನಾನು ಸ್ವಾಗತಿಸುತ್ತೇನೆ ಎಂದರು.