ಆನೇಕಲ್ (ಬೆಂಗಳೂರು): ತಾಲೂಕಿನ ಹುಲಿಮಂಗಲ ಸುತ್ತ ನೂರಾರು ಮಂದಿಗೆ ಸುಳ್ಳು ದಾಖಲೆ ಸೃಷ್ಟಿಸಿ, ವಂಚಿಸಿದ್ದ ಶಾಂತಿಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಕುಮಾರ್.ವಿ ನನ್ನು ಬಂಧಿಸುವಲ್ಲಿ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ಸಪೆಕ್ಟರ್ ಐಎನ್ ರೆಡ್ಡಿ ಡಿವೈಎಸ್ಪಿ ಲಕ್ಷ್ಮೀ ನಾರಾಯಣ್ ಸೂಚನೆಯಂತೆ ಆರೋಪಿಯನ್ನು ಕಳೆದೆರೆಡು ದಿನಗಳ ಹಿಂದೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮತ್ತೆ ವಿಚಾರಣೆಗೆ ಕರೆತಂದು ಜೈಲಿಗೆ ಕಳುಹಿಸಿದ್ದಾರೆ.
ಒಂದೇ ನಿವೇಶನವನ್ನು ಹಲವಾರು ಮಂದಿಗೆ ನೋಂದಾಯಿಸಿ ವಂಚಿಸುತ್ತಿದ್ದ ಮೋಸ ಹೋದ ನೊಂದವರ ನಿವೇಶನದಲ್ಲಿ ಬೇರೆಯವರು ಕಟ್ಟಡ ಕಟ್ಟಿದರೆ ಇನ್ನೊಂದು ನಿವೇಶನ ಕಟ್ಟಿಸಿಕೊಡುವ ಭರವಸೆ ನೀಡಿ ಯಾಮಾರಿಸುತ್ತಿದ್ದನಂತೆ. ಈ ಕುರಿತಂತೆ ಇಲ್ಲಿಯವರೆಗೆ 12 ವಂಚನೆ ಪ್ರಕರಣಗಳು ಜಯಕುಮಾರ್ ಮೇಲೆ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು 32 ಮಂದಿ ಹೆಬ್ಬಗೋಡಿ ಠಾಣೆಗೆ ಈತನ ಮೇಲೆ ದೂರು ನೀಡಲು ಸಿದ್ಧರಿದ್ದು ನಾಳೆಯಿಂದಲೇ ಹಲವು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Hassan Crime: ಜಗಳ ಬಿಡಿಸಲು ಬಂದ ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆಯೇ ಮಾರಣಾಂತಿಕ ಹಲ್ಲೆ : ಇಬ್ಬರು ವಶಕ್ಕೆ
ಬೆಳಗಾವಿಯಲ್ಲಿ ವಿಚಿತ್ರ ಪ್ರಕರಣ ಒಂದು ಬೆಳಕಿಗೆ ಬಂದಿದೆ. ವಿಚ್ಛೇದನ ಕೊಟ್ಟು 15 ದಿನ ಕಳೆದ ನಂತರ ಪತ್ನಿಯನ್ನು ಕೊಲೆ ಮಾಡಲು ನಾಡ ಪಿಸ್ತೂಲು ಖರೀದಿಸಿದ್ದು ತಿಳಿದುಬಂದಿದೆ. ಪತಿಯ ಅನುಮಾನಾಸ್ಪದ ನಡತೆಯಿಂದ ಅನುಮಾನಗೊಂಡು ವಿಚಾರಿಸಿದಾಗ ಪತ್ನಿಯ ಕೊಲೆ ಮಾಡಲು ಹಾಕಿಕೊಂಡಿದ್ದ ಯೋಜನೆ ಬಯಲಾಗಿದೆ.
ಕೊಲೆ ಮಾಡುವ ಉದ್ದೇಶದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪವಾಡ ಗ್ರಾಮದಲ್ಲಿ ನಾಡ ಪಿಸ್ತೂಲ್ ಖರೀದಿ ಮಾಡಿದ್ದ ಎಂಬುದು ತಿಳಿದು ಬಂದಿದೆ. ಗಾಂಧಿ ಚೌಕ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಪತ್ನಿ ಹರ್ಷಿತಾಳನ್ನು ಹತ್ಯೆ ಮಾಡಲು ರಿವಾಲ್ವರ್ ಖರೀದಿಸಿದ್ದಾಗಿ ಹೇಳಿದ್ದಾನೆ ಎಂದು ಸಾಂಗ್ಲಿ ಎಸ್ಪಿ ಬಸವರಾಜ ತೇಲಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ನ್ನು ಬಳಸಿ- ಅನುಮಾನದ ಗುಮ್ಮ.. ವಿಚ್ಛೇದಿತ ಪತ್ನಿ ಹತ್ಯೆಗೆ ನಾಡ ಪಿಸ್ತೂಲು ಖರೀದಿಸಿದ್ದ ವ್ಯಕ್ತಿಯ ಬಂಧನ
ಮಂಡ್ಯದಲ್ಲಿ ಇಂದು ನೋಟಿನ ನಡುವೆ ಖಾಲಿ ಕಾಗದ ಇಟ್ಟು ವಂಚನೆ ಎಸಗಲು ಪ್ರಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಥಳಿಸಿದ್ದಾರೆ. ಮಂಡ್ಯದ ಕಾಳೇನಹಳ್ಳಿ ಗ್ರಾಮದ ಉಮೇಶ್ ಎಂಬುವರು ತಮ್ಮ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಇದನ್ನು ಮಂಡ್ಯ ನಗರದ ಸಬ್ಬರಿಯಬಾದ್ ನಿವಾಸಿ ಸಯ್ಯದ್ ಆರುನ್ ತಮೀಮ್ ಎಂಬ ವ್ಯಕ್ತಿ ಖರೀದಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಹೀಗಾಗಿ, ಶುಕ್ರವಾರ ನಗರದ ಉಪ ನೊಂದಣಿ ಕಚೇರಿಗೆ ಎರಡೂ ಕಡೆಯವರು ಆಗಮಿಸಿದ್ದರು. ಈ ವೇಳೆ, ಮೊದಲೇ ಮಾತುಕತೆ ನಡೆಸಿದಂತೆ ಸಯ್ಯದ್ ಆರುನ್, ನೋಂದಣಿ ಬಳಿಕ 30 ಲಕ್ಷ ಹಣ ಕೊಡೋದಾಗಿ ಹೇಳಿ ನೋಟಿನ ಮಧ್ಯೆ ಬಿಳಿ ಹಾಳೆಯ ಕಂತೆಯನ್ನು ಇಟ್ಟು ಯಾಮಾರಿಸಿದ್ದಾರೆ. ಹೆಚ್ಚಿನ ಓದಿಗೆ ಲಿಂಕ್ ಅನುಸರಿಸಿ