ETV Bharat / state

ನಮ್ಮದು ಜಾತಿ ಪಕ್ಷವಲ್ಲ, ಸಿದ್ದಾಂತದ ಪಕ್ಷ: ಸಿಎಂ ಪರ ನಿಂತ ಮಠಾಧೀಶರಿಗೆ ಸಿ.ಟಿ. ರವಿ ಟಾಂಗ್ - ಸ್ವಾಮೀಜಿಗಳಿಂದ ಬಿಜೆಪಿ ಬಗ್ಗೆ ಹೇಳಿಕೆ

ನಮ್ಮ ಪಕ್ಷದ ಬೆಳವಣಿಗೆಗೆ ನೂರಾರು ಮಠಾಧಿಪತಿಗಳು ಬೆಂಬಲ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ನಾವು ಚುನಾವಣೆಯಲ್ಲಿ 100 ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದು. ನಮ್ಮ ಪಕ್ಷಕ್ಕೆ ಜಾತಿ ಇಲ್ಲ. ಸಿದ್ದಾಂತದ ಪಕ್ಷ ನಮ್ಮದು ಎಂದು ಸಿಎಂ ಪರ ಹೇಳಿಕೆ ನೀಡುತ್ತಿರುವ ಮಠಾಧೀಶರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪರೋಕ್ಷ ಟಾಂಗ್ ನೀಡಿದ್ದಾರೆ

CT Ravi
ಸಿ.ಟಿ ರವಿ
author img

By

Published : Jun 18, 2021, 4:32 PM IST

ಬೆಂಗಳೂರು: ನಮ್ಮ ಪಾರ್ಟಿಗೆ ಯಾವುದೇ ಜಾತಿ ಇಲ್ಲ, ನಮ್ಮ ಪಾರ್ಟಿಗೆ ಇರುವುದು ಸಿದ್ಧಾಂತ ಮಾತ್ರ. ಆ ಸಿದ್ಧಾಂತದ ಆಧಾರದ ಮೇಲೆ ಪಾರ್ಟಿ ಬೆಳೆದಿದೆ ಎಂದು ಸಿಎಂ ಪರ ಹೇಳಿಕೆ ನೀಡುತ್ತಿರುವ ಮಠಾಧೀಶರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪರೋಕ್ಷ ಟಾಂಗ್ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಬೆಳವಣಿಗೆಗೆ ನೂರಾರು ಮಠಾಧಿಪತಿಗಳು ಬೆಂಬಲ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ನಾವು ಚುನಾವಣೆಯಲ್ಲಿ 100 ಕ್ಕು ಹೆಚ್ಚು ಸ್ಥಾನ ಗೆದ್ದಿದ್ದು. ನಮ್ಮ ಪಕ್ಷಕ್ಕೆ ಜಾತಿ ಇಲ್ಲ. ಸಿದ್ದಾಂತದ ಪಕ್ಷ ನಮ್ಮದು. ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುವಾಗ ಹೊಡೆತ ತಿಂದವರು. ನಮ್ಮ ಪಾರ್ಟಿಯಲ್ಲಿ ಎಂಎಲ್ಎ ಇದ್ದದ್ದು ಯಡಿಯೂರಪ್ಪ ಒಬ್ಬರೆ. ನಾನು ಬಾವುಟ ಕಟ್ಟುತ್ತಿದ್ದೆ. ಆಗ ದೇವೇಗೌಡರು ಪಕ್ಷ ಸೇರು ಅಂದಿದ್ದರು. ನಮ್ ಈ ಪಕ್ಷದ ಸಿದ್ದಾಂತ ದೇಶದ ಹಿತವಾಗಿತ್ತು. ಅದಕ್ಕೆ ನಾನು ಬಿಜೆಪಿಗೆ ಬಂದೆ. ನಮಗೆ ಅಧಿಕಾರ ಸಿಕ್ಕಾಗ ಜಾತಿ ಬರುತ್ತೆ. ನಾವು ಜೈಲಿಗೆ ಹೋಗುವಾಗ ಯಾವ ಜಾತಿ ಬರಲಿಲ್ಲ. ಎಲ್ಲ ಜಾತಿಗಳ ಸಹಕಾರ ಇದ್ದರೆ ಮಾತ್ರ ಅಧಿಕಾರ ಇಲ್ಲವಾದರೆ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದರು.

ರಾವಣನ ಹತ್ಯೆ ಮಾಡಿದವನು ರಾಮ. ಅವನು ಬ್ರಾಹ್ಮಣ. ಮಹಾನ್ ದೈವ ಭಕ್ತ. ಆ ಸಿದ್ಧಾಂತದ ಕಾರಣಕ್ಕೆ ಅವನನ್ನ ಆರಾಧಿಸುತ್ತಾರೆ. ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹ ಬಳಿ 30 ಸಾವಿರ ಬ್ಯಾಲೆನ್ಸ್ ಇತ್ತು. ಅವರನ್ನ ಕರೆದು ಸಂಸದರನ್ನಾಗಿ ಮಾಡಿದೆವು. ನಾನು ಸಾಮಾನ್ಯ ಕಾರ್ಯಕರ್ತ. ಪ್ರಹ್ಲಾದ್ ಜೋಶಿ, ಈಶ್ವರಪ್ಪನವರು ಸಾಮಾನ್ಯ ಕಾರ್ಯಕರ್ತರೇ, ಯಡಿಯೂರಪ್ಪನವರು ಸಾಮಾನ್ಯ ಕಾರ್ಯಕರ್ತರೇ ಎಂದರು.

ರಾಜ್ಯದ ಹಿತಾಸಕ್ತಿ, ಪಕ್ಷದ ಹಿತದೃಷ್ಟಿಯಿಂದ ಚರ್ಚೆ ನಡೆಸುತ್ತೇವೆ. ಎಲ್ಲಾ ವಿಚಾರಗಳನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡಲು ಆಗಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿ ಒಳಿತು-ಕೆಡುಕು ಚರ್ಚೆ ಮಾಡುತ್ತೇವೆ. ಸಂಪುಟ ಪುನರ್ ರಚನೆ ವಿಚಾರಕ್ಕೆ ಸಿಎಂಗೆ ಪರಮಾಧಿಕಾರ ಇದೆ. ನಾವು ಪಕ್ಷದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.