ETV Bharat / state

ಟ್ವಿಟರ್​ನಲ್ಲಿ ಪೇ ಸಿಎಂ ಬಳಿಕ ’ಕ್ರೈ‘ಪಿಎಂ ಟ್ರೆಂಡಿಂಗ್​: ರಾಜಕೀಯ ಅಖಾಡದಲ್ಲಿ ಜೋರಾದ ಏಟು- ಎದಿರೇಟು

ಚುನಾವಣಾ ಅಖಾಡದಲ್ಲಿ ಏಟು - ಎದಿರೇಟು ಜೋರಾಗಿದೆ. ತಮ್ಮನ್ನು ವೈಯಕ್ತಿಕವಾಗಿ ಟೀಕಿಸಿದ ಕಾಂಗ್ರೆಸ್​ ಅನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡರೆ, ಇದಕ್ಕೆ ಕಾಂಗ್ರೆಸ್​ ಕೂಡ ತಿರುಗೇಟು ನೀಡಿದೆ.

ಟ್ವಿಟರ್​ನಲ್ಲಿ ಪೇ ಸಿಎಂ ಬಳಿಕ ಕ್ರೈ ಪಿಎಂ ಟ್ರೆಂಡಿಂಗ್​

author img

By

Published : May 1, 2023, 2:38 PM IST

ಬೆಂಗಳೂರು: ಕಾಂಗ್ರೆಸ್ ನಾಯಕರು ತಮ್ಮ ಮೇಲೆ 91 ಬಾರಿ ವೈಯಕ್ತಿಕ ನಿಂದನೆಯ ಟೀಕೆಗಳನ್ನು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗೇಲಿ ಮಾಡಿದ ನಂತರ ಕ್ರೈಪಿಎಂ, ಪೇಸಿಎಂ ಹ್ಯಾಶ್​ಟ್ಯಾಗ್​ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದೆ.

ಭಾನುವಾರದಂದು(ಏಪ್ರಿಲ್​ 30) ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಾಗಿ 91 ಬಾರಿ ಕಾಂಗ್ರೆಸ್ ತನ್ನನ್ನು ಅವಹೇಳನ ಮಾಡಿದೆ ಎಂಬ ಮಾತನ್ನು ಆಡಿ, ಭಾವುಕರಾಗಿದ್ದಾರೆ. ಅದಕ್ಕಿಂತಲೂ ಹೆಚ್ಚು ಬಾರಿ ಗಾಂಧಿ ಕುಟುಂಬದ ನಾಯಕರನ್ನು ಹೀಯಾಳಿಸಲಾಗಿದೆ ಎಂದು ತಿರುಗೇಟು ನೀಡಿದ್ದರು.

ಸಾರ್ವಜನಿಕ ಜೀವನದಲ್ಲಿ ಇಂತಹ ದಾಳಿಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕಿದ್ದ ಪ್ರಧಾನಿಗಳು ಗಂಭೀರವಾಗಿ ತೆಗೆದುಕೊಂಡು ಭಾವುಕರಾಗಿದ್ದಾರೆ. ದೇಶಕ್ಕಾಗಿ ಗುಂಡೇಟು ಎದುರಿಸಲು ಸಹ ಸಿದ್ಧ ಎಂದು ಹೇಳಿರುವ ರಾಹುಲ್​ ಗಾಂಧಿ ಅವರಿಂದ ಪ್ರಧಾನಿ ಕಲಿಯಬೇಕಾದ ಅಂಶ ಸಾಕಷ್ಟಿದೆ ಎಂದಿದ್ದರು. ಮೋದಿಯವರ ಮೌಖಿಕ ನಿಂದನೆಯ ಬಗ್ಗೆ ಪ್ರಿಯಾಂಕಾ ಉಲ್ಲೇಖಿಸಿದ ಬಳಿಕ, #CryPMPayCM ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿ ಮಾರ್ಪಟ್ಟಿದೆ. ಇದೇ ವಿಚಾರವನ್ನು ಇರಿಸಿಕೊಂಡು ಕಾಂಗ್ರೆಸ್ ನಾಯಕರು ಹಾಗೂ ಅನುಯಾಯಿಗಳು, ಅಭಿಮಾನಿಗಳು ಟ್ವಿಟರ್​ನಲ್ಲಿ 'CryPMPayCM' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಮೀಮ್‌ಗಳು, ವಿಡಿಯೋಗಳು ಮತ್ತು ಮಾಧ್ಯಮ ವರದಿಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

ಬಳಕೆದಾರರಲ್ಲಿ ಒಬ್ಬರು, "ಕ್ರೈ ಪಿಎಂ ಇಲ್ಲದೆ ಪೇ ಸಿಎಂ ಅಪೂರ್ಣವಾಗಿದ್ದರು. ಬಿಜೆಪಿಯ ಫ್ಲಾಪ್ ಶೋ ಈಗ ಪೂರ್ಣಗೊಂಡಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ಪ್ರಿಯಾಂಕಾ ಗಾಂಧಿ, ಮೋದಿಗೆ ಉತ್ತಮ ಶೈಲಿಯಲ್ಲಿ ಕೌಂಟರ್ ನೀಡಿದ್ದಾರೆ ಎಂದು ಹೇಳಿದರು.

ಮೋದಿ ಏನು ಹೇಳಿದ್ದರು?: ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ವಿಷಪೂರಿತ ಹಾವು’ ಟೀಕೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಅನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು. ಇಲ್ಲಿಯವರೆಗೆ ಕಾಂಗ್ರೆಸ್​ ಪಕ್ಷ ಮತ್ತು ಅದರ ನಾಯಕರು ತಮ್ಮ ಮೇಲೆ ಬರೋಬ್ಬರಿ 91 ಬಾರಿ ವಿವಿಧ ರೀತಿಯ ನಿಂದನೆಗಳನ್ನು ಮಾಡಿದ್ದಾರೆ ಎಂದು ಹೇಳಿದ್ದರು.

ಇದಕ್ಕೆ ಬಾಗಲಕೋಟೆಯಲ್ಲಿ ಮಾರನೇ ದಿನ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕಾ ಗಾಂಧಿ ನಾವು ನಿಮ್ಮ ಮೇಲೆ ಮಾಡಿದ 91 ನಿಂದನೆಗಳನ್ನು ಒಂದು ಪುಟದಲ್ಲಿ ಸರಿಹೊಂದಿಸಬಹುದು. ಆದರೆ, ನೀವು ನಮ್ಮ ಕುಟುಂಬಕ್ಕೆ ಮಾಡಿದ ನಿಂದನೆಗಳನ್ನು ನೋಡಿದರೆ ಮತ್ತು ಅದನ್ನು ನಾವು ಪಟ್ಟಿ ಮಾಡಲು ಪ್ರಾರಂಭಿಸಿದರೆ ಪುಸ್ತಕವೇ ಆಗಲಿದೆ ಎಂದಿದ್ದರು.

ಟ್ರೆಂಡ್​ ಆಗಿದ್ದ ಪೇಸಿಎಂ: ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್​​ ಆರೋಪ ಮಾಡಿದ್ದ ಕಾಂಗ್ರೆಸ್​ ಪೇ ಸಿಎಂ ಪೋಸ್ಟರ್​ ಹಾಕಿ ಟೀಕೆ ಮಾಡಿತ್ತು. ಇದು ರಾಜ್ಯದಲ್ಲಿ ಸಂಚಲನ ಕೂಡ ಮೂಡಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಇದು ಜನಪ್ರಿಯತೆ ತಂದುಕೊಟ್ಟರೆ, ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಉತ್ತಮ ಟ್ರೆಂಡ್ ಪಡೆದಿತ್ತು. ಇದೀಗ ಕ್ರೈ ಪಿಎಂ ಸೇರಿಕೊಂಡಿದ್ದು, ಎರಡೂ ಸಹ ಮತ್ತೆ ಟ್ರೆಂಡಿಂಗ್​ ಸೃಷ್ಟಿಸಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸಹ ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.

ಓದಿ: ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್​​ನ 'ಪೇ ಸಿಎಂ' ಅಭಿಯಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.