ETV Bharat / state

C T Ravi: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸಿ.ಟಿ.ರವಿ

C T Ravi: ಕಾಂಗ್ರೆಸ್ ಶಾಸಕರಿಗೆ ಪಕ್ಷದ ಮೇಲೆ ಅಸಮಾಧಾನವಿದೆ. ಲೋಕಸಭಾ ಚುನಾವಣೆಯ ಬಳಿಕ ಸರ್ಕಾರ ಉಳಿಯುತ್ತಾ ಅನ್ನೋ ಪ್ರಶ್ನೆ ಮೂಡಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

Etv Bharat
Etv Bharat
author img

By

Published : Aug 8, 2023, 7:19 PM IST

ಬೆಂಗಳೂರು: "ಕಾಂಗ್ರೆಸ್​ನಲ್ಲಿ ಒಳಬೇಗುದಿ ಹೆಚ್ಚಾಗಿದ್ದು, ಲೋಕಸಭೆ ಚುನಾವಣೆಯ ನಂತರ ಸರ್ಕಾರ ಪತನವಾಗುವ ಲಕ್ಷಣ ಗೋಚರಿಸಿದೆ" ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ತಮ್ಮದೇ ಪಕ್ಷದ ಶಾಸಕರ ಪತ್ರದ ಒಕ್ಕಣೆಯ ಆಧಾರದ ಮೇಲೆ ಸಭೆ ಮಾಡುತ್ತಿದೆ. ಹಾಗಾಗಿ ಶಾಸಕರು ಬರೆದ ಪತ್ರ ನಕಲಿ ಅಲ್ಲ ಅನ್ನೋದು ಸ್ಪಷ್ಟ" ಎಂದರು.

"ಪತ್ರ ಅಸಲಿ ಎಂದು ಒಪ್ಪಿಕೊಂಡಿದ್ದೀರಿ. ಆಡಳಿತ ಪಕ್ಷದ ಶಾಸಕರು ಒಂದು ಟಿಸಿಯನ್ನೂ ಕೊಡಲಾಗ್ತಿಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಶಾಸಕರು ಬರೆದ ಪತ್ರ ನಕಲಿ ಎನ್ನುವುದಾದರೆ ಸರಣಿ ಸಭೆ ಏಕೆ ಬೇಕಿತ್ತು?. ಪತ್ರ ನಕಲಿ ಆಗಿದ್ದರೆ ಆತಂಕಕ್ಕೆ ಒಳಗಾಗಬೇಕಿರಲಿಲ್ಲವಲ್ಲ?. ಹಾಗಾಗಿ, ಅಸಲಿ ಪತ್ರ ಎಂದು ಒಪ್ಪಿಕೊಂಡಂತಾಗಿದೆ. ಶಾಸಕರಿಗೆ ಪಕ್ಷದ ಮೇಲೆ ವಿರೋಧ ಶುರುವಾಗಿದೆ. ನಾನು ಜ್ಯೋತಿಷ್ಯ ಹೆಚ್ಚು ನಂಬಿಲ್ಲ‌. ಇದೇ ರೀತಿಯ ಅಸಹನೆ ಮುಂದುವರೆದರೆ, ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಉಳಿಯುತ್ತಾ ಅನ್ನೋ ಪ್ರಶ್ನೆ ಮೂಡಿದೆ" ಎಂದು ಹೇಳಿದರು.

"ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು 6 ಜನ ಸತ್ತಿದ್ದಾರೆ. ಸರ್ಕಾರಕ್ಕೆ ಚಿಕಿತ್ಸೆ ಕೊಡಲಾಗದಷ್ಟು ಅಸಹಾಯಕತೆ ಇದೆ. ಯಾದಗಿರಿಯಲ್ಲಿ ಕಲುಷಿತ ನೀರು ಅಂತೆಲ್ಲಾ ಬಂದಿತ್ತು. ಚಿತ್ರದುರ್ಗದಲ್ಲಿ ನಿನ್ನೆ 6ನೇ ಬಲಿ ಆಗಿದೆ. ಸರ್ಕಾರ ಎರಡೂವರೆ ತಿಂಗಳಲ್ಲೇ ಜನರ ವಿಶ್ವಾಸ ಕಳೆದುಕೊಂಡಿದೆ‌. ಎರಡೂವರೆ ತಿಂಗಳಲ್ಲಿ ಅಸಹನೆ ವ್ಯಕ್ತವಾಗಿರೋದು ಇದೇ ಮೊದಲು. ಹೀಗೆ ಶಾಸಕರ ಅಸಮಾಧಾನ ಮುಂದುವರಿದರೆ ಸ್ಫೋಟ ಆಗುತ್ತದೆ" ಎಂದು ಭವಿಷ್ಯ ನುಡಿದರು.

ಮಕ್ಕಳಾಟ ಅಂದವರು ಸಿಐಡಿ ತನಿಖೆಗೇಕೆ ಕೊಟ್ಟಿರಿ?: "ಉಡುಪಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಉಡುಪಿ ಶಾಸಕರ ವರದಿ ನೋಡಿದ್ದೇನೆ. ಘಟನೆ ಮುಚ್ಚಿ ಹಾಕುವ ಪ್ರಯತ್ನ ಅಂತ ವರದಿ ನೀಡಿದ್ದಾರೆ. ಇದು ಸಣ್ಣ ವಿಷಯ ಅಂತ ಗೃಹ ಸಚಿವರು ಯಾಕೆ ಹೇಳ್ತಿದ್ರು?. ಮೊದಲು ಇದು ನಡೆದಿಲ್ಲ ಅಂದ್ರಿ. ಎಫ್​ಐಆರ್​ ಹಾಕಿರಲಿಲ್ಲ. ಇದು ಸಣ್ಣ ವಿಷಯ ಅಂದ್ರಿ, ಮಕ್ಕಳಾಟ ಅಂತ ಹೇಳಿದ್ರಿ. ಮೊದಲು ಸುಳ್ಳು ಹೇಳಿದ್ರಿ ಅನ್ನೋ ಕಾರಣಕ್ಕೆ ನಿಮ್ಮ ಮೇಲೆ ಸಂಶಯವಿದೆ. ಅದಾದ ಬಳಿಕ ಸಿಐಡಿ ತನಿಖೆ ಕೊಟ್ಟಿದ್ದಿರಾ. ಯಶ್‌ಪಾಲ್ ಸುವರ್ಣ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಡೆದೇ ಇಲ್ಲ ಎಂದು ಹೇಳಿದವರು ಈಗ ಸಿಐಡಿಗೆ ಕೊಟ್ಟಿದ್ದಾರೆ. ಹಾಗಾಗಿ ಅನುಮಾನ ಮೂಡುತ್ತಿದೆ. ನಿಮ್ಮ ದೃಷ್ಟಿಯಲ್ಲಿ ಇದು ಮಕ್ಕಳಾಟ ಆದರೆ, ಮಕ್ಕಳಾಟವನ್ನು ಏಕೆ ಸಿಐಡಿಗೆ ಕೊಟ್ಟಿರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಹೈಕಮಾಂಡ್ ನಿರ್ಧಾರ ಪ್ರಶ್ನೆ ಮಾಡಲ್ಲ: ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆಯಾಗದ ವಿಚಾರವಾಗಿ ಮಾತನಾಡಿ, ನಾನು ಹೈಕಮಾಂಡ್ ಭೇಟಿಯಾಗಿ ಬಂದಿದ್ದೇನೆ. ಎಲ್ಲರನ್ನೂ ಮಾತನಾಡಿಸಿ ಬಂದಿದ್ದೇನೆ. ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿದ್ದು ಮಾಧ್ಯಮದಲ್ಲಿ ನೋಡಿದೆ. ವರಿಷ್ಠರು ವಿಳಂಬ ಮಾಡಿದ್ದಾರೆ ಅಂದ್ರೆ ಅವರ ಉದ್ದೇಶ ಒಳ್ಳೆಯದೇ ಇರಬಹುದು. ಹೈಕಮಾಂಡ್ ನಿರ್ಧಾರ ಪ್ರಶ್ನೆ ಮಾಡಲ್ಲ ಎಂದರು.

ಇದನ್ನೂ ಓದಿ: Family politics: ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಬೇಡವೆಂದು ಕೇಂದ್ರ, ರಾಜ್ಯ ಸರ್ಕಾರಗಳು ಬಿಲ್ ತರಲಿ: ಹೆಚ್ ಡಿ ರೇವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.